For Quick Alerts
ALLOW NOTIFICATIONS  
For Daily Alerts

ಈ ಕಂಪೆನಿಯಲ್ಲಿ ವಾರದಲ್ಲಿ 4 ದಿನದ ಕೆಲಸ; ಹೀಗೆ ಒಂದು ವರ್ಷ ಪ್ರಯೋಗ

|

ಯುನಿಲಿವರ್ ನ್ಯೂಜಿಲ್ಯಾಂಡ್ ನಿಂದ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನದ ಕೆಲಸ ಮತ್ತು ಯಾವುದೇ ವೇತನ ಕಡಿತ ಮಾಡದಿರುವ ಪದ್ಧತಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ಮಂಗಳವಾರ ಕಂಪೆನಿ ತಿಳಿಸಿದೆ. ಕಂಪೆನಿಯ 81 ಸಿಬ್ಬಂದಿಯೂ ಈ ಪ್ರಯೋಗದಲ್ಲಿ ಇಡೀ ವರ್ಷ ಭಾಗವಹಿಸುವುದಕ್ಕೆ ಅರ್ಹರು. ಈ ಪ್ರಯೋಗವನ್ನು ಜಾಗತಿಕವಾಗಿ ಅಳವಡಿಸಿಕೊಳ್ಳುವ ಆಲೋಚನೆ ಇದೆ ಎನ್ನಲಾಗಿದೆ.

"ನಮ್ಮ ಗುರಿ ಇರುವುದು ಉತ್ಪಾದನೆ ಯಾವ ಪ್ರಮಾಣದಲ್ಲಿ ಆಗುತ್ತದೆ ಎಂಬ ಬಗ್ಗೆಯೇ ವಿನಾ ಸಮಯ ಅಲ್ಲ. ಕೆಲಸ ಮಾಡುವ ಹಳೇ ಪದ್ಧತಿಯು ಈಗ ಪ್ರಸ್ತುತ ಅಲ್ಲ ಎಂದು ನಾವು ಭಾವಿಸುತ್ತೇವೆ ಮತ್ತು ನಮ್ಮ ಉದ್ದೇಶಕ್ಕೆ ಇದು ಸರಿಹೊಂದುವುದಿಲ್ಲ," ಎಂದು ಯುನಿಲಿವರ್ ಮ್ಯಾನೇಜಿಂಗ್ ಡೈರೆಕ್ಟರ್ ನಿಕ್ ಬ್ಯಾಂಗ್ಸ್ ಹೇಳಿದ್ದಾರೆ.

ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ನೀಡುವುದರ ಅಪಾಯ ತೆರೆದಿಟ್ಟ ನಾಡೆಲ್ಲಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ನೀಡುವುದರ ಅಪಾಯ ತೆರೆದಿಟ್ಟ ನಾಡೆಲ್ಲ

ನ್ಯೂಜಿಲ್ಯಾಂಡ್ ಆರ್ಥಿಕತೆಗೆ ವೇಗ ನೀಡುವ ಉದ್ದೇಶದಿಂದ ವಾರದಲ್ಲಿ ನಾಲ್ಕು ದಿನಗಳ ಕೆಲಸಕ್ಕೆ ಬದಲಾವಣೆ ಮಾಡಿಕೊಳ್ಳುವುದು ಸಹಾಯ ಆಗುತ್ತದೆ ಎಂದು ಕಳೆದ ಮೇ ತಿಂಗಳಲ್ಲೇ ಪ್ರಧಾನಿ ಜಸಿಂಡಾ ಆರ್ಡೆರ್ನ್ ಹೇಳಿದ್ದರು.

ಈ ಕಂಪೆನಿಯಲ್ಲಿ ವಾರದಲ್ಲಿ 4 ದಿನದ ಕೆಲಸ; ಹೀಗೆ ಒಂದು ವರ್ಷ ಪ್ರಯೋಗ

ಕೊರೊನಾ ಬಿಕ್ಕಟ್ಟಿನ ನಂತರ ಕಚೇರಿ ಸಂಸ್ಕೃತಿಯಲ್ಲಿ ಬದಲಾವಣೆ ಆಗಿರುವುದರಿಂದ ಕಡಿಮೆ ಅವಧಿಯ ಉದ್ಯೋಗದ ವಾರದ ಪದ್ಧತಿ ಹೆಚ್ಚಾಗುತ್ತಿದೆ ಎಂದು ಬ್ಯಾಂಗ್ಸ್ ಹೇಳಿದ್ದಾರೆ.

ಸಿಬ್ಬಂದಿಯ ಉತ್ಪಾದಕತೆ ಹೆಚ್ಚಾಗಲಿದೆ ಮತ್ತು ಆರೋಗ್ಯ ಉತ್ತಮಗೊಳ್ಳುವುದಕ್ಕೂ ಇದರಿಂದ ನೆರವಾಗುತ್ತದೆ. ಈ ಬದಲಾವಣೆ ಸಲೀಸಾಗಲಿ ಎಂಬ ಕಾರಣಕ್ಕೆ ಹೊಸ ಪ್ರಾಜೆಕ್ಟ್ ಮ್ಯಾಜೇಜ್ ಮೆಂಟ್ ಸಾಫ್ಟ್ ವೇರ್ ಗೆ ಬದಲಾಗಲಿದ್ದೇವೆ ಎಂದು ಕಂಪೆನಿಯು ತಿಳಿಸಿದೆ. ಇನ್ನು ಈ ರೀತಿಯ ವಾರದಲ್ಲಿ ನಾಲ್ಕು ದಿನದ ಕೆಲಸದ ಪ್ರಯೋಗವು ಈ ವರ್ಷದ ಡಿಸೆಂಬರ್ ನಿಂದ ಮುಂದಿನ ವರ್ಷದ ಡಿಸೆಂಬರ್ ತನಕ ನಡೆಯಲಿದೆ ಎಂದು ತಿಳಿಸಲಾಗಿದೆ.

English summary

Unilever New Zealand Trail 4 Day Work Week Trial To Employees For One Year

Unilever New Zealand Tuesday said that, it would trail 4 day work trail to employees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X