ಮುಂಬರುವ ಕೇಂದ್ರ ಬಜೆಟ್ 2020ರಲ್ಲಿ ಚಿನ್ನದ ಆಮದಿನ ಮೇಲಿನ ಸೀಮಾ ಸುಂಕ (ಕಸ್ಟಮ್ಸ್ ಡ್ಯೂಟಿ) ಇಳಿಕೆ ಮಾಡಬಹುದು ಎಂಬ ನಿರೀಕ್ಷೆಯನ್ನು ವರ್ಲ್ದ್ ಗೋಲ್ಡ್ ಕೌನ್ಸಿಲ್ ವ್ಯಕ್ತಪಡಿಸಿದೆ. ಪ್ರಮುಖ ಮಾಧ್ಯಮಗಳ ವರದಿ ಪ್ರಕಾರ, ಈಗ ಇರುವ 12.5 ಪರ್ಸೆಂಟ್ ಅನ್ನು ಈ ಹಿಂದೆ ಇದ್ದ 10 ಪರ್ಸೆಂಟ್ ಗೆ ಇಳಿಸಬಹುದು ಎನ್ನಲಾಗುತ್ತಿದೆ. ಇದರಿಂದ ಕಾನೂನುಬಾಹಿರ ಚಿನ್ನದ ಸಾಗಣೆಗೂ ಕಡಿವಾಣ ಬೀಳಬಹುದು ಎಂಬ ಮಾತಿದೆ.
ದೇಶದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲೇ ಚಿನ್ನದ ಮೇಲಿನ ಹೂಡಿಕೆಗೆ 20 ಪರ್ಸೆಂಟ್ ರಿಟರ್ನ್ಸ್ ಬಂದಿದೆ. ಈಚೆಗೆ ವಿಧಿಸಿದ್ದ ಚಿನ್ನದ ಅಮದು ಸುಂಕವನ್ನು ಮುಂಬರುವ ಬಜೆಟ್ ನಲ್ಲಿ ಇಳಿಸಿದರೆ ಬಹಳ ಸಂತೋಷವಾಗುತ್ತದೆ. ಹೀಗೆ ಸುಂಕ ಇಳಿಸುವುದರಿಂದ ಕಾನೂನುಬಾಹಿರವಾದ ಚಿನ್ನದ ವ್ಯವಹಾರ ಕಡಿಮೆ ಆಗುತ್ತದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಹೇಳಿದ್ದಾರೆ.
ಆಮದು ಸುಂಕ ಹೆಚ್ಚು ಮಾಡುವುದರಿಂದ ಕಾನೂನುಬದ್ಧವಾಗಿ ವ್ಯವಹಾರ ಮಾಡುವವರಿಗೆ ಶಿಕ್ಷೆ ವಿಧಿಸಿದಂತೆ ಆಗುತ್ತದೆ. ಆಮದು ಸುಂಕ ಇಳಿಸುವುದರಿಂದ ಒಟ್ಟಾರೆ ಮಾರುಕಟ್ಟೆಗೂ ಒಳ್ಳೆಯದು. ಸಾಮಾಜಿಕವಾಗಿಯೂ ಒಳ್ಳೆ ನಡವಳಿಕೆಗೆ ಬೆಂಬಲಿಸಿದಂತೆ ಆಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಚಿನ್ನದ ಆಮದು ಸುಂಕವನ್ನು ಇಳಿಸಿದರೆ ಸರ್ಕಾರದ ಆದಾಯಕ್ಕೂ ಹೊಡೆತ ಬಿದ್ದಂತಾಗುತ್ತದೆ. ಈಗಾಗಲೆ ಜಿಡಿಪಿ ದರ ಐದು ಪರ್ಸೆಂಟ್ ಗೆ ಇಳಿದು, ಹನ್ನೊಂದು ವರ್ಷದ ಕನಿಷ್ಠ ಮಟ್ಟದಲ್ಲಿದೆ.
More From GoodReturns

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?



Click it and Unblock the Notifications