ಮೋಟಾರು ವಾಹನ ದಾಖಲಾತಿಗಳಾದ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್ ಅಥವಾ ಡಿ.ಎಲ್.), ರಿಜಿಸ್ಟ್ರೇಷನ್ ಪ್ರಮಾಣಪತ್ರ (ಆರ್.ಸಿ.) ಮತ್ತು ಪರ್ಮಿಟ್ ಗಳ ಮಾನ್ಯತೆಯನ್ನು ಮಾರ್ಚ್ 31, 2021ರ ತನಕ ಕೇಂದ್ರ ಸಾರಿಗೆ ಸಚಿವಾಲಯವು ಭಾನುವಾರದಂದು ವಿಸ್ತರಣೆ ಮಾಡಿದೆ. ಕೊರೊನಾವನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರ ಮಾಡಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಈ ಹಿಂದೆ ಅಧಿಸೂಚನೆ ಹೊರಡಿಸಿ, ಮಾರ್ಚ್ 30, 2020, ಜೂನ್ 9, 2020 ಹಾಗೂ ಆಗಸ್ಟ್ 24, 2020ರಂದು ಮೋಟಾರು ವಾಹನ ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮ, 1989ರ ಅನ್ವಯ ದಾಖಲಾತಿಗಳ ಅವಧಿ ವಿಸ್ತರಣೆಗೆ ಅವಕಾಶ ನೀಡಲಾಗಿತ್ತು.
ಈ ಹಿಂದಿನ ವಿವಿಧ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಫಿಟ್ ನೆಸ್ ಮಾನ್ಯತೆ, ಪರ್ಮಿಟ್ (ಎಲ್ಲ ಬಗೆಯದು), ಲೈಸೆನ್ಸ್, ನೋಂದಣಿ ಅಥವಾ ಇತರ ಸಂಬಂಧಪಟ್ಟ ದಾಖಲಾತಿಗಳನ್ನು ಡಿಸೆಂಬರ್ 31, 2020ರ ತನಕ ಮಾನ್ಯ ಮಾಡಲಾಗುವುದು ಎನ್ನಲಾಗಿತ್ತು.

ಇದೀಗ ಹೊರಡಿಸಿದ ಮಾಹಿತಿಯಂತೆ, ಕೊರೊನಾ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಮೇಲ್ಕಂಡ ದಾಖಲಾತಿಗಳು ಫೆಬ್ರವರಿ 1, 2020ರ ನಂತರ ಅವಧಿ ಮುಕ್ತಾಯ ಆದ ದಾಖಲಾತಿಗಳಿದ್ದಲ್ಲಿ ಅವುಗಳ ಮಾನ್ಯತೆ ಮಾರ್ಚ್ 31, 2021ರ ತನಕ ವಿಸ್ತರಣೆ ಮಾಡಲಾಗಿದೆ. ಎಲ್ಲ ರಾಜ್ಯ ಸರ್ಕಾರಗಳು ಈ ಸೂಚನೆಯನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.


Click it and Unblock the Notifications