ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿ ಸೇರಿದಂತೆ ವರ್ಚುವಲ್ ಡಿಜಿಟಲ್ ಅಸೆಟ್ (ವಿಡಿಎ) ವಹಿವಾಟನ್ನು ಮನಿ ಲಾಂಡರಿಂಗ್ ಕಾಯ್ದೆಯಡಿಯಲ್ಲಿ ತರಲು ನಿರ್ಧಾರ ಮಾಡಿದೆ. ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) 2002ರ ಅಡಿಯಲ್ಲಿ ಕ್ರಿಪ್ಟೋವನ್ನು ತರಲು ಕೇಂದ್ರ ತೀರ್ಮಾನಿಸಿದೆ. ವರ್ಚುವಲ್ ಡಿಜಿಟಲ್ ಅಸೆಟ್ ಎಂದರೆ ಕೋಡ್ ಅಥವಾ ನಂಬರ್ ಅಥವಾ ಟೋಕನ್ ಆಗಿದೆ. ಈ ಬಗ್ಗೆ ಅಧಿಕ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಮಾಹಿತಿ ಪ್ರಕಾರ ಕ್ರಿಪ್ಟೋ ಟ್ರೇಡಿಂಗ್, ಸೇಫ್‌ಕೀಪಿಂಗ್ ಮತ್ತು ಸಂಬಂಧಿತ ಹಣಕಾಸು ಸೇವೆ ಮನಿ ಲಾಂಡರಿಂಗ್ ವಿರೋಧಿ ಕಾನೂನು ಅನ್ವಯವಾಗಲಿದೆ. ಹೊಸ ನಿಯಮಗಳ ಹೇರಿಕೆಯೊಂದಿಗೆ, ಭಾರತೀಯ ಕ್ರಿಪ್ಟೋ ವಿನಿಮಯ ಕೇಂದ್ರಗಳು ಅನುಮಾನಾಸ್ಪದ ಚಟುವಟಿಕೆಯನ್ನು ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಇಂಡಿಯಾ (FIU-IND) ಗೆ ವರದಿ ಮಾಡಬೇಕಾಗುತ್ತದೆ.

"ಎಕ್ಸ್‌ಚೇಂಜ್ ಮತ್ತು ವರ್ಚುವಲ್ ಡಿಜಿಟಲ್ ಅಸೆಟ್ ಮತ್ತು ಫಿಯೆಟ್ ಕರೆನ್ಸಿಗಳ ನಡುವಿನ ವಿನಿಮಯವು ಒಂದು ಅಥವಾ ಹೆಚ್ಚಿನ ರೀತಿಯ ವರ್ಚುವಲ್ ಡಿಜಿಟಲ್ ಸ್ವತ್ತುಗಳ ನಡುವೆ ವಿನಿಮಯ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ಸುರಕ್ಷತೆ ಅಥವಾ ನಿರ್ವಹಣೆ ಅಥವಾ ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ ನಿಯಂತ್ರಣವನ್ನು ಸಕ್ರಿಯಗೊಳಿಸುವ ಸಾಧನಗಳು ಈ ಕಾನೂನಿನಡಿಯಲ್ಲಿ ಸೇರುತ್ತದೆ," ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಸುತ್ತೋಲೆ ಹೊರಡಿಸಿದ್ದ ಸಿಬಿಡಿಟಿ
ಈ ಹಿಂದೆ ಜುಲೈ 1, 2022 ರಿಂದ ಜಾರಿಗೆ ಬರಲಿರುವ ಹೊಸ ಸೆಕ್ಷನ್ 194S ಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ತೊಡೆದು ಹಾಕಲು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ (ಸಿಬಿಡಿಟಿ) ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹಣಕಾಸು ಕಾಯಿದೆ 2022 ರ ಮೂಲಕ ಆದಾಯ ತೆರಿಗೆ ಕಾಯಿದೆಯಲ್ಲಿ ವಿಭಾಗ 194S ಅನ್ನು ಸೇರಿಸಲಾಯಿತು. ಇದು ಕ್ರಿಪ್ಟೋ ಮತ್ತು ಇತರ ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯ ಮೇಲೆ ಶೇಕಡ ಒಂದು ಟಿಡಿಎಸ್ ಅನ್ನು ಕಡಿತಗೊಳಿಸುವುದು ಕಡ್ಡಾಯವಾಗಿದೆ.
ದೇಶದಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ನಿಷೇಧ ಮಾಡಲಾಗುತ್ತದೆಯೇ ಎಂಬ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಈ ನಡುವೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿತ್ತು. ಸುತ್ತೋಲೆಯ ಪ್ರಕಾರ, ಈ ಸಂದರ್ಭದಲ್ಲಿ ವಿನಿಮಯದ ವೇಳೆ ಟಿಡಿಎಸ್ ಅನ್ನು ಕಡಿತ ಮಾಡಲಾಗುತ್ತದೆ. "ಮಾರಾಟಗಾರರಿಗೆ ಕ್ರೆಡಿಟ್ ಮಾಡುವ ಅಥವಾ ಪಾವತಿ ಮಾಡುವ ವಿನಿಮಯದ ಮೊತ್ತದಿಂದ ಮಾತ್ರ ತೆರಿಗೆಯನ್ನು ಕಡಿತ ಮಾಡಬಹುದು," ಎಂದು ಸುತ್ತೋಲೆ ಹೇಳುತ್ತದೆ. "ಬ್ರೋಕರ್ ವಿಡಿಎ ಅನ್ನು ಹೊಂದಿದ್ದರೆ ಅವರೇ ಮಾರಾಟಗಾರರಾಗಿರುತ್ತಾರೆ. ಎಕ್ಸ್‌ಚೇಂಜ್‌ನಿಂದ ಬ್ರೋಕರ್‌ಗೆ ಪಾವತಿ ಮಾಡುವ ಮೊತ್ತವು ಕೂಡಾ ತೆರಿಗೆಗೆ ಒಳಪಡುತ್ತದೆ," ಎಂದು ಸುತ್ತೋಲೆ ಉಲ್ಲೇಖ ಮಾಡಿದೆ.


Click it and Unblock the Notifications