ಸಾಮಾನ್ಯವಾಗಿ ಒಂದು ಹೋಟೆಲ್ ಕಟ್ಟುತ್ತಾರೆ ಅಂದರೆ ಬಹಳ ವರ್ಷಗಳ ಕಾಲ ಅದು ಉಳಿಯಲಿ ಎಂಬ ಕಾರಣಕ್ಕೆ ನಿರ್ಮಾಣ ಮಾಡುತ್ತಾರೆ. ಆದರೆ ಈ ವಿಶ್ವದಲ್ಲಿ ಇಂಥದ್ದೊಂದು ಒಂದು ಹೋಟೆಲ್ ಇದೆ. ಪ್ರತಿ ವರ್ಷ ನಿರ್ಮಾಣ ಮಾಡುತ್ತಾರೆ. ಆ ನಂತರ ಬೇಸಿಗೆ ಬರುತ್ತಿದ್ದ ಹಾಗೆ ಅದು ಕರಗಿ ಹೋಗುತ್ತದೆ.
ಈ ಹೋಟೆಲ್ ಬಗ್ಗೆ ತಿಳಿದುಕೊಂಡರೆ ಖಂಡಿತಾ ನಿಮಗೆ ಅಚ್ಚರಿಯಾಗುತ್ತದೆ. ಈ ವಿಶಿಷ್ಟ ಹೋಟೆಲ್ ಇರುವುದು ಸ್ವೀಡನ್ ನಲ್ಲಿ. ಇದನ್ನು ಐಸ್ ಹೋಟೆಲ್ ಅಂತ ಕೂಡ ಕರೆಯುತ್ತಾರೆ. ಈ ಸ್ವೀಡನ್ ನ ಹೋಟೆಲ್ ಅನ್ನು ಪ್ರತಿ ವರ್ಷದ ಚಳಿಗಾಲದಲ್ಲಿ ನಿರ್ಮಾಣ ಮಾಡುತ್ತಾರೆ. ಅದು ಐದು ತಿಂಗಳ ಮಟ್ಟಿಗೆ ಮಾತ್ರ. ಆ ನಂತರ ಅದು ಕರಗಿ ಹೋಗುತ್ತದೆ.
ಈ ವಿಶಿಷ್ಟ ಹೋಟೆಲ್ ಅನ್ನು ನಿರ್ಮಾಣ ಮಾಡುವ ಪರಿಪಾಠ 1989ರಿಂದ ಆರಂಭವಾಗಿದೆ. ಸ್ವೀಡನ್ ನಲ್ಲಿ ಇರುವ ಟೋರ್ನೆ ನದಿಯ ದಡದಲ್ಲಿ ಹೋಟೆಲ್ ನಿರ್ಮಾಣ ಆಗುತ್ತದೆ. ಇದಕ್ಕಾಗಿ ನದಿಯಿಂದ 2500 ಟನ್ ಐಸ್ ಅನ್ನು ತೆಗೆದುಕೊಳ್ಳಲಾಗುತ್ತದೆ. ಆ ನಂತರ ಅಕ್ಟೋಬರ್ ತಿಂಗಳಲ್ಲಿ ಹೋಟೆಲ್ ನಿರ್ಮಾಣ ಆರಂಭವಾಗುತ್ತದೆ.

ವಿಶ್ವದ ನಾನಾ ಭಾಗಗಳಿಂದ ಈ ಸ್ಥಳಕ್ಕೆ ಕಲಾವಿದರು ಬಂದು, ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಾರೆ. ಪ್ರತಿ ವರ್ಷವೂ ಪ್ರವಾಸಿಗರಿಗಾಗಿ ಈ ಹೋಟೆಲ್ ನಲ್ಲಿ ಹಲವು ರೂಮ್ ಗಳನ್ನು ಮಾಡಲಾಗುತ್ತದೆ. ಈ ಸಲ 35 ರೂಮ್ ಗಳನ್ನು ನಿರ್ಮಿಸಲಾಗಿದೆ. ಈ ರೂಮ್ ನೊಳಗೆ ಮೈನಸ್ 5 ಡಿಗ್ರಿ ಸೆಲ್ಷಿಯಸ್ ತಾಪಮಾನ ಇರುತ್ತದೆ. ಅಂದ ಹಾಗೆ ಪ್ರತಿ ವರ್ಷ ಈ ಹೋಟೆಲ್ ಗೆ 50 ಸಾವಿರ ಪ್ರವಾಸಿಗರ ಭೇಟಿ ನೀಡುತ್ತಾರೆ.
ಹೊರಗಿನಿಂದಾಗಲೀ ಅಥವಾ ಒಳಗಿನಿಂದಾಗಲೀ ಈ ಹೋಟೆಲ್ ಬಹಳ ಸುಂದರ. ಮೇ ತಿಂಗಳ ತನಕ ಈ ಹೋಟೆಲ್ ಇರುತ್ತದೆ. ಯಾವಾಗ ಮಂಜು ಕರಗಲು ಆರಂಭವಾಗುತ್ತದೋ ಹೋಟೆಲ್ ಬಂದ್. ಈ ಹೋಟೆಲ್ ನಲ್ಲಿ ಒಂದು ರಾತ್ರಿ ಉಳಿದುಕೊಳ್ಳುವುದಕ್ಕೆ 17 ಸಾವಿರ ರುಪಾಯಿಯಿಂದ ಆರಂಭವಾಗಿ 1 ಲಕ್ಷದ ತನಕ ದರ ಇದೆ.
ಹೋಟೆಲ್ ರಚನೆ ಪರಿಸರಸ್ನೇಹಿ. ಸೌರಶಕ್ತಿಯನ್ನು ಮಾತ್ರ ಬಳಸಲಾಗುತ್ತದೆ. ಇಲ್ಲಿ ಐಸ್ ಬಾರ್ ಇದೆ. ಮಕ್ಕಳು ಆಟವಾಡುವುದಕ್ಕೆ ಪ್ರತ್ಯೇಕ ಸ್ಥಳ ಇದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications