For Quick Alerts
ALLOW NOTIFICATIONS  
For Daily Alerts

Unlock 5.0 ಅಕ್ಟೋಬರ್ 1ರಿಂದ ಜಾರಿ: ಮಲ್ಟಿಪ್ಲೆಕ್ಸ್, ಶಾಲೆ ಆರಂಭಕ್ಕೆ ನಿರ್ಬಂಧ ತೆರವು

|

ದೇಶದಾದ್ಯಂತದ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ (ಸೆಪ್ಟೆಂಬರ್ 30, 2020) ಹೊಸ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಕೊರೊನಾವನ್ನು ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಈ ಲಾಕ್ ಡೌನ್ ಮೊದಲಿಗೆ ಘೋಷಣೆ ಮಾಡಿದ್ದು ಮಾರ್ಚ್ 24ನೇ ತಾರೀಕು.

 

ಕಂಟೇನ್ ಮೆಂಟ್ ಝೋನ್ ಗಳನ್ನು ಹೊರತುಪಡಿಸಿ, ಹೊರಗೆ ಹೆಚ್ಚು ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಗೃಹ ಸಚಿವಾಲಯದಿಂದ ನೀಡುತ್ತಿರುವ 5ನೇ ಸುತ್ತಿನ ನಿರ್ಬಂಧ ತೆರವಿನ ಮಾರ್ಗದರ್ಶಿ ಸೂತ್ರ. ಅನ್ ಲಾಕ್ 5.0 ಅಕ್ಟೋಬರ್ 1ನೇ ತಾರೀಕಿನಿಂದ ಜಾರಿಗೆ ಬರಲಿದೆ. ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಸಲಹೆ ಪಡೆದು, ಅದರ ಆಧಾರದಲ್ಲಿ ಈಗಿನ ಮಾರ್ಗದರ್ಶಿ ಸೂತ್ರ ನೀಡಲಾಗಿದೆ.

 
Unlock 5.0 ಅ. 1ರಿಂದ ಜಾರಿ: ಮಲ್ಟಿಪ್ಲೆಕ್ಸ್, ಶಾಲೆ ಆರಂಭ

ಕಂಟೇನ್ ಮೆಂಟ್ ಝೋನ್ ಹೊರಗೆ ನಡೆಸಬಹುದಾದ ಚಟುವಟಿಕೆಗಳ ಪಟ್ಟಿ ಹೀಗಿದೆ:
* ಸಿನಿಮಾಗಳು/ ಥಿಯೇಟರ್/ ಮಲ್ಟಿಪ್ಲೆಕ್ಸ್ ಗಳನ್ನು ಶೇಕಡಾ 50ರಷ್ಟು ಸೀಟಿಂಗ್ ಸಾಮರ್ಥ್ಯದೊಂದಿಗೆ ಆರಂಭ ಮಾಡಬಹುದು. ಅದಕ್ಕಾಗಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನೀಡಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ (SOP) ಅನುಸರಿಸಬೇಕು.

* ಬಿಜಿನೆಸ್ ಟು ಬಿಜಿನೆಸ್ (B2B) ಪ್ರದರ್ಶನಗಳನ್ನು ಏರ್ಪಡಿಸಬಹುದು. ಅದಕ್ಕಾಗಿ ವಾಣಿಜ್ಯ ಇಲಾಖೆಯಿಂದ SOP ನೀಡಲಾಗಿದೆ.

* ಕ್ರೀಡಾಪಟುಗಳ ತರಬೇತಿ ಉದ್ದೇಶದಿಂದ ಈಜುಕೊಳವನ್ನು ಬಳಸಬಹುದು. ಇದಕ್ಕಾಗಿ ಯುವಜನ- ಕ್ರೀಡಾ ಇಲಾಖೆ ಸಚಿವಾಲಯ SOP ನೀಡಿದೆ.

* ಮನರಂಜನಾ ಪಾರ್ಕ್ ಗಳು ಹಾಗೂ ಅಂಥದ್ದೇ ಸ್ಥಳಗಳು ಕಾರ್ಯ ನಿರ್ವಹಿಸಬಹುದು. ಆದರೆ SOP ಅನುಸರಿಸಬೇಕು.

* ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು ಹಾಗೂ ತರಬೇತಿ ಸಂಸ್ಥೆಗಳು ಆರಂಭಿಸಬಹುದು.

* ಅಕ್ಟೋಬರ್ 15, 2020ರ ನಂತರ ಆಯಾ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಶಾಲೆ- ಕಾಲೇಜು, ತರಬೇತಿ ಸಂಸ್ಥೆಗಳ ಪುನರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.

* ಸಾಮಾಜಿಕ/ ಶೈಕ್ಷಣಿಕ/ ಕೀಡೆ/ ಮನರಂಜನೆ/ ಸಾಂಸ್ಕೃತಿಕ/ ಧಾರ್ಮಿಕ/ ರಾಜಕೀಯ ಮತ್ತಿತರ ಕಾರ್ಯಕ್ರಮಗಳಿಗೆ ಈಗಾಗಲೇ ಅನುಮತಿಸಲಾಗಿದೆ. ಕಂಟೇನ್ ಮೆಂಟ್ ಝೋನ್ ಹೊರಗೆ ಗರಿಷ್ಠ ನೂರು ಮಂದಿಯೊಳಗೆ ನಡೆಸಬಹುದು ಎನ್ನಲಾಗಿತ್ತು. ಈಗ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮುಚ್ಚಿದಂಥ ಅಂದರೆ ಕಟ್ಟಡ, ಆಡಿಟೋರಿಯಂ ಅಂಥ ಸ್ಥಳಗಳಲ್ಲಿ ಗರಿಷ್ಠ ಮಿತಿ 200 ಅಥವಾ ಆ ಹಾಲ್ ನ ಸಾಮರ್ಥ್ಯದ ಶೇಕಡಾ 50ರಷ್ಟು ಎನ್ನಲಾಗಿದೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು. ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸರ್ ಬಳಸಬೇಕು ಎಂಬುದು ಸೇರಿದಂತೆ ವಿವಿಧ ನಿಬಂಧನೆಗಳಿವೆ.

* ತೆರೆದ ಸ್ಥಳಗಳಲ್ಲಿ ಸಾಮರ್ಥ್ಯದ ಆಧಾರದಲ್ಲಿ ಸಂಖ್ಯೆಯನ್ನು ನಿಗದಿ ಮಾಡಿಕೊಳ್ಳಬಹುದು. ಉಳಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

* ಅಂತರರಾಜ್ಯ ಸಂಚಾರಕ್ಕೆ ಅಥವಾ ರಾಜ್ಯದೊಳಗಿನ ಸಂಚಾರಕ್ಕೆ ಯಾವುದೇ ವಿಶೇಷ ಅನುಮತಿ ಬೇಕಿಲ್ಲ.

ಲುಫ್ತಾನ್ಸಾದಿಂದ ಅ. 20ರ ತನಕ ಭಾರತಕ್ಕೆ ವೇಳಾಪಟ್ಟಿ ವಿಮಾನ ರದ್ದುಲುಫ್ತಾನ್ಸಾದಿಂದ ಅ. 20ರ ತನಕ ಭಾರತಕ್ಕೆ ವೇಳಾಪಟ್ಟಿ ವಿಮಾನ ರದ್ದು

ನಿರ್ಬಂಧ ಹೇರಿರುವ ಚಟುವಟಿಕೆಗಳು
* ಗೃಹ ಸಚಿವಾಲಯ ಅನುಮತಿ ನೀಡಿದ್ದನ್ನು ಹೊರತುಪಡಿಸಿದಂತೆ ಉಳಿದ ಅಂತರರಾಷ್ಟ್ರೀಯ ವಿಮಾನ ಯಾನವನ್ನು ಪ್ರಯಾಣಿಕರು ಮಾಡುವಂತಿಲ್ಲ.

* ಮನರಂಜನಾ ಪಾರ್ಕ್ ಗಳು ಹಾಗೂ ಅಂಥ ಸ್ಥಳಗಳನ್ನು ತೆರೆಯುವುದಿಲ್ಲ.

* ಕಂಟೇನ್ ಮೆಂಟ್ ಝೋನ್ ಗಳಲ್ಲಿ ಅಕ್ಟೋಬರ್ 31ರ ತನಕ ಲಾಕ್ ಡೌನ್ ಮುಂದುವರಿಯುತ್ತದೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ.

English summary

Unlock 5.0 Guidelines: What's Allowed And What's Remain Clsoed?

Unlock 5.0 guidelines by ministry of home affairs announced on September 30, 2020. It will be implement from October 1, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X