ನವದೆಹಲಿ, ಜೂನ್ 7: ಯುಪಿಐ ಬಳಕೆದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುಡ್ ನ್ಯೂಸ್ ನೀಡಿದೆ. ಯುಪಿಐ ಲೈಟ್ ನಲ್ಲಿ ಇ-ಮ್ಯಾಂಡೇಟ್ (UPI LITE e-Mandante) ಅನ್ನುಆರ್‌ಬಿಐ ಪ್ರಕಟಿಸಿದೆ. ಇದರೊಂದಿಗೆ ಯುಪಿಐ ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸುಗಮಗೊಳ್ಳಲಿದೆ. ಈ ಕ್ರಮವು ಸಣ್ಣ-ಮೌಲ್ಯದ ಡಿಜಿಟಲ್ ಪಾವತಿಗಳನ್ನು ಹೆಚ್ಚು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಬುಧವಾರದಿಂದ ನಡೆದ ಎಂಪಿಸಿ ಸಭೆಯ ಬಳಿಕ ಇಂದು ಶುಕ್ರವಾರ ಯುಪಿಐ ಲೈಟ್ ಇ-ಮ್ಯಾಂಡೇಟ್ ಬಗ್ಗೆ ಪ್ರಕಟಿಸಿದ ಗವರ್ನರ್ ಶಕ್ತಿಕಾಂತ ದಾಸ್ "ಯುಪಿಐ ಲೈಟ್ ಅನ್ನು ಇ-ಮ್ಯಾಂಡೇಟ್ ಫ್ರೇಮ್‌ವರ್ಕ್‌ನೊಂದಿಗೆ ಏಕೀಕರಣಗೊಳಿಸುವುದರಿಂದ ಸಣ್ಣ-ಮೌಲ್ಯದ ಡಿಜಿಟಲ್ ಪಾವತಿಗಳನ್ನು ಮಾಡುವ ಸುಗಮವಾಗಿ ಮಾಡಬಹುದಾಗಿದೆ" ಎಂದು ಹೇಳಿದ್ದಾರೆ.

UPI ಲೈಟ್ ಸೌಲಭ್ಯವು ಪ್ರಸ್ತುತ ಗ್ರಾಹಕರು ತಮ್ಮ UPI ಲೈಟ್ ವ್ಯಾಲೆಟ್ ಅನ್ನು 2000 ರೂ.ವರೆಗೆ ಲೋಡ್ ಮಾಡಲು ಮತ್ತು ವ್ಯಾಲೆಟ್‌ನಿಂದ 500 ರೂ.ವರೆಗೆ ಪಾವತಿಗಳನ್ನು ಮಾಡಲು ಅನುಮತಿ ನೀಡುತ್ತದೆ. ಈ ಹಿಂದೆ 200 ರೂಗಿಂತ ಕಡಿಮೆ ಮೊತ್ತದ ವಹಿವಾಟಿಗೆ ಲೈಟ್ ಮೂಲಕ ಪಿನ್ ನಮೂದಿಸುವ ಅವಶ್ಯಕತೆ ಇಲ್ಲದೇ ಹಣ ಪಾವತಿಸುವ ಅವಕಾಶ ನೀಡಲಾಗಿತ್ತು. ಬಳಿಕ ಈ ವಹಿವಾಟು ಮಿತಿಯನ್ನು 500 ರೂಗೆ ಏರಿಕೆ ಮಾಡಲಾಯಿತು .
ಇದು ನಿಮಗೆ ಹೇಗೆ ಸಹಾಯ ಮಾಡುತ್ತದೆ?
AGS ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ವಿನಾಯಕ್ ಗೋಯಲ್ ಅವರ ಪ್ರಕಾರ ಸ್ವಯಂ ಮರುಪೂರಣ ವೈಶಿಷ್ಟ್ಯವು ನಿಮ್ಮ UPI ಲೈಟ್ ವ್ಯಾಲೆಟ್ ಯಾವಾಗಲೂ ಸಾಕಷ್ಟು ಹಣವನ್ನು ಹೊಂದಿದೆ ಎಂದು ಖಾತ್ರಿಪಡಿಸುತ್ತದೆ. ಈ ಹಿಂದೆ ಯುಪಿಐ ಲೈಟ್ನ ವ್ಯಾಲಟ್ಗೆ ಮ್ಯಾನುಯಲ್ ಆಗಿ ಹಣ ಜಮೆ ಮಾಡಬೇಕಿತ್ತು. ಆದರೆ ಇನ್ಮುಂದೆ ನಿಮ್ಮ UPI ಲೈಟ್ ವ್ಯಾಲೆಟ್ ಅನ್ನು ಹಣ ತುಂಬಲು ನೀವು ಮರೆತರೂ ಅದೇ ರೀ ಲೋಡ್ ಆಗಿ ಪಾವತಿಗಳನ್ನು ನಡೆಸಲು ಸಹಾಯ ಮಾಡುತ್ತದೆ.
ಯುಪಿಐನ ಲೈಟ್ ನ ನ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ಪಿನ್ ನಮೂದಿಸದೇ 500 ರೂ.ವರೆಗಿನ ಸಣ್ಣ ಪಾವತಿಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಇದು ಸಣ್ಣ ಮೌಲ್ಯದ ದಿನನಿತ್ಯದ ಚಿಲ್ಲರೆ ಖರೀದಿಗಳನ್ನು ಮಾಡುವಾಗ ವೇಗವಾಗಿ ಮತ್ತು ಆದ್ಯತೆಯ ಪಾವತಿಯಂತೆ ಕೆಲಸ ಮಾಡುತ್ತದೆ. ಇ-ಮ್ಯಾಂಡೇಟ್ ವೈಶಿಷ್ಟ್ಯವು ನಿಮ್ಮ UPI ಲೈಟ್ ವ್ಯಾಲೆಟ್ ಯಾವಾಗಲೂ ಸಾಕಷ್ಟು ಹಣವನ್ನು ಹೊಂದಿರುವುದನ್ನು, ಮಾತ್ರವಲ್ಲದೇ ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ ಮತ್ತು ತಡೆರಹಿತ ಪಾವತಿಯ ಅನುಭವವನ್ನು ನೀಡುತ್ತದೆ.
ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಹಾಗೂ ಯುಪಿಐ ಲೈಟ್ ಡಿಜಿಟಲ್ ಪೇಮೆಂಟ್ ಜಗತ್ತಿನಲ್ಲಿರುವ ಎರಡು ಪ್ರಮುಖ ವ್ಯವಸ್ಥೆಗಳಾಗಿವೆ. ಯುಪಿಐ ಪೂರ್ಣ ಹಾಗೂ ವೈಶಿಷ್ಟ್ಯಗಳಿಂದ ಕೂಡಿದ ಸೇವೆಯಾಗಿದ್ದು, ಹಲವು ಬ್ಯಾಂಕ್ ಖಾತೆಗಳು ಹಾಗೂ ವ್ಯಾಪಕ ಶ್ರೇಣಿಗಳ ನಿರಂತರ ಸೇವೆಯನ್ನು ಒದಗಿಸುವ ವ್ಯವಸ್ಥೆಯಾಗಿದೆ.
UPI ಮತ್ತು UPI ಲೈಟ್ ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಎರಡು ಆವೃತ್ತಿಗಳಾಗಿದ್ದು, UPI ಬ್ಯಾಂಕ್ ಖಾತೆಗಳ ನಡುವೆ ರಿಯಲ್ ಟೈಮ್ ವರ್ಗಾವಣೆಯನ್ನು ಅನುಮತಿಸುತ್ತದ. ಇದು ದಿನಕ್ಕೆ 1 ಲಕ್ಷದ ವಹಿವಾಟಿನ ಮಿತಿಯನ್ನು ಹೊಂದಿದೆ. ಆದರೆ UPI ಲೈಟ್ ಅನ್ನು ಸಣ್ಣ-ಮೌಲ್ಯದ ವಹಿವಾಟುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿ ವಹಿವಾಟಿಗೆ ರೂ 500 ಮತ್ತು ದಿನಕ್ಕೆ ವ್ಯಾಲೆಟ್‌ಗೆ ಪ್ರತಿದಿನ 4000 ರೂಪಾಯಿವರೆಗೆ ವ್ಯವಹಾರದ ಮಿತಿಯನ್ನು ನೀಡಲಾಗಿದೆ.


Click it and Unblock the Notifications