ಯುಪಿಐ ಪಾವತಿ: ಏಪ್ರಿಲ್‌ನಲ್ಲಿ 2.64 ಲಕ್ಷ ಕೋಟಿ ವಹಿವಾಟು

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಏಪ್ರಿಲ್‌ನಲ್ಲಿ ಯುಪಿಐ ಪಾವತಿ 2.64 ಲಕ್ಷ ಕೋಟಿ ವಹಿವಾಟು ದಾಖಲಿಸಿದೆ.

ಮಾರ್ಚ್‌ನಲ್ಲಿ ಯುಪಿಐ 2.73 ಬಿಲಿಯನ್ ಡಾಲರ್‌ ಅಥವಾ 273 ಕೋಟಿ ವಹಿವಾಟಿನ ಮೂಲಕ 5,04,886 ಕೋಟಿ ರೂಪಾಯಿ ತಲುಪಿತ್ತು. ಆದರೆ ಏಪ್ರಿಲ್‌ನಲ್ಲಿ ಕೋವಿಡ್‌-19 ನಿರ್ಬಂಧಗಳಿಂದಾಗಿ ಒಟ್ಟು ವಹಿವಾಟುಗಳು ಸ್ವಲ್ಪ ಕುಸಿದಿದ್ದರೆ, ದೈನಂದಿನ ವಹಿವಾಟಿನ ಪ್ರಮಾಣವು ಕಳೆದ ಎರಡು ತಿಂಗಳಲ್ಲಿ ಸುಮಾರು 88 ಮಿಲಿಯನ್ ವಹಿವಾಟುಗಳೊಂದಿಗೆ ಬಹುತೇಕ ಒಂದೇ ಆಗಿತ್ತು.

ಯುಪಿಐ ಪಾವತಿ: ಏಪ್ರಿಲ್‌ನಲ್ಲಿ 2.64 ಲಕ್ಷ ಕೋಟಿ ವಹಿವಾಟು

ಒಟ್ಟಾರೆ ಯುಪಿಐ ವ್ಯವಸ್ಥೆಯಲ್ಲಿ ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಶೇಕಡಾ 90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತವೆ. ಫೋನ್‌ಪೇ ಮಾರ್ಚ್‌ನಲ್ಲಿ 1,199.51 ಮಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿತು ಮತ್ತು ನಂತರ ಗೂಗಲ್ ಪೇ 957.01 ಮಿಲಿಯನ್, ಕ್ರಮವಾಗಿ ಶೇಕಡಾ 44ರಷ್ಟು ಮತ್ತು ಶೇಕಡಾ 35ರಷ್ಟು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತದೆ.

ಯುಪಿಐ ಯಾವುದೇ ತೃತೀಯ ಅಪ್ಲಿಕೇಶನ್ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಎನ್‌ಪಿಸಿಐನಂತಹ ಅಪ್ಲಿಕೇಶನ್‌ಗಳ ಮಾರುಕಟ್ಟೆ ಪಾಲನ್ನು ಶೇಕಡಾ 30ರಷ್ಟು ತಲುಪಿಸಲು ಮುಂದಾಗಿದೆ. ಆದಾಗ್ಯೂ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಯುಪಿಐಗಳಿಗೆ ವಿನಾಯಿತಿ ನೀಡಬಹುದು ಎಂದು ಎನ್‌ಪಿಸಿಐ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+