For Quick Alerts
ALLOW NOTIFICATIONS  
For Daily Alerts

ಜುಲೈನಲ್ಲಿ UPI ದಾಖಲೆ: 6.06 ಲಕ್ಷ ಕೋಟಿ ರೂ. ವಹಿವಾಟು

|

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಜುಲೈ ತಿಂಗಳಿನಲ್ಲಿ ಯುಪಿಐ ವಹಿವಾಟು 5.47 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಜೂನ್ ತಿಂಗಳಿಗಿಂತ ಶೇಕಡಾ 15.7ರಷ್ಟು ಯುಪಿಐ ವಹಿವಾಟು ಹೆಚ್ಚಾಗಿದ್ದು, 2.8 ಬಿಲಿಯನ್ ವಹಿವಾಟುಗಳಿಂದ 3.24 ಬಿಲಿಯನ್ ವಹಿವಾಟುಗಳಿಗೆ ಏರಿಕೆಯಾಗಿದೆ. ಈ ತಿಂಗಳಿನಲ್ಲಿ ಆಗಿರುವ ಒಟ್ಟು ವಹಿವಾಟಿನ ಮೌಲ್ಯವು ಬರೋಬ್ಬರಿ 06 ಲಕ್ಷ ಕೋಟಿ ರೂ. ನಷ್ಟಿದ್ದು, ಜೂನ್‌ಗಿಂತ ಶೇಕಡಾ 10.76 ರಷ್ಟು ಹೆಚ್ಚಾಗಿದೆ.

2016ರಲ್ಲಿ ಮೊದಲ ಬಾರಿಗೆ ಯುಪಿಐ ವಹಿವಾಟು ಪ್ರಾರಂಭಿಸಲಾಯಿತು. ಅಕ್ಟೋಬರ್ 2019ರಲ್ಲಿ 1 ಬಿಲಿಯನ್ ವಹಿವಾಟು ಆಗಿದ್ದು, ಮುಂದಿನ ಒಂದು ವರ್ಷ ಸತತವಾಗಿ 1 ಬಿಲಿಯನ್ ದಾಟುತ್ತಾ ಬಂದಿದೆ. ಇನ್ನು ಅಕ್ಟೋಬರ್ 2020 ರಲ್ಲಿ, UPI ಮೊದಲ ಬಾರಿಗೆ 2 ಬಿಲಿಯನ್‌ಗಿಂತ ಹೆಚ್ಚಿನ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿತು.

2 ಬಿಲಿಯನ್ ವಹಿವಾಟು ದಾಖಲಾದ ಬಳಿಕ 3 ಬಿಲಿಯನ್ ವಹಿವಾಟು ತಲುಪಲು ತೆಗೆದುಕೊಂಡ ಸಮಯ ಕೇವಲ 10 ತಿಂಗಳು ಆಗಿದೆ. ಇದು ಗ್ರಾಹಕರಲ್ಲಿ ಡಿಜಿಟಲ್ ಪೇಮೆಂಟ್ಸ್ ಬಳಕೆಯ ಪ್ರಮಾಣವನ್ನು ಸೂಚಿಸುತ್ತದೆ.

ಜೂನ್‌ನಲ್ಲಿ 2.8 ಬಿಲಿಯನ್ ವಹಿವಾಟು

ಜೂನ್‌ನಲ್ಲಿ 2.8 ಬಿಲಿಯನ್ ವಹಿವಾಟು

ಇನ್ನು ಜೂನ್ 2021ರಲ್ಲಿ 5.47 ಲಕ್ಷ ಕೋಟಿ ರೂ. ಮೌಲ್ಯದ 2.80 ಬಿಲಿಯನ್ (280 ಕೋಟಿ) ವಹಿವಾಟುಗಳು ನಡೆದಿವೆ, ಮೇ ತಿಂಗಳಲ್ಲಿ 2.53 ಬಿಲಿಯನ್ (253 ಕೋಟಿ) ರಷ್ಟಿದೆ ಎಂದು ಎನ್‌ಪಿಸಿಐ ಅಂಕಿಅಂಶಗಳು ತಿಳಿಸಿವೆ. ಎನ್‌ಪಿಸಿಐ ಭಾರತದಲ್ಲಿ ಚಿಲ್ಲರೆ ಪಾವತಿ ಮತ್ತು ವಸಾಹತು ವ್ಯವಸ್ಥೆಗಳನ್ನು ನಿರ್ವಹಿಸುವ ಒಂದು ಸಂಸ್ಥೆಯಾಗಿದೆ.

ಜೂನ್ ನಲ್ಲಿ 5.47 ಟ್ರಿಲಿಯನ್ ಮೌಲ್ಯದ 2.8 ಬಿಲಿಯನ್ ವಹಿವಾಟುಗಳನ್ನು ವೇದಿಕೆ ದಾಖಲಿಸಿದೆ, ವಾಲ್ಯೂಮ್ ಪರಿಭಾಷೆಯಲ್ಲಿ ಶೇಕಡಾ 10.6 ಮತ್ತು ಮೇ ತಿಂಗಳಲ್ಲಿ ಶೇಕಡಾ 11.56 ರಷ್ಟು ಹೆಚ್ಚಾಗಿದೆ.

 ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ? ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ?

ಮೇ ತಿಂಗಳಿನಿಂದ ಹೆಚ್ಚಾದ ವೇಗ

ಮೇ ತಿಂಗಳಿನಿಂದ ಹೆಚ್ಚಾದ ವೇಗ

ಕೋವಿಡ್ -19 ಪ್ರಕರಣಗಳು ತಗ್ಗಿದ ಬಳಿಕ ಬಹುತೇಕ ರಾಜ್ಯಗಳಲ್ಲಿ ವ್ಯಾಪಾರ ಚಟುವಟಿಕೆಯ ಮೇಲಿನ ನಿರ್ಬಂಧಗಳು ಸಡಿಲಗೊಂಡವು. ಮೇ ತಿಂಗಳಲ್ಲಿ, ಯುಪಿಐ 2.53 ಬಿಲಿಯನ್ ವಹಿವಾಟುಗಳನ್ನು ತಲುಪಿತು. ಇದು ಕ್ರಮವಾಗಿ ಏಪ್ರಿಲ್ ಮತ್ತು ಮಾರ್ಚ್‌ನಿಂದ ಶೇ. 4.16 ಮತ್ತು ಶೇ. 7.32ರಷ್ಟು ಏರಿಕೆಗೊಂಡಿತು. ಒಟ್ಟಾರೆ ಮೌಲ್ಯದ ದೃಷ್ಟಿಯಿಂದ 4.9 ಟ್ರಿಲಿಯನ್ ಮೌಲ್ಯದ ವಹಿವಾಟುಗಳನ್ನು ಕಂಡಿದೆ. ಇದು ಕ್ರಮವಾಗಿ ಏಪ್ರಿಲ್ ಮತ್ತು ಮಾರ್ಚ್‌ನಿಂದ ಶೇಕಡಾ 0.66ರಷ್ಟು ಮತ್ತು ಶೇಕಡಾ 3ರಷ್ಟು ಕಡಿಮೆಯಾಗಿದೆ.

e-RUPI ಎಂದರೇನು? ಹೇಗೆ ಕಾರ್ಯ ನಿರ್ವಹಿಸಲಿದೆ?e-RUPI ಎಂದರೇನು? ಹೇಗೆ ಕಾರ್ಯ ನಿರ್ವಹಿಸಲಿದೆ?

UPIನಲ್ಲಿ ಈ ಮೂರು ಪೇಮೆಂಟ್ಸ್‌ ಅಗ್ರಸ್ಥಾನದಲ್ಲಿವೆ

UPIನಲ್ಲಿ ಈ ಮೂರು ಪೇಮೆಂಟ್ಸ್‌ ಅಗ್ರಸ್ಥಾನದಲ್ಲಿವೆ

ಒಟ್ಟಾರೆ ಯುಪಿಐ ವ್ಯವಸ್ಥೆಯಲ್ಲಿ ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಶೇಕಡಾ 90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತವೆ.

IMPS ಒಟ್ಟಾರೆ ಬಳಕೆಯಲ್ಲಿ ಭಾರೀ ಹೆಚ್ಚಳ

IMPS ಒಟ್ಟಾರೆ ಬಳಕೆಯಲ್ಲಿ ಭಾರೀ ಹೆಚ್ಚಳ

NPCI ನಿಂದ ನಡೆಸಲ್ಪಡುವ ಇನ್ನೊಂದು ಡಿಜಿಟಲ್ ಪಾವತಿ ವೇದಿಕೆಯಾದ ತಕ್ಷಣದ ಪಾವತಿ ಸೇವೆ (IMPS), ಜೂನ್‌ನಿಂದ ಜುಲೈಗೆ 349.76 ಮಿಲಿಯನ್ ವಹಿವಾಟುಗಳ ದಾಖಲಿಸಿದ್ದು ಶೇಕಡಾ 15ರಷ್ಟು ಹೆಚ್ಚಳವನ್ನು ಕಂಡಿದೆ. ಮೌಲ್ಯದ ಪ್ರಕಾರ, ಐಎಂಪಿಎಸ್‌ನಿಂದ ಜುಲೈನಲ್ಲಿ ವಹಿವಾಟುಗಳು 3.09 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಜೂನ್‌ನಿಂದ ಶೇಕಡಾ 8.80 ರಷ್ಟು ಹೆಚ್ಚಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡಿಜಿಟಲ್ ಪಾವತಿ ಸೂಚ್ಯಂಕ (ಡಿಪಿಐ) ಮಾರ್ಚ್ 2021 ರ ಸೂಚ್ಯಂಕವು 270.59 ರಷ್ಟಿದೆ ಎಂದು ತೋರಿಸುತ್ತದೆ. ಇದು ಮಾರ್ಚ್‌ 2020ರಲ್ಲಿ 207.94ರಷ್ಟಿತ್ತು.

 

Read more about: digital india money ಹಣ
English summary

UPI Transactions in July 2021: UPI processed a record 3.24 billion transactions in July

Unified Payments Interface (UPI), the flagship payments platform of the National Payments Corporation of India (NPCI), made a record in volume and value of transactions in July 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X