For Quick Alerts
ALLOW NOTIFICATIONS  
For Daily Alerts

ಕೊರೊನಾ ಭೀತಿಯುಳ್ಳವರಿಗೆ ವಿಮೆ ನೀಡುತ್ತಿದೆ ಈ ಕಂಪನಿ

|

ನವದೆಹಲಿ, ಮಾರ್ಚ್ 15: ವಿಶ್ವದೆಲ್ಲೆಡೆ ಕೊರೊನಾವೈರಸ್ ಭೀತಿ ಆವರಿಸಿದ್ದು, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿವೆ. ಸೋಂಕು ಹರಡದಂತೆ ಎಚ್ಚರಿಕೆ ವಹಿಸಿರುವ ಕೆಲ ಕಂಪನಿಗಳು ವರ್ಕ್ ಫ್ರಮ ಹೋಂ ಆಯ್ಕೆ ನೀಡಿವೆ. ಗೃಹೋಪಯೋಗಿ ವಸ್ತುಗಳ ರಿಪೇರಿ ಸರ್ವೀಸ್ ನೀಡುವ ಅರ್ಬನ್ ಕ್ಲಾಪ್ (ಈಗ ಅರ್ಬನ್ ಕಂಪನಿ) ತನ್ನ ಉದ್ಯೋಗಿಗಳಿಗೆ ವಿಮೆ ಸೌಲಭ್ಯ ನೀಡುತ್ತಿದೆ.

ಕೊರೊನಾವೈರಸ್ ಪೀಡಿತರಾಗಿ ಪಾಸಿಟಿವ್ ಎಂದು ಯಾರಾದರೂ ಉದ್ಯೋಗಿಗೆ ತಿಳಿದರೆ ಅವರಿಗೆ ಹೊಸ ವಿಮೆ ಸೌಲಭ್ಯ ಸಿಗಲಿದೆ. ಸುಮಾರು 30 ಸಾವಿರ ಸಿಬ್ಬಂದಿಗೆ ಹಾಲಿ ಅಪಘಾತ ವಿಮೆ, ಆರೋಗ್ಯ ವಿಮೆ ಜೊತೆಗೆ ಕೊರೊನಾವೈರಸ್ ವಿಮೆ ಸಿಗಲಿದೆ.

ಕೋವಿಡ್19 ಬಾಧಿತ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಿದರೆ 14,000 ರುನಿಂದ 25,000 ರು ತನಕ ವಿಮೆ ಸೌಲಭ್ಯ ಸಿಗಲಿದೆ. ಭಾರತದ 18 ರಾಜ್ಯಗಳಲ್ಲಿನ ಅರ್ಬನ್ ಕಂಪನಿ ಸಿಬ್ಬಂದಿಗಳಿಗೂ ಈ ವಿಮೆ ಸೌಲಭ್ಯ ಲಭ್ಯವಾಗಲಿದೆ ಎಂದು ಸಹ ಸ್ಥಾಪಕ ಅಭಿರಾಜ್ ಸಿಂಗ್ ಭಾಲ್ ಹೇಳಿದರು.

ಕೊರೊನಾ ಭೀತಿಯುಳ್ಳವರಿಗೆ ವಿಮೆ ನೀಡುತ್ತಿದೆ ಈ ಕಂಪನಿ

ಅರ್ಬನ್ ಕ್ಲಾಪ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಈಗಾಗಲೇ ಎಸ್ಎಂಎಸ್, ಇಮೇಲ್, ಆಪ್ ನೋಟಿಫಿಕೇಷನ್ ಮೂಲಕ ಕೋವಿಡ್ 19 ಬಗ್ಗೆ ಜಾಗೃತಿ ಮೂಡಿಸಿದೆ.

ಶೀತ, ಕೆಮ್ಮು, ಜ್ವರ ಬರುವ ಲಕ್ಷಣ ಕಂಡು ಬಂದರೆ ಕಡ್ಡಾಯವಾಗಿ ವರ್ಕ್ ಫ್ರಂ ಹೋಮ್ ಆಯ್ಕೆ ಮಾಡಿಕೊಳ್ಳುವುದು,ವೈದ್ಯರ ಸಲಹೆ ಪಡೆಯುವುದು ಮುಂತಾದ ಸೂಚನೆಗಳನ್ನು ಸಂಸ್ಥೆ ನೀಡಿದೆ. ವಿದೇಶಿ ಪ್ರಯಾಣವನ್ನು ನಿರ್ಬಂಧಿಸಿದೆ.

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

ಭಾರತದಲ್ಲಿ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಕರ್ನಾಟಕದಲ್ಲಿ ಇದೇ ಸಂಖ್ಯೆ ಅಥವಾ 104ಕ್ಕೆ ಕರೆ ಮಾಡಬಹುದು.

English summary

Urban Company to offer Covid-19 health insurance, income protection cover to professionals

Home services marketplace Urban Company on Saturday said it has rolled out Covid-19 health insurance and income protection cover for 30,000 service professionals active on its platform in India.
Story first published: Sunday, March 15, 2020, 19:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X