For Quick Alerts
ALLOW NOTIFICATIONS  
For Daily Alerts

2019ರ ಜುಲೈನಿಂದ ಸೆಪ್ಟೆಂಬರ್ ನಲ್ಲಿ ನಗರ ನಿರುದ್ಯೋಗ ಪ್ರಮಾಣ 8.4%

|

ನಗರ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣವು 2019ರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 8.4% ಇತ್ತು. ಏಪ್ರಿಲ್ ನಿಂದ ಜೂನ್ ಮಧ್ಯೆ 8.9% ಹಾಗೂ 2018ರ ಜುಲೈನಿಂದ ಸೆಪ್ಟೆಂಬರ್ ಮಧ್ಯೆ 9.7% ಇತ್ತು ಎಂದು ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (PLFS) ಮೂಲಕ ಗೊತ್ತಾಗಿದೆ. ಇದನ್ನು ಸ್ಟಾಟಿಸ್ಟಿಕ್ಸ್ ಅಂಡ್ ಪ್ರೋಗ್ರಾಮ್ ಇಂಪ್ಲಿಮೆಂಟೇಷನ್ ಸಚಿವಾಲಯ ಬಿಡುಗಡೆ ಮಾಡಿದೆ.

 

ನಗರ ನಿರುದ್ಯೋಗ 15ರಿಂದ 29 ವರ್ಷದ ವಯಸ್ಸಿನೊಳಗಿನವರ ಗುಂಪಿನಲ್ಲಿ 2019ರ ಜುಲೈನಿಂದ ಸೆಪ್ಟೆಂಬರ್ ನಲ್ಲಿ 20.6 ಪರ್ಸೆಂಟ್ ಇತ್ತು. ಅದರ ಹಿಂದಿನ ತ್ರೈಮಾಸಿಕದಲ್ಲಿ 21.6 ಪರ್ಸೆಂಟ್ ನಲ್ಲಿತ್ತು. ಅದೇ ಅವಧಿಗೆ ಹಿಂದಿನ ವರ್ಷದಲ್ಲಿ 23.1 ಪರ್ಸೆಂಟ್ ನಲ್ಲಿ ಇತ್ತು.

ಕುಸಿಯುತ್ತಿರುವ ಆದಾಯ: ಭಾರತದ ಗ್ರಾಮೀಣ ಆರ್ಥಿಕತೆ ಸಂಕಷ್ಟದಲ್ಲಿ

ಇನ್ನು ಮಹಿಳೆಯರ ನಿರುದ್ಯೋಗ ಪ್ರಮಾಣ ಜುಲೈ- ಸೆಪ್ಟೆಂಬರ್ ನಲ್ಲಿ 9.7% ಇತ್ತು. 2019ರ ಏಪ್ರಿಲ್- ಜೂನ್ ನಲ್ಲಿ 11.3 ಪರ್ಸೆಂಟ್ ನಲ್ಲಿತ್ತು. ಅದಕ್ಕೆ ಮುಂಚೆ, 2018ರ ಜುಲೈನಿಂದ ಸೆಪ್ಟೆಂಬರ್ ಮಧ್ಯೆ 12.7 ಪರ್ಸೆಂಟ್ ಇತ್ತು. ಜುಲೈ- ಸೆಪ್ಟೆಂಬರ್ ನಲ್ಲಿ ಪುರುಷರ ನಿರುದ್ಯೋಗ ಪ್ರಮಾಣ 8.0 ಪರ್ಸೆಂಟ್ ಇದ್ದರೆ, ಅದರ ಹಿಂದಿನ ತ್ರೈಮಾಸಿಕದಲ್ಲಿ 8.7% ಇತ್ತು. 2018ರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 8.9 ಪರ್ಸೆಂಟ್ ನಲ್ಲಿತ್ತು.

2019ರ ಜುಲೈನಿಂದ ಸೆಪ್ಟೆಂಬರ್ ನಲ್ಲಿ ನಗರ ನಿರುದ್ಯೋಗ ಪ್ರಮಾಣ 8.4%

ಕಾರ್ಮಿಕರ ಭಾಗವಹಿಸುವ ದರ ಈ ಹಿಂದಿನ ತ್ರೈಮಾಸಿಕದಲ್ಲಿ 36.2% ಇದ್ದದ್ದು 36.8% ಏರಿಕೆ ಆಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದ ಅವಧಿಗೆ 36.1 ಪರ್ಸೆಂಟ್ ಇತ್ತು ಎಂಬುದನ್ನು ದತ್ತಾಂಶಗಳು ತೆರೆದಿಡುತ್ತವೆ. ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಸರಾಸರಿ ನಗರ ನಿರುದ್ಯೋಗ ಪ್ರಮಾಣ ಇರುವುದಕ್ಕಿಂತ ಅತಿ ಹೆಚ್ಚಿನ ನಿರುದ್ಯೋಗ ಇರುವ ರಾಜ್ಯಗಳ ಪಟ್ಟಿ ಹೀಗಿದೆ: ಉತ್ತರಪ್ರದೇಶ, ಕೇರಳ, ರಾಜಸ್ಥಾನ, ಆಂಧ್ರಪ್ರದೇಶ, ದೆಹಲಿ, ಬಿಹಾರ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶ.

ನಗರ ಪ್ರದೇಶಗಳ ನಿರುದ್ಯೋಗ ದತ್ತಾಂಶಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಈ ದತ್ತಾಂಶಗಳಾ ಮಾಹಿತಿ ವಾರ್ಷಿಕ ವರದಿಗಿಂತ ಭಿನ್ನವಾಗಿರುತ್ತದೆ. ಏಕೆಂದರೆ, ಅದರಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶ ಎರಡೂ ಒಳಗೊಂಡಿರುತ್ತದೆ.

 

ಅಂದ ಹಾಗೆ, 2019ರ ಜುಲೈನಿಂದ ಸೆಪ್ಟೆಂಬರ್ ಮಧ್ಯೆ ನಡೆಸಿದ ಸಮೀಕ್ಷೆಯಲ್ಲಿ 44,471 ಕುಟುಂಬಗಳ 1.76 ಲಕ್ಷ ಮಂದಿ ಪಾಲ್ಗೊಂಡಿದ್ದರು. ಇನ್ನು 2019ರ ಏಪ್ರಿಲ್ ನಿಂದ ಜೂನ್ ನಲ್ಲಿ ನಡೆದ ಸಮೀಕ್ಷೆಯಲ್ಲಿ 45,288 ಕುಟುಂಬಗಳ 1.79 ಲಕ್ಷ ಮಂದಿ ಭಾಗಿಯಾಗಿದ್ದರು.

English summary

Urban unemployment fell to 8.4% in July-September 2019

According to data released by central government, urban unemployment rate in 2019 July to September at 8.4%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X