ಭಾರತದ ಮಾರುಕಟ್ಟೆಯಲ್ಲಿ ಶುಕ್ರವಾರ (ನವೆಂಬರ್ 6, 2020) ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನ ದೊಡ್ಡ ಗಳಿಕೆ ದಾಖಲಿಸಿತ್ತು. MCXನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ ನಲ್ಲಿ 0.28% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 51,910 ರುಪಾಯಿಗೆ ವಹಿವಾಟು ನಡೆಸಿತು.
ಇನ್ನು ಬೆಳ್ಳಿ ಫ್ಯೂಚರ್ಸ್ 0.32% ಏರಿಕೆಯಾಗಿ, ಪ್ರತಿ ಕೇಜಿಗೆ 64,460 ರುಪಾಯಿಯಂತೆ ವ್ಯವಹಾರ ನಡೆಸಿತು. ಈಚಿನ ವಾರಗಳಲ್ಲಿ ಚಿನ್ನದ ದರವು ಇಳಿಕೆ ಕಾಣುತ್ತಾ ಬಂದಿತ್ತು. ಯುಎಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಅನಿಶ್ಚಿತತೆ ಹಾಗೂ ವಿಶ್ವದಾದ್ಯಂತ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸೆಷನ್ ನಲ್ಲಿ ಚಿನ್ನ ಏರಿಕೆ ಕಂಡಿತ್ತು.
ಈ ಹಿಂದಿನ ಸೆಷನ್ ನಲ್ಲಿ ಏರಿಕೆ
ಈ ಹಿಂದಿನ ಸೆಷನ್ ನಲ್ಲಿ MCXನಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಮ್ ಗೆ 1257 ರುಪಾಯಿ ಏರಿಕೆ ದಾಖಲಿಸಿತ್ತು. ಇನ್ನು ಬೆಳ್ಳಿ ದರವು ಪ್ರತಿ ಕೇಜಿಗೆ 2700 ರುಪಾಯಿ ಹೆಚ್ಚಳವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಹಾದಿಯನ್ನೇ ಈ ಬೆಲೆಬಾಳುವ ಲೋಹಗಳು ಅನುಸರಿಸಿದ್ದವು. ಚಿನ್ನದ ಗಟ್ಟಿ ಏರಿಕೆ ಮುಂದುವರಿಸುವ ಸಾಧ್ಯತೆ ಇದೆ. ಹಳದಿ ಲೋಹದ ಬೆಲೆ 52400 ರುಪಾಯಿಯಲ್ಲಿ ಪರೀಕ್ಷೆಗೆ ಒಳಪಡಬಹುದು ಹಾಗೂ 51700 ರುಪಾಯಿ ಸಮೀಪ ಬೆಂಬಲ ದೊರೆಯಬಹುದು. ಇನ್ನು ಬೆಳ್ಳಿಯಲ್ಲಿ ಭಾರೀ ಏರಿಳಿತ ಕಾಣಿಸಿಕೊಳ್ಳಬಹುದು. 65200 ರುಪಾಯಿಯಲ್ಲಿ ಪರೀಕ್ಷೆಗೆ ಒಳಪಡಬಹುದು, 63700 ರುಪಾಯಿಯಲ್ಲಿ ಬೆಂಬಲ ದೊರೆಯಬಹುದು ಎಂದು ಎಸ್ ಎಂಸಿ ಗ್ಲೋಬಲ್ ತನ್ನ ವರದಿಯಲ್ಲಿ ತಿಳಿಸಿದೆ.
ಯುಎಸ್ ಡಾಲರ್ ಪ್ರಬಲ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಪ್ರಬಲ ಯುಎಸ್ ಡಾಲರ್ ಕಾರಣಕ್ಕೆ ಈ ಬೆಳವಣಿಗೆ ಆಗಿದೆ. ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.4% ಇಳಿಕೆಯಾಗಿ, $ 1940.86ನಲ್ಲಿದೆ. ಈ ಹಿಂದಿನ ಸೆಷನ್ ನಲ್ಲಿ 2.4% ಹೆಚ್ಚಳ ದಾಖಲಿಸಿತ್ತು ಸ್ಪಾಟ್ ಗೋಲ್ಡ್. ಇತರ ಬೆಲೆ ಬಾಳುವ ಲೋಹಗಳ ಪೈಕಿ ಬೆಳ್ಳಿ ಔನ್ಸ್ ಗೆ 1.6% ಇಳಿಕೆಯಾಗಿ, $ 24.93 ಆಗಿದ್ದರೆ, ಪ್ಲಾಟಿನಂ 0.7% ಕುಸಿದು, $ 886.63ರಲ್ಲಿದೆ.
ಅಮೆರಿಕದ ಫಲಿತಾಂಶ ಅನಿಶ್ಚಿತತೆ
ಇನ್ನೇನು ಶ್ವೇತಭವನ ಪ್ರವೇಶಿಸಲು ಜೋ ಬೈಡನ್ ಬಹಳ ಹತ್ತಿರದಲ್ಲಿ ಇದ್ದಾರೆ. ಅಂತಿಮ ಫಲಿತಾಂಶ ಪ್ರಕಟವಾಗುವುದಕ್ಕೆ ಕೆಲವು ಬ್ಯಾಟಲ್ ಗ್ರೌಂಡ್ ಮಾತ್ರ ಬಾಕಿ ಇವೆ. ಈಗ ಹೂಡಿಕೆದಾರರು ಆರ್ಥಿಕ ಉತ್ತೇಜನಾ ಪ್ಯಾಕೇಜ್ ಮತ್ತು ಡೊನಾಲ್ಡ್ ಟ್ರಂಪ್ ಮುಂದಿನ ನಡೆ ಏನಾಗಿರಲಿದೆ ಎಂದು ನೋಡುತ್ತಿದ್ದಾರೆ. ಇನ್ನು ಡಾಲರ್ ಸೂಚ್ಯಂಕವು 0.08% ಹೆಚ್ಚಳವಾಗಿದ್ದು, ಇತರ ಕರೆನ್ಸಿಯನ್ನು ಇರಿಸಿಕೊಂಡವರಿಗೆ ಚಿನ್ನ ಅಷ್ಟೇನೂ ಆಕರ್ಷಕವಾಗಿ ಕಂಡುಬರುತ್ತಿಲ್ಲ.
ಬಾಂಡ್ ಖರೀದಿ, ಬ್ರೆಕ್ಸಿಟ್ ಇತರ ಬೆಳವಣಿಗೆ
ಫೆಡರಲ್ ರಿಸರ್ವ್ ಸಡಿಲ ಹಣಕಾಸು ನೀತಿಯನ್ನು ಗುರುವಾರ ಮುಂದುವರಿಸಿದೆ. ಮುಂದಿನ ಕೆಲ ತಿಂಗಳ ಕಾಲ ಯುಎಸ್ ಆರ್ಥಿಕತೆ ಚೇತರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಮಾಡಲಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ನಿಂದ ಬಾಂಡ್ ಖರೀದಿ ಉತ್ತೇಜನವನ್ನು 150 ಬಿಲಿಯನ್ ಪೌಂಡ್ ಗೆ ಮಾಡಲು ನಿರ್ಧರಿಸಿದೆ. ಹೊಸದಾಗಿ ಲಾಕ್ ಡೌನ್ ಹೇರಿಕೆ ಸಾಧ್ಯತೆ ಮತ್ತು ಬ್ರೆಕ್ಸಿಟ್ ಅಪಾಯದ ಹಿನ್ನೆಲೆಯಲ್ಲಿ ಈ ನಿರೀಕ್ಷೆ ಇದೆ. ಭಾರತದಲ್ಲಿ ಇಲ್ಲಿಯ ತನಕ ಚಿನ್ನದ ದರವು 31%ಗೂ ಹೆಚ್ಚು ಏರಿಕೆ ಕಂಡಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಘೋಷಣೆ ಮಾಡಿದ ಆರ್ಥಿಕ ಉತ್ತೇಜನಗಳಿಂದ ಚಿನ್ನಕ್ಕೆ ಬೆಂಬಲ ಸಿಕ್ಕಿತ್ತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications