For Quick Alerts
ALLOW NOTIFICATIONS  
For Daily Alerts

FASTag ಮೂಲಕ ಒಂದೇ ದಿನದಲ್ಲಿ 50 ಲಕ್ಷ ಟ್ರಾನ್ಸಾಕ್ಷನ್, 80 ಕೋಟಿ ರು. ಸಂಗ್ರಹ

|

FASTag ಮೂಲಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು ಒಂದೇ ದಿನದಲ್ಲಿ 50 ಲಕ್ಷ ಟ್ರಾನ್ಸಾಕ್ಷನ್ ಆಗಿ, 80 ಕೋಟಿ ರುಪಾಯಿ ಸಂಗ್ರಹ ಆಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶುಕ್ರವಾರ ತಿಳಿಸಿದೆ. ಈ ತನಕ 2.20 ಕೋಟಿ FASTag ಅನ್ನು ವಿತರಣೆ ಮಾಡಲಾಗಿದೆ.

"ಇದೇ ಮೊದಲ ಬಾರಿಗೆ ಡಿಸೆಂಬರ್ 24, 2020ರಂದು ದಾಖಲೆಯ 50 ಲಕ್ಷ FASTag ವ್ಯವಹಾರದೊಂದಿಗೆ ಒಂದೇ ದಿನದಲ್ಲಿ ಐತಿಹಾಸಿಕ ಮೈಲುಗಲ್ಲಾಗಿ 80 ಕೋಟಿ ರುಪಾಯಿ ಸಂಗ್ರಹ ದಾಟಿದೆ," ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.

2017ರ ಡಿಸೆಂಬರ್ ಗೆ ಮುಂಚಿನ ವಾಹನಗಳಿಗೆ FASTag ಕಡ್ಡಾಯ2017ರ ಡಿಸೆಂಬರ್ ಗೆ ಮುಂಚಿನ ವಾಹನಗಳಿಗೆ FASTag ಕಡ್ಡಾಯ

ಎಲ್ಲ ವಾಹನಗಳಿಗೆ ಜನವರಿ 1, 2021ರಿಂದ FASTag ಕಡ್ಡಾಯ ಮಾಡಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಯಾವುದೇ ಸಮಸ್ಯೆ ಇಲ್ಲದಂತೆ ಸಂಚರಿಸುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. FASTag ಅಳವಡಿಸಿಕೊಂಡಿರುವುದರಿಂದ ಹೆದ್ದಾರಿ ಬಳಕೆದಾರರಿಗೆ ಟೋಲ್ ಪ್ಲಾಜಾಗಳಲ್ಲಿ ಸಮಯ ಮತ್ತು ಇಂಧನ ಉಳಿತಾಯ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.

FASTag ಮೂಲಕ ಒಂದೇದಿನ 50 ಲಕ್ಷ ಟ್ರಾನ್ಸಾಕ್ಷನ್, 80 ಕೋಟಿ ರು ಸಂಗ್ರಹ

ಕೇಂದ್ರೀಯ ಮೋಟಾರು ವಾಹನ ನಿಯಮದಲ್ಲಿ ತಿದ್ದುಪಡಿ ತಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಪುಷ್ಟಿ ಸಿಕ್ಕಿದೆ ಎಂದು ಕೂಡ ಮಾಹಿತಿ ನೀಡಲಾಗಿದೆ. ದೇಶದ 30,000ಕ್ಕೂ ಹೆಚ್ಚು ಪಾಯಿಂಟ್ ಆಫ್ ಸೇಲ್ (PoS) ಸುಲಭವಾಗಿ FASTag ದೊರೆಯುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ ಬಳಿ ಕಡ್ಡಾಯವಾಗಿ ದೊರೆಯುವಂತೆ ವ್ಯವಸ್ಥೆ ಮಾಡಿರುವುದಾಗಿಯೂ ತಿಳಿಸಲಾಗಿದೆ.

ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಗಳ ಮೂಲಕ ಆನ್ ಲೈನ್ ನಲ್ಲೂ FASTag ದೊರೆಯುತ್ತದೆ. ಜತೆಗೆ ಇಪ್ಪತ್ತೇಳು ಬ್ಯಾಂಕ್ ಗಳ ಜತೆಗೆ ಸಹಭಾಗಿತ್ವ ಹೊಂದಿದೆ. ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್, ಯುಪಿಐ ಮತ್ತು ಪೇಟಿಎಂ, ಜತೆಗೆ My FASTag ಮೊಬೈಲ್ ಅಪ್ಲಿಕೇಷನ್ ಮೂಲಕವೂ ರೀಚಾರ್ಜ್ ಮಾಡಬಹುದು.

ಬಳಕೆದಾರರಿಗೆ ಅನುಕೂಲ ಆಗಲಿ ಎಂದು ಟೋಲ್ ಪ್ಲಾಜಾಗಳ ಬಳಿ ಪಿಒಎಸ್ ವ್ಯವಸ್ಥೆ ಮಾಡಿ, ನಗದು ರೀಚಾರ್ಜ್ ಗೆ ಅನುಕೂಲ ಮಾಡಿಕೊಡಲಾಗಿದೆ. ರೇಡಿಯೋ ಫ್ರೀಕ್ವಿನ್ಸಿ ಐಡೆಂಟಿಫಿಕೇಷನ್ (RFID) ತಂತ್ರಜ್ಞಾನವನ್ನು FASTag ಬಳಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ಇದರಿಂದ ಟೋಲ್ ಪ್ಲಾಜಾದಲ್ಲಿ ನಿಲ್ಲಿಸುವ ಅಗತ್ಯ ಇರುವುದಿಲ್ಲ, ಸಲೀಸಾಗಿ ದಾಟಬಹುದು. FASTagಗೆ ಜೋಡಣೆಯಾದ ಬ್ಯಾಂಕ್ ವ್ಯಾಲೆಟ್ ಮೂಲಕ ಡಿಜಿಟಲ್ ಆಗಿ ಪಾವತಿಯಾಗುತ್ತದೆ.

English summary

User Toll Fee Collection Through FASTag Crosses Rs 80 Crore Per Day: NHAI

On December 24th, 2020 one day user toll fee collection crosses 50 lakhs transaction and Rs 80 crore, said by NHAI.
Story first published: Friday, December 25, 2020, 19:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X