ದೇಶದ ಆರ್ಥಿಕತೆ ಮೇಲೆ ಕೊರೊನಾವೈರಸ್ ತೀವ್ರ ಪರಿಣಾಮ ಬೀರಿದ್ದು, ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗಿದೆ. ಈ ಸಮಸ್ಯೆಯನ್ನು ಎದುರಿಸಲು ಬೇಕಾದ ಹಣಕಾಸು ಅಗತ್ಯಗಳಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಅಮೆರಿಕಾ-ಭಾರತ ವ್ಯಾಪಾರ ಮಂಡಳಿ (USIBC ) ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ನೀಡಿದೆ.
ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅತನು ಚಕ್ರವರ್ತಿ ಅವರಿಗೆ ಮತ್ತು ಆರ್ಥಿಕ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅಧಿಕಾರಿಗಳ ತಂಡಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಸಲಹೆಗಳನ್ನು ನೀಡಲಾಗಿದೆ.

ಹೆಚ್ಚುವರಿಯಾಗಿ ವೆಚ್ಚ ಭರಿಸಲು ಮತ್ತು ಹಣ ಹೊಂದಿಸಲು ಸರ್ಕಾರ ದೇಶಿ ಮಾರುಕಟ್ಟೆಯಲ್ಲಿ ತೆರಿಗೆ ಮುಕ್ತ 'ಕೋವಿಡ್-19' ಬಾಂಡ್‌ಗಳನ್ನು ಬಿಡುಗಡೆ ಮಾಡಲು ಸೂಚಿಸಲಾಗಿದೆ. ಜೊತೆಗೆ ವರದಿಯಲ್ಲಿ ತೆರಿಗೆ, ಹಣಕಾಸು ಮತ್ತು ನಿಯಂತ್ರಣ ಕ್ರಮಗಳನ್ನು ಪಟ್ಟಿ ಮಾಡಲಾಗಿದೆ.
ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸಾಲದ ಬೆಂಬಲ, ಆರೋಗ್ಯ ಕ್ಷೇತ್ರದ ಸಂಸ್ಥೆಗಳಿಗೆ ಹಣಕಾಸು ನೆರವು, ರೈತರ ಆದಾಯ ಹೆಚ್ಚಿಸಲು ಅಲ್ಪಾವಧಿ ಸುಧಾರಣಾ ಕ್ರಮ, ವಿಮಾನಯಾನ ವಲಯಕ್ಕೆ ಅಗತ್ಯ ಬೆಂಬಲ, ಸಾಲ ಹಾಗೂ ಬಡ್ಡಿ ಪಾವತಿ ಪರಿಹಾರ, ಕಸ್ಟಮ್ಸ್ ಡ್ಯೂಟಿ ಸುಧಾರಣೆ, ದೇಶಿ ಕೈಗಾರಿಕಾ ವಲಯದ ಸುಸ್ಥಿರತೆಗೆ ವೇತನ ಪಾವತಿ ಮತ್ತು ಉದ್ಯೋಗ ಉಳಿಸಿಕೊಳ್ಳಲು ಕಂಪನಿಗಳಿಗೆ ನೆರವು ನೀಡುವುದರ ಕುರಿತು ಭಾರತಕ್ಕೆ ಸಲಹೆ ನೀಡಲಾಗಿದೆ.


Click it and Unblock the Notifications