ನವದೆಹಲಿ, ಏಪ್ರಿಲ್ 29: ಭಾರತೀಯ ರೈಲ್ವೇಯು ಭಾರತದ ಮೊದಲ ವಂದೇ ಭಾರತ್ ಮೆಟ್ರೋವನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇದು ನಗರದೊಳಗಿನ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ ಎಂದು ಯೋಜನೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಡಿಮೆ ದೂರದ ವಂದೇ ಭಾರತ್ ಮೆಟ್ರೋ ರೈಲುಗಳ ಪ್ರಾಯೋಗಿಕ ಓಡಾಟಗಳು ಜುಲೈ 2024 ರಲ್ಲಿ ಪ್ರಾರಂಭವಾಗಲಿದೆ. ಈ ರೈಲುಗಳು ಅಂತಿಮವಾಗಿ ದೇಶಾದ್ಯಂತ 124 ನಗರಗಳನ್ನು ಸಂಪರ್ಕಿಸುವ 100-250 ಕಿ.ಮೀ ದೂರದವರೆಗೆ ಚಲಿಸುತ್ತವೆ ಎಂದು ವರದಿಗಳು ತಿಳಿಸಿವೆ.

ಗುರುತಿಸಲಾದ ಮಾರ್ಗಗಳಲ್ಲಿ ಲಕ್ನೋ-ಕಾನ್ಪುರ್, ಆಗ್ರಾ-ಮಥುರಾ ಮತ್ತು ತಿರುಪತಿ-ಚೆನ್ನೈ ಸೇರಿವೆ. ರೈಲುಗಳು ದೊಡ್ಡ ನಗರ ಕೇಂದ್ರಗಳು ಮತ್ತು ಉಪಗ್ರಹ ನಗರಗಳ ನಡುವೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಭಾರತೀಯ ರೈಲ್ವೆಯ ಈಗಿರುವ ಟ್ರ್ಯಾಕ್‌ಗಳಲ್ಲೇ ಚಲಿಸುತ್ತವೆ. ಇದು ಭಾರತದ ರೈಲ್ವೆ ಜಾಲದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಯಶಸ್ವಿ ಸಂಚಾರದ ಯಶಸ್ಸಿನ ಬಳಿಕ ಚಾಲನೆಗೊಳ್ಳುತ್ತಿದೆ.
ವಂದೇ ಭಾರತ್ ಮೆಟ್ರೋಗಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಅದರ ಟ್ರಯಲ್ ರನ್ ಜುಲೈ 2024 ರಿಂದ ಪ್ರಾರಂಭವಾಗುತ್ತದೆ. ತ್ವರಿತ ವೇಗವರ್ಧನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ವಂದೇ ಮೆಟ್ರೋ ನಿಲುಗಡೆ ಸಮಯವನ್ನು ಅತ್ಯುತ್ತಮವಾಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳು 2024 ರಲ್ಲಿ ವಂದೇ ಭಾರತ್ ಮೆಟ್ರೋವನ್ನು ಹೊರತರುವ ಗುರಿಯನ್ನು ಹೊಂದಿದ್ದಾರೆ. "ಇನ್ನೆರಡು ತಿಂಗಳಲ್ಲಿ ಇದರ ಪರೀಕ್ಷೆಯು ಪ್ರಾರಂಭವಾಗುತ್ತದೆ. ಸ್ವಯಂಚಾಲಿತ ಬಾಗಿಲುಗಳು ಮತ್ತು ಹೆಚ್ಚಿನ ಸೌಕರ್ಯದ ಅಂಶಗಳ ಜೊತೆಗೆ ಇದು ಪ್ರಸ್ತುತ ಚಾಲನೆಯಲ್ಲಿರುವ ಮೆಟ್ರೋ ರೈಲುಗಳಲ್ಲಿ ಲಭ್ಯವಿಲ್ಲದ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಮೆಟ್ರೋದ ಹೆಚ್ಚುವರಿ ವೈಶಿಷ್ಟ್ಯಗಳ ವಿವರಗಳು, ಚಿತ್ರಗಳೊಂದಿಗೆ, ಸಾರ್ವಜನಿಕರೊಂದಿಗೆ ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು.
ರೈಲ್ವೇ ಮೂಲಗಳ ಪ್ರಕಾರ, ವಂದೇ ಮೆಟ್ರೋ ವಿಶಿಷ್ಟವಾದ ಕೋಚ್ ಸಂರಚನೆಯನ್ನು ಹೊಂದಿದೆ. ಪ್ರತಿ ಘಟಕವು ನಾಲ್ಕು ಕೋಚ್‌ಗಳನ್ನು ಒಳಗೊಂಡಿರುತ್ತದೆ. ಕನಿಷ್ಠ 12 ಕೋಚ್‌ಗಳು ಸಂಪೂರ್ಣ ವಂದೇ ಮೆಟ್ರೋ ರೈಲನ್ನು ರೂಪಿಸುತ್ತವೆ. ಆರಂಭದಲ್ಲಿ ಕನಿಷ್ಠ 12 ವಂದೇ ಮೆಟ್ರೋ ಕೋಚ್‌ಗಳನ್ನು ಪರಿಚಯಿಸಲಾಗುವುದು, ಮಾರ್ಗದ ಬೇಡಿಕೆಯ ಆಧಾರದ ಮೇಲೆ 16 ಕೋಚ್‌ಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ.
ಆರಂಭದಲ್ಲಿ 12-ಕೋಚ್ ಮೆಟ್ರೋ ಸಂಚಾರ ಮಾಡುತ್ತದೆ. ಆದರೆ ನಗರದ ಬೇಡಿಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಇದನ್ನು 16 ಬೋಗಿಗಳಿಗೆ ವಿಸ್ತರಿಸಬಹುದು. ವಂದೇ ಭಾರತ್ ಮೆಟ್ರೋವನ್ನು ಮೊದಲು ಸ್ವೀಕರಿಸುವ ನಗರವನ್ನು ಆಯ್ಕೆ ಮಾಡಲಾಗುತ್ತಿದೆ.


Click it and Unblock the Notifications