Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತದಾದ್ಯಂತ ಜನಪ್ರಿಯಗೊಂಡಿರುವುದು ನಮಗೆಲ್ಲ ಗೊತ್ತೇ ಇದೆ. ಈಗ ಕೇಂದ್ರ ಸರ್ಕಾರವು ವಂದೇ ಭಾರತ್ ಸ್ಲೀಪರ್ ಕೋಚ್ ಪರಿಚಯಿಸಲು ಮುಂದಾಗಿದೆ. ಸ್ಲೀಪರ್ ಕೋಚ್ ರೈಲುಗಳು ಯಾವಾಗ ಆರಂಭಗೊಳ್ಳಲಿವೆ? ಅವುಗಳ ವಿನ್ಯಾಸ ಹೇಗಿರುತ್ತದೆ? ಎಂಬುದರ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.
ವಂದೇ ಭಾರತ್ ಸ್ಲೀಪರ್ ಕೋಚ್ ಆವೃತ್ತಿಯ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಆವೃತ್ತಿಯು ಹೊಸ ಪರಿಕಲ್ಪನೆಯಾಗಿದೆ ಎಂದು ತಿಳಿಸಿದ್ದಾರೆ. ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು 2024 ರ ಆರಂಭದಲ್ಲಿ ಸಂಚಾರ ಆರಂಭಸಲಿವೆ ಎಂದೂ ಅವರು ತಿಳಿಸಿದ್ದಾರೆ.

ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಮೂಲಕ ರಾತ್ರಿ ಪ್ರಯಾಣಿಸುವ ಯಾತ್ರಿಗಳು ಆದಷ್ಟು ಬೇಗನೇ ತಮ್ಮ ಗಮ್ಯ ಸ್ಥಳಗಳನ್ನು ತಲುಪಬಹುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು ವೇಗವಾಗಿ ಚಲಿಸಲಿದ್ದು, ದೂರ ಪ್ರಯಾಣಿಸುವ ಯಾತ್ರಿಗಳಿಗೆ ಹೇಳಿ ಮಾಡಿಸಿದಂತಿವೆ ಎಂದು ತಿಳಿದುಬಂದಿದೆ. ಪ್ರತಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲನ್ನು ಗಂಟೆಗೆ ಗರಿಷ್ಠ 160 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ. ಈ ರೈಲಿನಲ್ಲಿ 887 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ 16 ವಿಶಾಲವಾದ ಬೋಗಿಗಳು ಇರಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ವಿನ್ಯಾಸದ ರೈಲುಗಳು ವಿಶಾಲವಾದ ಬರ್ತ್‌ಗಳು, ಬೆಳಕಿನಿಂದ ಕೂಡಿದ ಒಳಾಂಗಣಗಳು, ವಿಶಾಲವಾದ ಶೌಚಾಲಯಗಳು, ಕಾಂಪ್ಯಾಕ್ಟ್ ಪ್ಯಾಂಟ್ರಿ ಮತ್ತು ಸುಧಾರಿತ ಸುರಕ್ಷತಾ ನಿಬಂಧನೆಗಳನ್ನು ಒಳಗೊಂಡಿವೆ. ಈ ರೈಲಿನಲ್ಲಿ ಹಲವು ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ಈ ಹೊಸ ರೈಲುಗಳು ಪರಿಸರ ಸ್ನೇಹಿಯಾಗಿ ಇರಲಿವೆ ಎಂದು ತಿಳಿದುಬಂದಿದೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡ ಫೋಟೋಗಳ ಪ್ರಕಾರ, ಸ್ಲೀಪರ್ ಕೋಚ್‌ಗಳು ಮರದ ವಿನ್ಯಾಸವನ್ನು ಒಳಗೊಂಡಿವೆ. ಬೆಲೆಬಾಳುವ ಆಸನ ವ್ಯವಸ್ಥೆಗಳು ಮತ್ತು ಉತ್ತಮ ಟಾಪ್ ಲೈಟ್‌ಗಳಿಂದ ಕೂಡಿವೆ.

ಕಾನ್ಸೆಪ್ಟ್ ಟ್ರೈನ್ - ವಂದೇ ಭಾರತ್ (ಸ್ಲೀಪರ್ ಆವೃತ್ತಿ) ಶೀಘ್ರದಲ್ಲೇ ಬರಲಿದೆ. ಇದು 2024 ರ ಆರಂಭದಲ್ಲಿ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಚೇರ್ ಕಾರ್ ಆವೃತ್ತಿಯಲ್ಲಿ 75 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹೊರತರಲು ಭಾರತೀಯ ರೈಲ್ವೆಯು ಯೋಜಿಸಿದೆ. ಉಳಿದವುಗಳನ್ನು ಸ್ಲೀಪರ್ ಆವೃತ್ತಿಗೆ ಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಮಿಳುನಾಡು ರಾಜಧಾನಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಈ ರೈಲುಗಳು 'ಮೇಕ್-ಇನ್-ಇಂಡಿಯಾ' ಉಪಕ್ರಮವನ್ನು ಸಾಕಾರಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೆಮಿ-ಹೈ-ಸ್ಪೀಡ್ ರೈಲುಗಳನ್ನು ತಯಾರಿಸುವ ಯೋಜನೆಯು 2017 ರ ಮಧ್ಯದಲ್ಲಿ ಪ್ರಾರಂಭವಾಯಿತು. ಜನವರಿ 2019 ರಲ್ಲಿ, ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಯಿತು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications