ರಾಜ್ಯದಲ್ಲಿ ಪ್ರೀಮಿಯಂ ಮಟ್ಟದಲ್ಲಿ ವಂದೇ ಭಾರತ್ ರೈಲು (Vande Bharat Train) ಗುರುತಿಸಿಕೊಂಡಿದೆ. ಇದರ ಸ್ಪೀಡ್, ಗುಣಮಟ್ಟದ ಸೇವೆಯಿಂದಾಗಿ ವಂದೇ ಭಾರತ್ ರೈಲು ಭಾರೀ ಜನಪ್ರಿಯತೆಯನ್ನು ಪಡೆದಿದೆ. ಆದ್ರೆ ಇದೀಗ ವಂದೇ ಭಾರತ್‌ನ ಸ್ಲೀಪರ್ ರೈಲಿನ ಆಗಮನಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಆದರೆ ವಂದೇ ಭಾರತ್ ಸ್ಲೀಪರ್ ರೈಲಿನ (Sleeper Train) ಸೇವೆಯ ಆರಂಭಕ್ಕೆ ಪ್ರತೀ ಬಾರಿ ಹಿನ್ನಡೆಯೇ ಆಗುತ್ತಿದೆ.

ಇದೀಗ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಮತ್ತೊಂದು ಹಿನ್ನಡೆಯಾಗಿದೆ. ಕಳೆದ ಬಾರಿ ಗುಣಮಟ್ಟದ ಸಮಸ್ಯೆಯಿಂದ ವಂದೇ ಭಾರತ್ ಸ್ಲೀಪರ್ ರೈಲಿನ ಆಗಮನಕ್ಕೆ ವಿಳಂಬವಾಗಿತ್ತು. ಇದೀಗ ಮತ್ತೆ ಗುಣಮಟ್ಟದ ಸಮಸ್ಯೆಗಳಿಂದಾಗಿ ಎರಡು ರೈಲುಗಳನ್ನು ಸರಿಪಡಿಸುವ ಕಾರ್ಯಕ್ಕಾಗಿ BEML ನ ಬೆಂಗಳೂರು ಘಟಕಕ್ಕೆ ಕಳುಹಿಸಲಾಗಿದೆ.
ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಜನವರಿಯಲ್ಲಿ ಕಾರ್ಯಾರಂಭ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ BEML ನ ಬೆಂಗಳೂರು ಘಟಕವನ್ನು ತಲುಪಿದೆ. ಅಲ್ಲದೇ ಎರಡನೇ ರೇಕ್ ಕೂಡಾ ಕಳೆದ ವಾರ 180 kmph ಪರೀಕ್ಷೆಗಳನ್ನು ಮುಗಿಸಿದ್ದು, ಅದೂ ಕೂಡಾ ಈಗ BEML ಘಟಕದಲ್ಲಿ ರಿಪೇರಿ ಕಾರ್ಯಗಳಿಗೆ ಒಳಪಡಲಿದೆ.
ದಿನೇ ದಿನೇ ತಡವಾಗುತ್ತಿದೆ ವಂದೇ ಭಾರತ್ ಸ್ಲೀಪರ್ ರೈಲು!
BEML ನ ಸ್ಲೀಪರ್ ರೈಲಿನ ಕಾರ್ಯಾರಂಭಕ್ಕೆ ದಿನೇ ದಿನೇ ಅಡ್ಡಿ ಎದುರಾಗುತ್ತಲೇ ಇದೆ. ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಡಿಸೆಂಬರ್ 2024 ರೊಳಗೆ ಸೇವೆಯನ್ನು ಆರಂಭಿಸುವ ನಿರೀಕ್ಷೆಯಿತ್ತು, ಆದರೆ ಹಲವಾರು ಸಮಸ್ಯೆಗಳಿಂದಾಗಿ ಇದೀಗ ಮತ್ತಷ್ಟು ವಿಳಂಬವಾಗಿದೆ.
ಮಾಧ್ಯಮ ವರದಿ ಪ್ರಕಾರ, ಮೊದಲ ಮತ್ತು ಎರಡನೇ ರೇಕ್‌ಗಳು ರಿಪೇರಿ ಮತ್ತು ಕೆಲವು ಕೆಲಸಗಳು ಬಾಕಿ ಇರುವ ಕಾರಣ BEML ಬೆಂಗಳೂರು ಘಟಕ ಕೆಲಸ ಮಾಡುತ್ತಿದೆ. ಈ ಹಿನ್ನೆಲೆ ಕಾರ್ಯಾಚರಣೆ ಪ್ರಾರಂಭ ಮತ್ತಷ್ಟು ವಿಳಂಬವಾಗಿದೆ.
ವಿಳಂಬಕ್ಕೆ ಕಾರಣಗಳೇನು?
"ಇನ್ನು ವಂದೇ ಭಾರತ್ ಸ್ಲೀಪರ್ ರೈಲಿನ ಮೊದಲ ರೇಕ್ ಗುಣಮಟ್ಟದ ಸಮಸ್ಯೆಗಳನ್ನು ಹೊಂದಿದ್ದರೆ, ಎರಡನೇ ರೇಕ್‌ನಲ್ಲಿ ಇನ್ನೂ ಕೆಲವು ಕೆಲಸಗಳು ಬಾಕಿ ಇವೆ, ಇದೇ ಕಾರಣದಿಂದ ವಿಳಂಬವಾಗುತ್ತಿದೆ" ಎಂದು ಹೇಳಲಾಗಿದೆ.
ICF Superintendent ಯು. ಸುಬ್ಬಾ ರಾವ್ ಮಾತನಾಡಿ, ಎರಡೂ ರೈಲುಗಳ ಒಳಾಂಗಣ ವಿನ್ಯಾಸದಲ್ಲಿ ಅಪ್ಡೇಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. "ಮೊದಲ ರೇಕ್‌ನಲ್ಲಿ ಕೆಲವು ಸಮಸ್ಯೆಗಳಿದ್ದವು, ಅದನ್ನು ಸರಿಪಡಿಸುವ ಉದ್ದೇಶದಿಂದ ಮತ್ತೆ ಘಟಕ್ಕೆ ಕಳುಹಿಸಲಾಗಿದೆ. ಮುಂದಿನ 5-10 ದಿನಗಳಲ್ಲಿ ಅದು ಸರಿಯಾಗಲಿದೆ. ಒಳಾಂಗಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಮಾತ್ರ ಉಳಿದಿವೆ. ಅವುಗಳನ್ನು ಸಹ ಶೀಘ್ರದಲ್ಲೇ ಸರಿಪಡಿಸಲಾಗುತ್ತದೆ" ಎಂದು ರಾವ್ ಮಾಧ್ಯಮದೊಂದಿಗೆ ಹೇಳಿದ್ದಾರೆ.
ಅಲ್ಲದೇ ಎರಡನೇ ರೇಕ್ ಅನ್ನು ಕೂಡ ಸರಿಪಡಿಸಲು ಕಳುಹಿಸಲಾಗುತ್ತಿದೆ ಎಂದು ಹೇಳಿರುವ ರಾವ್, "ಮೊದಲಿಗೆ, ನಾವು ರೈಲಿನ ಒಳಾಂಗಣ ವಿನ್ಯಾಸದ ಬಗ್ಗೆ ಅಸಮಾಧಾನಗೊಂಡಿದ್ದೇವೆ. ಅದಕ್ಕಾಗಿ ಕೆಲವು ಸುಧಾರಣೆಗಳನ್ನು ಮಾಡುವಂತೆ ಸೂಚಿಸಿದ್ದೇವೆ. ಅದೇ ರೀತಿ ವಿನ್ಯಾಸ ಬದಲಾವಣೆ, ಸ್ಕ್ರೀನ್ ಬದಲಾವಣೆ ಸೇರಿದಂತೆ ಇನ್ನೂ ಕೆಲಸಗಳು ಬಾಕಿ ಇವೆ. BEML ಅವುಗಳನ್ನು ಶೀಘ್ರದಲ್ಲೇ ಮಾಡಲಿದೆ" ಎಂದು ಅವರು ಹೇಳಿದರು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications