ಕೊರೊನಾ ವಿರುದ್ಧ ಹೋರಾಟಕ್ಕೆ 100 ಕೋಟಿ ಘೋಷಿಸಿದ ಉದ್ಯಮಿ ಅನಿಲ್ ಅಗರ್ವಾಲ್

ಕೊರೊನಾವೈರಸ್ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಮಾರಣಾಂತಿಕ ಸವಾಲಾಗಿ ಬಿಟ್ಟಿದೆ. ಭಾರತದಲ್ಲೂ ದಿನೇ ದಿನೇ ಸೋಂಕು ಪ್ರಕರಣಗಳು ಹೆಚ್ಚುತ್ತಾ ಹೋಗುತ್ತಿದ್ದು, ಈಗಾಗಲೇ ಎಂಟು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈ ವೇಳೆ ಈ ಮಹಾಮಾರಿ ವಿರುದ್ಧ ಹೋರಾಡಲು ಹಣದ ಸಹಾಯಕ್ಕೆ ಉದ್ಯಮಿಗಳು ಮುಂದಾಗಿದ್ದಾರೆ.

ಲೋಹ ಹಾಗೂ ಗಣಿಗಾರಿಕೆ ಉದ್ಯಮಿ ಅನಿಲ್ ಅಗರ್ವಾಲ್ ಅವರು ಮಾರಣಾಂತಿಕ ವೈರಸ್ ವಿರುದ್ಧ ಹೋರಾಡಲು 100 ಕೋಟಿ ರುಪಾಯಿ ನೀಡುವುದಾಗಿ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಡಲು ಹಣ ಸಹಾಯಕ್ಕೆ ಮುಂದಾದ ಶ್ರೀಮಂತರಲ್ಲಿ ಇವರು ಒಬ್ಬರಾಗಿದ್ದಾರೆ.

ಕೊರೊನಾ ವಿರುದ್ಧ ಹೋರಾಟಕ್ಕೆ 100 ಕೋಟಿ ಘೋಷಿಸಿದ ಅನಿಲ್ ಅಗರ್ವಾಲ್

''ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾನು 100 ಕೋಟಿ ಹಣವನ್ನು ನೀಡುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ಇದು ನಮ್ಮ ದೇಶಕ್ಕೆ ನಮ್ಮಿಂದ ಅಗತ್ಯವಿರುವ ಸಮಯವಾಗಿದೆ. ಅನೇಕ ಜನರು ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಮತ್ತು ದೈನಂದಿನ ವೇತನ ಪಡೆಯುವವರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ, ನಾವು ಸಹಾಯ ಮಾಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. " ಎಂದು ವೇದಾಂತ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕ ಅನಿಲ್ ಅಗರ್ವಾಲ್ ಹೇಳಿದ್ದಾರೆ.

ಇದೇ ವರ್ಷ ಜನವರಿಯಲ್ಲಿ ಅಲಿಬಾಬಾ ಸಂಸ್ಥಾಪಕ ಜ್ಯಾಕ್‌ ಮಾ ಕೊರೊನಾ ವಿರುದ್ಧ ಹೋರಾಟಕ್ಕೆ 14.4 ಮಿಲಿಯನ್ ಅಮೆರಿಕನ್ ಡಾಲರ್ ದೇಣಿಗೆ ನೀಡಿದ್ದರು. ಫೆಬ್ರವರಿಯಲ್ಲಿ ಬಿಲ್‌ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯನ್ ಡಾಲರ್ ಹಣವನ್ನು ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+