ಫಾಕ್ಸ್‌ಕಾನ್ ಎಂದೇ ಪ್ರಸಿದ್ಧವಾದ ತೈವಾನ್ ಮೂಲದ ಹೊನ್ ಹೈ ಟೆಕ್ನಾಲಜಿ ಗ್ರೂಪ್ ಜುಲೈ 10 ರಂದು ವೇದಾಂತ ಗ್ರೂಪ್‌ನೊಂದಿಗಿನ ತನ್ನ ಜಂಟಿ ಉದ್ಯಮದಿಂದ ಹಿಂದೆ ಸರಿದಿದೆ. ಇದು ಸೆಮಿಕಂಡಕ್ಟರ್ ಡೀಲ್ ಆಗಿದೆ. ಇದಾದ ಬೆನ್ನಲ್ಲೇ ಜುಲೈ 11ರಂದು ಸ್ಟಾಕ್ ಮಾರುಕಟ್ಟೆಯಲ್ಲಿ ವೇದಾಂತ ಸ್ಟಾಕ್ ಕುಸಿಯುತ್ತಿದೆ.
ಫಾಕ್ಸ್‌ಕಾನ್ ವೇದಾಂತ ಜೊತೆಗೆ ಮಾಡಿಕೊಂಡಿದ್ದ ಸುಮಾರು 19.5 ಬಿಲಿಯನ್ ಡಾಲರ್ ಹೂಡಿಕೆಯ ಸೆಮಿಕಂಡಕ್ಟರ್ ಡೀಲ್‌ನಿಂದ ಹಿಂದೆ ಸರಿದಿದೆ. ಇದಾದ ಬೆನ್ನಲ್ಲೇ ಮಂಗಳವಾರ ವೇದಾಂತ ಸ್ಟಾಕ್ ವಹಿವಾಟಿನ ಮಧ್ಯದಲ್ಲಿ ಸುಮಾರು ಶೇಕಡ 2ರಷ್ಟು ಇಳಿಕೆ ಕಂಡು 274.90 ರೂಪಾಯಿಗೆ ತಲುಪಿದೆ. ವೇದಾಂತದೊಂದಿಗೆ ಡೀಲ್‌ಗಾಗಿ ಈಗಾಗಲೇ ಹಲವಾರು ಸಂಸ್ಥೆಗಳು ಸರತಿ ಸಾಲಿನಲ್ಲಿದೆ ಎಂದು ವೇದಾಂತ ಹೇಳಿಕೊಂಡಿದೆ.

"ಫಾಕ್ಸ್‌ಕಾನ್ ಈಗ ವೇದಾಂತದ ಸಂಪೂರ್ಣ ಸ್ವಾಮ್ಯದ ಘಟಕದಿಂದ ಫಾಕ್ಸ್‌ಕಾನ್ ಒಪ್ಪಂದವನ್ನು ರದ್ದು ಮಾಡಲು ನಿರ್ಧಾರ ಮಾಡಿದೆ. ಫಾಕ್ಸ್‌ಕಾನ್ ಘಟಕಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಮೂಲ ಹೆಸರನ್ನು ಇಡುವ ಪ್ರಯತ್ನಗಳು ಭವಿಷ್ಯದಲ್ಲಿ ಮಧ್ಯಸ್ಥಗಾರರಿಗೆ ಗೊಂದಲ ಉಂಟು ಮಾಡುತ್ತದೆ," ಎಂದು ಸಂಸ್ಥೆಯು ಸೋಮವಾರ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ವೇದಾಂತ ಏನು ಹೇಳುತ್ತದೆ?
ಫಾಕ್ಸ್‌ಕಾನ್ ತನ್ನ ಜೊತೆಗಿನ ಸೆಮಿಕಂಡಕ್ಟರ್ ಡೀಲ್‌ನಿಂದ ಹೊರನಡೆಯುತ್ತಿದ್ದಂತೆ ವೇದಾಂತ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದೆ. ನಮ್ಮೊಂದಿಗೆ ಈ ಯೋಜನೆಯಲ್ಲಿ ಪಾಲುದಾರಿಗೆ ಮಾಡಿಕೊಳ್ಳಲು ಇತರ ಪಾಲುದಾರರು ಸಾಲು ನಿಂತಿದ್ದಾರೆ ಎಂದು ವೇದಾಂತ ಹೇಳಿಕೊಂಡಿದೆ. "ನಾವು ನಮ್ಮ ಸೆಮಿಕಂಡಕ್ಟರ್ ತಂಡವನ್ನು ಬೆಳೆಸುವ ಪ್ರಯತ್ನವನ್ನು ಮಾಡುತ್ತೇವೆ. ಈಗಾಗಲೇ ಐಡಿಎಂನಿಂದ 40nm (ಚಿಪ್‌ಗಳು) ತಯಾರಿಕೆಗಾಗಿ ನಾವು ಪರವಾನಗಿಯನ್ನು ಪಡೆದುಕೊಂಡಿದ್ದೇವೆ," ಎಂದು ತಿಳಿಸಿದೆ.
"ನಾವು ಪ್ರೊಡಕ್ಷನ್-ಗ್ರೇಡ್ 28 nm ಗಾಗಿ ಶೀಘ್ರದಲ್ಲೇ ಪರವಾನಗಿಯನ್ನು ಪಡೆದುಕೊಳ್ಳುತ್ತೇವೆ. ವೇದಾಂತವು ಪ್ರಧಾನಮಂತ್ರಿಯವರ ಸೆಮಿಕಂಡಕ್ಟರ್‌ಗಳ ಕನ್ನೋಟವನ್ನು ಪೂರೈಕೆ ಮಾಡಲು ತನ್ನ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಳ ಮಾಡಿದೆ," ಎಂದು ವೇದಾಂತ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.
ಷೇರು ಮಾರುಕಟ್ಟೆಯಲ್ಲಿ ವೇದಾಂತ ಸ್ಟಾಕ್ ಹೇಗಿದೆ?
ಬಿಎಸ್‌ಇ ಮೆಟಲ್ ಸೂಚ್ಯಂಕ ಸುಮಾರು ಶೇಕಡ 1.45ರಷ್ಟು ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ. ಇದಕ್ಕೆ ಹೋಲಿಕೆ ಮಾಡಿದಾಗ ವೇದಾಂತ ಸ್ಟಾಕ್ ಕಳೆದ ವರ್ಷದ ನಿರ್ದಿಷ್ಟ ಇದೇ ದಿನದಿಂದ ಈವರೆಗೆ ಶೇಕಡ 11.78ರಷ್ಟು ಕುಸಿತವಾಗಿದೆ. ಕಳೆದ ವಾರದಲ್ಲಿ ವೇದಾಂತ ಪೋರ್ಟ್‌ಪೋಲಿಯೋಗೆ ಸೆಮಿಕಂಡಕ್ಟರ್‌ಗಳು ಮತ್ತು ಡಿಸ್‌ಪ್ಲೇ ಗ್ಲ್ಯಾಸ್ ವೆಂಚರ್ ಸೇರ್ಪಡೆಯಾಗಿದೆ.ಇದಾದ ಬಳಿಕ ಕಳೆದ ಶುಕ್ರವಾರದಿಂದ ವೇದಾಂತ ಸ್ಟಾಕ್ ಪ್ರಮುಖ ಸ್ಟಾಕ್ ಎನಿಸಿಕೊಂಡಿದೆ.
ಭಾರತದಲ್ಲಿ 2022ರಲ್ಲಿ ಸೆಮಿಕಂಡಕ್ಟರ್‌ಗಳ ಮಾರುಕಟ್ಟೆಯು 24 ಬಿಲಿಯನ್ ಡಾಲರ್ ಆಗಿದೆ. 2026ರ ವೇಳೆಗೆ ಸೆಮಿಕಂಡಕ್ಟರ್‌ಗಳ ಮಾರುಕಟ್ಟೆಯು 80 ಬಿಲಿಯನ್ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಡಿಸ್‌ಪ್ಲೇ ಪ್ಯಾನೆಲ್ ಮಾರುಕಟ್ಟೆಯು ಪ್ರಸ್ತುತ 7 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದು, 2025 ರ ವೇಳೆಗೆ 15 ಬಿಲಿಯನ್ ಡಾಲರ್ ಮಾರುಕಟ್ಟೆಯಾಗಿ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.
ವೇದಾಂತ ಷೇರು ಮಾರುಕಟ್ಟೆ ದರ
ಫಾಕ್ಸ್‌ಕಾನ್ ವೇದಾಂತದೊಂದಿಗೆ ಸೆಮಿಕಂಡಕ್ಟರ್ ಒಪ್ಪಂದವನ್ನು ರದ್ದುಗೊಳಿಸಿದೆ. ಭಾರತೀಯ ಆಟೋಮೋಟಿವ್ ಇಂಡಸ್ಟ್ರೀಯಲ್ಲಿ ಸೆಮಿಕಂಡಕ್ಟರ್ ಕೊರತೆಯು ಈಗ ಒಂದು ಪ್ರಮುಖ ಸಮಸ್ಯೆಯಾಗಿದೆ. ಈ ಒಪ್ಪಂದ ರದ್ದು ವೇದಾಂತ ಮೇಲೆ ಪ್ರಭಾವ ಬೀರಿದೆ. ಸ್ಟಾಕ್ ಮಾರುಕಟ್ಟೆಯ ದರದ ಮೇಲೆಯೂ ಪ್ರಭಾವ ಉಂಟಾಗಿದೆ.
ಪ್ರಸ್ತುತ ಈ ಸಮಯಕ್ಕೆ ವೇದಾಂತ ಸ್ಟಾಕ್ ಶೇಕಡ 1.49ರಷ್ಟು ಇಳಿಕೆಯಾಗಿದ್ದು, 278.05 ರೂಪಾಯಿಗೆ ತಲುಪಿದೆ. ಈ ಸ್ಟಾಕ್ ಅನ್ನು ಹೊಂದಿರುವವರು ಬೆಲೆ ಕಡಿಮೆಯಾಗುವಾಗ ಖರೀದಿ ಮಾಡಿ, ಬೆಲೆ ಹೆಚ್ಚಳವಾಗುವಾಗ ಅದರ ಲಾಭವನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಇನ್ನು ಕೆಲವರು ಹೋಲ್ಡ್ ಮಾಡುವುದು ಉತ್ತಮ ಎಂದು ತಿಳಿಸುತ್ತಾರೆ.
ಗಮನಿಸಿ:
ಮಾರುಕಟ್ಟೆ ತಜ್ಞರುಗಳ ಅಭಿಪ್ರಾಯವನ್ನು ಈ ಮೇಲೆ ನಾವು ತಿಳಿಸಿದ್ದೇವೆ. ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಆಗಲಿ ಅಥವಾ ಲೇಖಕರು ತಮ್ಮ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಿಲ್ಲ. ಈ ಲೇಖನದ ಆಧಾರದಲ್ಲಿ ಹೂಡಿಕೆದಾರರು ಯಾವುದೇ ನಿರ್ಧಾರವನ್ನು ಕೈಗೊಂಡರೆ ಅದರಿಂದಾಗುವ ನಷ್ಟಕ್ಕೆ ಗುಡ್‌ರಿಟರ್ನ್ಸ್ ಆಗಲಿ ಅಥವಾ ಲೇಖಕರಾಗಲಿ ಜವಾಬ್ದಾರರಲ್ಲ. ತಜ್ಞರ ಸಲಹೆಯನ್ನು ಪಡೆದು ಹೂಡಿಕೆ ಮಾಡುವುದು ಉತ್ತಮ ಆಯ್ಕೆ.


Click it and Unblock the Notifications