ಖಾದಿ ಮತ್ತು ಗ್ರಾಮ ಕೈಗಾರಿಕೆ ಆಯೋಗ ಅಭಿವೃದ್ಧಿಪಡಿಸಿರುವ ಹೊಸ ಬಗೆಯ ಪೇಂಟ್ ಅನ್ನು ಮಂಗಳವಾರದಂದು (12 ಜನವರಿ 2021) ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟನೆ ಮಾಡಲಿದ್ದಾರೆ. ಇದಕ್ಕೆ "ಖಾದಿ ಪ್ರಾಕೃತಿಕ್ ಪೇಂಟ್" ಎಂದು ಹೆಸರು ನೀಡಲಾಗಿದೆ. ಇದು ಮೊದಲ ಪರಿಸರ ಸ್ನೇಹಿ ಪೇಂಟ್ ಆಗಿದೆ. ರಾಸಾಯನಿಕ ಮುಕ್ತ, ಶಿಲೀಂಧ್ರವಿರೋಧಿ ಹಾಗೂ ಬ್ಯಾಕ್ಟಿರೀಯಾ ವಿರೋಧಿ ಅಂಶಗಳನ್ನು ಹೊಂದಿದೆ.
ಖಾದಿ ಪ್ರಾಕೃತಿಕ್ ಪೇಂಟ್ ನಲ್ಲಿ ಪ್ರಮುಖವಾಗಿ ಹಸುವಿನ ಸಗಣಿ ಇರುತ್ತದೆ ಎಂದು ಕಿರು ಮತ್ತು ಮಧ್ಯಮ ಸಂಸ್ಥೆಗಳ ಸಚಿವಾಲಯದಿಂದ ತಿಳಿಸಲಾಗಿದೆ. ಖಾದಿ ಪ್ರಾಕೃತಿಕ್ ಪೇಂಟ್ ದರ ಕಡಿಮೆ ಇರುತ್ತದೆ ಮತ್ತು ವಾಸನಾರಹಿತ ಆಗಿದ್ದು, ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಂದ ಪ್ರಮಾಣೀಕೃತವಾಗಿರುತ್ತದೆ.
ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, ಖಾದಿ ಪ್ರಾಕೃತಿಕ ಪೇಂಟ್ ಎರಡು ಬಗೆಯಲ್ಲಿ ದೊರೆಯುತ್ತದೆ- ಡಿಸ್ಟೆಂಪರ್ ಪೇಂಟ್ ಮತ್ತು ಪ್ಲಾಸ್ಟಿಕ್ ಎಮಲ್ಷನ್ ಪೇಂಟ್. ರೈತರ ಆದಾಯ ಹೆಚ್ಚಳ ಆಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಗಮನದಲ್ಲಿ ಇಟ್ಟುಕೊಂಡು, ರೂಪಿಸಿರುವ ಯೋಜನೆ ಇದು. ಕಳೆದ ವರ್ಷ ಮಾರ್ಚ್ ನಲ್ಲಿ ಈ ಯೋಜನೆಯನ್ನು ರೂಪಿಸಲಾಯಿತು.

ಆ ಕುಮಾರಪ್ಪ ನ್ಯಾಷನಲ್ ಹ್ಯಾಂಡ್ ಮೇಡ್ ಪೇಪರ್ ಇನ್ ಸ್ಟಿಟ್ಯೂಟ್ ನಿಂದ ಅಭಿವೃದ್ಧಿ ಮಾಡಲಾಯಿತು ಎಂದು ಎಂಎಸ್ ಎಂಇ ಸಚಿವಾಲಯದಿಂದ ತಿಳಿಸಲಾಗಿದೆ. ಈ ಪೇಂಟ್ ನಲ್ಲಿ ಪಾದರಸ, ಕ್ರೋಮಿಯಂ, ಆರ್ಸೆನಿಕ್, ಕ್ಯಾಡ್ಮಿಯಂ ಸೇರಿದಂತೆ ಇತರ ಯಾವುದೇ ಲೋಹವನ್ನು ಬಳಕೆ ಮಾಡಿಲ್ಲ.
ಈ ಪೇಂಟ್ ಗೆ ಹಸುವಿನ ಸಗಣಿಯನ್ನು ಮುಖ್ಯ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ಆ ಕಾರಣಕ್ಕೆ ರೈತರಿಗೆ ಮತ್ತು ಗೋಶಾಲೆಗಳಿಗೆ ಹೆಚ್ಚುವರಿ ಆದಾಯ ಬರುವುದಕ್ಕೆ ಸಹಾಯ ಆಗುತ್ತದೆ. ಸರ್ಕಾರದ ಅಂದಾಜಿನ ಪ್ರಕಾರ, ಈ ಪೇಂಟ್ ಮಾರಾಟದಿಂದ ರೈತರಿಗೆ ಒಂದು ರಾಸುವಿಗೆ 30 ಸಾವಿರ ರುಪಾಯಿ ಹೆಚ್ಚುವರಿ ಆದಾಯ ಬರುತ್ತದೆ.
ಪ್ರಾಕೃತಿಕ ಡಿಸ್ಟೆಂಪರ್ ಮತ್ತು ಎಮಲ್ಷನ್ ಅನ್ನು ಮೂರು ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಮುಂಬೈನ ನ್ಯಾಷನಲ್ ಟೆಸ್ಟ್ ಹೌಸ್, ಶ್ರೀ ರಾಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ರೀಸರ್ಚ್ ನವದೆಹಲಿ ಹಾಗೂ ಘಾಜಿಯಾಬಾದ್ ನ ನ್ಯಾಷನಲ್ ಟೆಸ್ಟ್ ಹೌಸ್ ನಲ್ಲಿ ಪರೀಕ್ಷೆ ಮಾಡಲಾಗಿದೆ.
ಖಾದಿ ಪ್ರಾಕೃತಿಕ್ ಎಮಲ್ಷನ್ ಪೇಂಟ್ BIS 15483: 2013 ಗುಣಮಟ್ಟ ಮತ್ತು ಖಾದಿ ಪ್ರಾಕೃತಿಕ್ ಡಿಸ್ಟೆಂಪರ್ ಪೇಂಟ್ BIS 428: 2013 ಗುಣಮಟ್ಟವನ್ನು ಹೊಂದಿದೆ.


Click it and Unblock the Notifications