ವಾಹನ ದಾಖಲಾತಿಗಳ ನವೀಕರಣಕ್ಕೆ ಜೂನ್ 30ರ ತನಕ ಅವಕಾಶ

ವಾಹನದ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ಪರ್ಮಿಟ್ ಮತ್ತು ನೋಂದಣಿ ಈಗಾಗಲೇ ಅವಧಿ ಮೀರಿದ್ದರೆ ಅವುಗಳನ್ನು ನವೀಕರಣ ಮಾಡಲು ಜೂನ್ 30ರ ತನಕ ಸಮಯ ನೀಡಿದೆ. ಫೆಬ್ರವರಿ 1ರಿಂದ ಅವಧಿ ಮೀರಿದ್ದಲ್ಲಿ ಈ ಅವಕಾಶ ದೊರೆಯಲಿದೆ. ಕೊರೊನಾ ವೈರಾಣು ವ್ಯಾಪಿಸುವುದನ್ನು ತಡೆಗಟ್ಟಲು ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಗೆ ದೇಶದಾದ್ಯಂತ ಕರೆ ನೀಡಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಯ ಘೋಷಣೆ ಬಂದಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ಎಲ್ಲ ರಾಜ್ಯಗಳ ಅಧಿಕಾರಿಗಳಿಗೆ ಈ ದಾಖಲಾತಿಗಳನ್ನೇ ಜೂನ್ 30ರ ತನಕ ಪರಿಗಣಿಸುವಂತೆ ಸೂಚಿಸಿದೆ. ಜತೆಗೆ ಈ ಅವಧಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಸರಕು ಸಾಗಣೆಗೆ ಅನುವು ಮಾಡಿಕೊಡುವಂತೆ ಕೂಡ ಸೂಚನೆಯನ್ನು ನೀಡಿದೆ.

ವಾಹನ ದಾಖಲಾತಿಗಳ ನವೀಕರಣಕ್ಕೆ ಜೂನ್ 30ರ ತನಕ ಅವಕಾಶ

ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನ ನಿಯಮ ಅನುಸಾರ ವಿವಿಧ ದಾಖಲಾತಿಗಳನ್ನು ನವೀಕರಿಸಲು ನಾಗರಿಕರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ಏಪ್ರಿಲ್ 14ನೇ ತಾರೀಕಿನ ತನಕ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+