ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಪ್ರತಿ ತಿಂಗಳು ಸಹ ನಿಗದಿ ಮಾಡಲಾಗುತ್ತದೆ. ಗ್ರಾಹಕರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೆ ಜಾರಿಗೆ ತಂದಿರುವ ನಿಯಮ ಇದು. ಇದೀಗ ಮತ್ತೊಂದು ಸುದ್ದಿ ಬಂದಿದೆ. ಇದರಿಂದ ಇನ್ನಷ್ಟು ನಿರಾಳ ಆಗಬಹುದು. ಸದ್ಯಕ್ಕೆ 14 ಕೇಜಿ ತೂಕದ ಎಲ್ ಪಿಜಿ ಅಡುಗೆ ಅನಿಲ್ ಸಿಲಿಂಡರ್ ಮಾತ್ರ ಖರೀದಿಸಲು ಸಾಧ್ಯ.
ಆದರೆ, ಇನ್ನು ಮುಂದೆ ಎಷ್ಟು ಮೊತ್ತಕ್ಕೆ ಎಲ್ ಪಿಜಿ ಅಗತ್ಯವೋ ಅಷ್ಟಕ್ಕೆ ಮಾತ್ರ ಖರೀದಿ ಮಾಡುವಂಥ ವ್ಯವಸ್ಥೆ ಬರಲಿದೆ. ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ, ಈ ಹೊಸ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಇದರಿಂದ ಗ್ರಾಹಕರು ತಮ್ಮ ಬಳಿ ಇರುವ ಹಣಕ್ಕೆ ತಕ್ಕಷ್ಟು ಅಥವಾ ಅಗತ್ಯಕ್ಕೆ ತಕ್ಕಷ್ಟು ಖರೀದಿಸಬಹುದು.
ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರುವ ನಿಯಮ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಬಡವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪೆಟ್ರೋಲಿಯಂ ಸಚಿವಾಲಯ ಈ ಸುಧಾರಣೆ ತರಲು ಮುಂದಾಗಿದೆ. ಹಾಗೆ ಈ ನಿಯಮ ಬಂದರೆ ಅಗತ್ಯಕ್ಕೆ ತಕ್ಕಷ್ಟು ಎಲ್ ಪಿಜಿ ಖರೀದಿಸಬಹುದು. ಆಗ 14 ಕೇಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಖರೀದಿ ಮಾಡಲೇಬೇಕು ಎಂಬ ಕಡ್ಡಾಯ ಇಲ್ಲ. ಈ ನಡೆಯಿಂದ ಅಂದಾಜು ಎಂಟು ಕೋಟಿಯಷ್ಟಿರುವ ಉಜ್ವಲ ಫಲಾನುಭವಿಗಳಿಗೆ ಅನುಕೂಲ ಆಗಲಿದೆ.
ಮೊಬೈಲ್ ವ್ಯಾನ್ ಗಳ ನಿಯೋಜನೆ
ಇನ್ನೊಂದು ಸುದ್ದಿ ಹರಿದಾಡುತ್ತಿದೆ. ಅದರ ಪ್ರಕಾರವೇ ಹೇಳುವುದಾದರೆ, ಇದಕ್ಕಾಗಿಯೇ ಎಲ್ ಪಿಜಿ ಮೊಬೈಲ್ ವ್ಯಾನ್ ಗಳನ್ನು ನಿಯೋಜನೆ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಎಲ್ ಪಿಜಿ ಖರೀದಿಸಬಹುದು. 100- 150 ರುಪಾಯಿಗೂ ಎಲ್ ಪಿಜಿ ಖರೀದಿ ಮಾಡಬಹುದು. ಆ ಮೂಲಕ ಈಗ ನೀಡುತ್ತಿರುವಂತೆ ವರ್ಷಕ್ಕೆ ಹನ್ನೆರಡು ಸಬ್ಸಿಡಿ ಸಹಿತ ಎಲ್ ಪಿಜಿಗಾಗಿ ಖರ್ಚು ಮಾಡುವ ಸಬ್ಸಿಡಿಯೂ ಕಡಿಮೆ ಆಗುತ್ತದೆ.
ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 40 USD
ಜುಲೈ ತಿಂಗಳಲ್ಲಿ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಸತತ ಎರಡನೇ ತಿಂಗಳು ಏರಿಕೆ ಆಗಿತ್ತು. ಪ್ರತಿ ಸಿಲಿಂಡರ್ ಗೆ 1ರಿಂದ 4.5 ರುಪಾಯಿ ಹೆವ್ವಳ ಆಗಿತ್ತು. ಮೇ ತಿಂಗಳಲ್ಲಿ ಭರ್ಜರಿ ಇಳಿಕ್ ಕಂಡಿದ್ದ ಬೆಲೆಯು ಆ ನಂತರ ಸತತ ಎರಡು ತಿಂಗಳು ಏರು ಮುಖವಾಗಿದೆ ಸಿಲಿಂಡರ್ ಬೆಲೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಎಷ್ಟಿದೆ ಎಂಬುದರ ಆಧಾರ ಮೇಲೆ ಎಲ್ ಪಿಜಿ ದರ ಕೂಡ ನಿಗದಿ ಆಗುತ್ತದೆ. ಸದ್ಯಕ್ಕೆ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 40 ಯುಎಸ್ ಡಿಯಂತೆ ವಹಿವಾಟು ನಡೆಸುತ್ತಿದೆ.


Click it and Unblock the Notifications