ರೀಚಾರ್ಜ್ ಮಾಡಿಸಿ, ಹಣ ಗಳಿಸಿ: ವೊಡಾಫೋನ್, ಏರ್ ಟೆಲ್ ನಿಂದಲೂ ಆಫರ್

ರಿಲಯನ್ಸ್ ಜಿಯೋ ಹಾದಿಯನ್ನೇ ಟೆಲಿಕಾಂ ಕಂಪೆನಿಗಳಾದ ವೊಡಾಫೋನ್ ಐಡಿಯಾ, ಭಾರ್ತಿ ಏರ್ ಟೆಲ್ ಕೂಡ ಅನುಸರಿಸುತ್ತಿವೆ. ವೊಡಾಫೋನ್ ಐಡಿಯಾದ ಇತರ ನಂಬರ್ ಗೆ ರೀಚಾರ್ಜ್ ಮಾಡಿದರೆ ಕಮಿಷನ್ ಪಡೆಯುವ ಆಫರ್ ನೀಡುತ್ತಿದೆ. ಇದಕ್ಕೆ #RechargeforGood ಎಂದು ಹೆಸರಿಡಲಾಗಿದೆ. ಇನ್ನು ಏರ್ ಟೆಲ್ ನಿಂದ ತಕ್ಷಣದ ಕ್ಯಾಶ್ ಬ್ಯಾಕ್ ಕಮಿಷನ್ ಬರುತ್ತದೆ.

ಅಂದ ಹಾಗೆ, ರಿಲಯನ್ಸ್ ಜಿಯೋದಿಂದ JioPOS Lite ಮೂಲಕ ಇದೇ ರೀತಿ ಕಮಿಷನ್ ಗಳಿಸುವ ಅವಕಾಶ ಮೊದಲಿಗೆ ನೀಡಲಾಯಿತು. ಯಾರಿಗೆ ಇಂಟರ್ ನೆಟ್ ಸಂಪರ್ಕ ಹಾಗೂ ಮೊಬೈಲ್ ಅಪ್ಲಿಕೇಷನ್ ಸಂಪರ್ಕ ಸಾಧ್ಯವಿಲ್ಲವೋ ಅಂಥವರಿಗೆ ನೆರವು ನೀಡುವುದನ್ನು ಉತ್ತೇಜಿಸುವುದಕ್ಕೆ ಈ ಅಭಿಯಾನಕ್ಕೆ ಮುಂದಾಗಿದ್ದಾರೆ.

ವೊಡಾಫೋನ್ ಐಡಿಯಾದಿಂದ 6 ಪರ್ಸೆಂಟ್ ಕಮಿಷನ್ ನೀಡಿದರೆ, ಏರ್ ಟೆಲ್ ಮತ್ತು ಜಿಯೋದಿಂದ 4ರಿಂದ 4.16 ಪರ್ಸೆಂಟ್ ಕಮಿಷನ್ ಅನ್ನು ಕ್ಯಾಶ್ ಬ್ಯಾಕ್ ರೂಪದಲ್ಲಿ ನೀಡಲಾಗುತ್ತದೆ. ವೊಡಾಫೋನ್ ಮತ್ತು ಐಡಿಯಾ ಬಳಕೆದಾರರು ಮೈ ವೊಡಾಫೋನ್ ಹಾಗೂ ಮೈ ಐಡಿಯಾ ಅಪ್ಲಿಕೇಷನ್ ಮೂಲಕ ಇತರರ ಫೋನ್ ನಂಬರ್ ಗೆ ರೀಚಾರ್ಜ್ ಮಾಡಬಹುದು.

ರೀಚಾರ್ಜ್ ಮಾಡಿಸಿ, ಹಣ ಗಳಿಸಿ: ವೊಡಾಫೋನ್, ಏರ್ ಟೆಲ್ ನಿಂದಲೂ ಆಫರ್

149ಕ್ಕೆ ರೀಚಾರ್ಜ್ ಮಾಡಿದರೆ 10 ರುಪಾಯಿ ಕ್ಯಾಶ್ ಬ್ಯಾಕ್ ಹಾಗೂ 249ಕ್ಕೆ ರೀಚಾರ್ಜ್ ಮಾಡಿದರೆ 20 ರುಪಾಯಿ ಕ್ಯಾಶ್ ಬ್ಯಾಕ್ ಬರುತ್ತದೆ. ನಾಲ್ಕು ದಿನದೊಳಗೆ ಖಾತೆಗೆ ಹಣ ಜಮೆ ಆಗುತ್ತದೆ. ಏಪ್ರಿಲ್ 30ನೇ ತಾರೀಕಿನ ತನಕ ವೊಡಾಫೋನ್ ಐಡಿಯಾದ ಈ ಆಫರ್ ಇರುತ್ತದೆ.

ಏರ್ ಟೆಲ್ ಗ್ರಾಹಕರು ಮೊದಲಿಗೆ ನೋಂದಣಿ ಮಾಡಿಕೊಳ್ಳಬೇಕು. ಆ ನಂತರ ಬೇರೆಯವರ ಫೋನ್ ನಂಬರ್ ಗೆ ರೀಚಾರ್ಜ್ ಮಾಡಿಸಲು ಸಾಧ್ಯ. ಏರ್ ಟೆಲ್ ನಲ್ಲಿ ತಕ್ಷಣವೇ ಕ್ಯಾಶ್ ಬ್ಯಾಕ್ ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+