ವೊಡಾಫೋನ್ ಐಡಿಯಾದಿಂದ ಸದ್ಯದಲ್ಲೇ 20 ಪರ್ಸೆಂಟ್ ದರ ಏರಿಕೆ
ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾದಿಂದ ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ 15ರಿಂದ 20 ಪರ್ಸೆಂಟ್ ದರ ಏರಿಸಲು ಯೋಜನೆ ರೂಪಿಸಲಾಗಿದೆ. ಮೂಲಗಳನ್ನು ಆಧರಿಸಿ, ಎಕನಾಮಿಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ.
ವೊಡಾಫೋನ್ ಐಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ವಿಶಾಂತ್ ವೋರಾ ರಾಜೀನಾಮೆ
ನಿಯಂತ್ರಕ ಸಂಸ್ಥೆಯು ಮೂಲ ಬೆಲೆಯನ್ನು ಏರಿಸುವುದನ್ನು ಟೆಲಿಕಾಂ ಸಂಸ್ಥೆಯು ಕಾಯುತ್ತಿರುವುದಾಗಿ ಹೇಳಲಾಗಿದೆ. ಆ ಬದಲಾವಣೆಯು ಡಿಸೆಂಬರ್ ಹೊತ್ತಿಗೆ ಆಗಬಹುದು. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎಂಬತ್ತು ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಈಗ ದರವನ್ನು ಹದಿನೈದು ಪರ್ಸೆಂಟ್ ತನಕ ಏರಿಕೆ ಮಾಡುವ ಸಾಧ್ಯತೆ ಇದ್ದು, ಅದು ಒಂದೇ ಸಲ ಮಾಡುವುದಿಲ್ಲ.
ಇನ್ನು ರಿಲಯನ್ಸ್ ಜಿಯೋ ಎಪ್ಪತ್ತು ಲಕ್ಷ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಏರ್ ಟೆಲ್ ಒಂದು ಕೋಟಿ ನಲವತ್ತು ಲಕ್ಷ ಗ್ರಾಹಕರನ್ನು ಸೇರಿಸಿಕೊಂಡಿದೆ. ವೊಡಾಫೋನ್ ಐಡಿಯಾ ಮಾತ್ರ ದರ ಏರಿಕೆ ಮಾಡುವುದಿಲ್ಲ. ಏರ್ ಟೆಲ್ ಕೂಡ ಮಾಡಲಿದೆ ಎಂದು ಅದರ ಸಿಇಒ ಸಿಇಒ ಗೋಪಾಲ್ ವಿಠ್ಠಲ್ ತಿಳಿಸಿರುವುದಾಗಿ ವರದಿ ಆಗಿದೆ.