ಬೆಂಗಳೂರಿಗೆ ವೋಲ್ವೋ ಪೆಟ್ರೋಲ್ ಮೈಲ್ಡ್-ಹೈಬ್ರಿಡ್‍ SUV ಎಂಟ್ರಿ

ಬೆಂಗಳೂರು, ಅಕ್ಟೋಬರ್ 22: ಐಷಾರಾಮದ ಆಸಕ್ತ ಗ್ರಾಹಕರಿಗೆ ಅತ್ಯುತ್ತಮ ಜಾಗತಿಕ ತಂತ್ರಜ್ಞಾನದ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ವೋಲ್ವೋ ಕಾರ್ ಇಂಡಿಯಾ ಇಂದು ಎರಡು ಹೊಸ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಮಾಡೆಲ್‍ಗಳಾದ ದಿ ಲಕ್ಷುರಿ ಸೆಡಾನ್ ಎಸ್90 ಮತ್ತು ವೋಲ್ವೋದ ಅತ್ಯುತ್ತಮ ಮಾರಾಟದ ಮಧ್ಯಮ ಗಾತ್ರದ ಲಕ್ಷುರಿ ಎಸ್‍ಯುವಿ ಎಕ್‌ಸಿ 60 ಬಿಡುಗಡೆ ಮಾಡಿದೆ. ಈ ಬಿಡುಗಡೆಗಳು 2021ರ ಅಂತ್ಯಕ್ಕೆ ಪೆಟ್ರೋಲ್ ಪೋರ್ಟ್‍ಫೋಲಿಯೊ ಪೂರ್ಣಗೊಳಿಸುವುದಕ್ಕೆ ಪೂರಕವಾಗಿದೆ. ಈ ಬಿಡುಗಡೆಯು ರೇಸ್‍ಕೋರ್ಸ್ ರಸ್ತೆಯ ದೇವರಾಜ ಅರಸ್ ರಸ್ತೆಯಲ್ಲಿನ ಮಾರ್ಷಲ್ ಮೋಟಾರ್ಸ್‍ನಲ್ಲಿ ನಡೆಯಿತು.

ಹೊಸ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ವೋಲ್ವೋ ಎಸ್90 ಎಕ್ಸ್-ಶೋರೂಂ ಬೆಲೆ ರೂ.61,90,000 ಮತ್ತು ಹೊಸ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ವೋಲ್ವೋ ಎಕ್‌ಸಿ 60 ಎಕ್ಸ್-ಶೋರೂಂ ಬೆಲೆ ರೂ. 61,90,000 ಹೊಂದಿದೆ. ಈ ಎರಡೂ ಮಾಡೆಲ್‍ಗಳು ವೋಲ್ವೋ ಚಾಲನೆಯ ಅನುಭವ ಹೆಚ್ಚಿಸಲು ಸುಧಾರಿತ ವಿಶೇಷತೆಗಳೊಂದಿಗೆ ಬಂದಿವೆ.

ಡಿಜಿಟಲ್ ಸರ್ವೀಸಸ್ ಎರಡೂ ಮಾಡೆಲ್‍ಗಳಲ್ಲಿ ಲಭ್ಯ

ಡಿಜಿಟಲ್ ಸರ್ವೀಸಸ್ ಎರಡೂ ಮಾಡೆಲ್‍ಗಳಲ್ಲಿ ಲಭ್ಯ

ಗೂಗಲ್ ಆ್ಯಪ್ಸ್ ಮತ್ತು ಇತರೆ ಆ್ಯಪ್ಸ್‌ಗೆ ಪ್ರವೇಶ ನೀಡುವ ಡಿಜಿಟಲ್ ಸರ್ವೀಸಸ್ ಎರಡೂ ಮಾಡೆಲ್‍ಗಳಲ್ಲಿ ಲಭ್ಯ. ಈ ಕಾರುಗಳು ಅಂತರ್ಬೋಧೆಯ, ಮುಂದಿನ ತಲೆಮಾರಿನ ಇನ್ಫೊಟೈನ್‍ಮೆಂಟ್ ಸಿಸ್ಟಂ ಹೊಂದಿದ್ದು ಅವು ಸರಿಸಾಟಿ ಇರದ ವೈಯಕ್ತೀಕರಣ ಮತ್ತು ಸರಿಸಾಟಿ ಇರದ ಕನೆಕ್ಟಿವಿಟಿ ನೀಡುತ್ತವೆ.

3 ವರ್ಷಗಳ ವೋಲ್ವೋ ಸರ್ವೀಸ್ ಪ್ಯಾಕೇಜ್

3 ವರ್ಷಗಳ ವೋಲ್ವೋ ಸರ್ವೀಸ್ ಪ್ಯಾಕೇಜ್

ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ಕಂಪನಿಯು 3 ವರ್ಷಗಳ ವೋಲ್ವೋ ಸರ್ವೀಸ್ ಪ್ಯಾಕೇಜ್ ಅನ್ನು ಕೇವಲ ರೂ.75,000 ಪ್ಲಸ್ ಅನ್ವಯಿಸುವ ತೆರಿಗೆಗಳೊಂದಿಗೆ ನೀಡುತ್ತಿದೆ. ಇದನ್ನು ಹೊಸದಾಗಿ ಬಿಡುಗಡೆಯಾದ ಕಾರುಗಳೊಂದಿಗೆ ಕೊಳ್ಳಬಹುದು. ಇದು ಪ್ರಾರಂಭಿಕ ಕೊಡುಗೆಯಾಗಿದ್ದು ಪ್ರಸ್ತುತ ಹಬ್ಬದ ಋತುವಿಗೆ ಮಾತ್ರ ಲಭ್ಯವಿದ್ದು ನಿಯಮಿತ ಮೇಂಟೆನೆನ್ಸ್ ಮತ್ತು ವೇರ್ ಅಂಡ್ ಟೇರ್ ವೆಚ್ಚವನ್ನು 3 ವರ್ಷಗಳವರೆಗೆ ಒಳಗೊಂಡಿದೆ.

ಗ್ರಾಹಕ ಸೇವೆಯ ನಿರ್ದೇಶಕ ಕಲ್ಪಿತ್

ಗ್ರಾಹಕ ಸೇವೆಯ ನಿರ್ದೇಶಕ ಕಲ್ಪಿತ್

"ಕರ್ನಾಟಕ ನಮಗೆ ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ನಗರಗಳಲ್ಲಿ ಒಂದಾಗಿದೆ ಮತ್ತು ಆಕಾಂಕ್ಷೆಯ ಮತ್ತು ಅನುಕೂಲಸ್ಥ ಕುಟುಂಬಗಳ ನೆಲೆಯಾಗಿದೆ. ವೋಲ್ವೋ ಕಾರುಗಳು ತನ್ನ ಗ್ರಾಹಕರಿಗೆ ಈ ವರ್ಗದ ಅತ್ಯುತ್ತಮ ಅನುಭವ ನೀಡುತ್ತವೆ ಮತ್ತು ಇಡೀ ಗ್ರಾಹಕರ ಪ್ರಯಾಣದಾದ್ಯಂತ ಅತ್ಯುನ್ನತ ಗ್ರಾಹಕ ಅನುಭವ ನೀಡುತ್ತದೆ. ಕರ್ನಾಟಕದ ಲಕ್ಷುರಿ ಮೊಬಿಲಿಟಿ ಗ್ರಾಹಕರು ಸದಾ ಸುರಕ್ಷತೆ ಮತ್ತು ಫೀಚರ್ಸ್ ಕುರಿತು ಆಸಕ್ತರಾಗಿರುತ್ತಾರೆ ಮತ್ತು ಹೊಸ ಕೊಡುಗೆಗಳೊಂದಿಗೆ ಸನ್ನದ್ಧವಾದ ತಂತ್ರಜ್ಞಾನವು ಉತ್ಸಾಹಕರವಾಗಿದೆ ಎಂಬ ವಿಶ್ವಾಸ ನಮ್ಮದು" ಎಂದು ವೋಲ್ವೋ ಕಾರ್ ಇಂಡಿಯಾದ ಗ್ರಾಹಕ ಸೇವೆಯ ನಿರ್ದೇಶಕ ಕಲ್ಪಿತ್ ಸಿಶೋಡಿಯಾ ಹೇಳಿದರು.

ವೋಲ್ವೋ ಕಾರು ಗೂಗಲ್‍ನೊಂದಿಗೆ ಸಹಯೋಗ

ವೋಲ್ವೋ ಕಾರು ಗೂಗಲ್‍ನೊಂದಿಗೆ ಸಹಯೋಗ

ವೋಲ್ವೋ ಕಾರು ಗೂಗಲ್‍ನೊಂದಿಗೆ ಸಹಯೋಗ ಹೊಂದಿದ್ದು ಆಂಡ್ರಾಯಿಡ್‍ನಿಂದ ಸನ್ನದ್ಧ ಗೂಗಲ್ ಆ್ಯಪ್‍ಗಳು ಮತ್ತು ಸೇವೆಗಳನ್ನು ಒಳಗೊಂಡ ಇನ್ಫೊಟೈನ್‍ಮೆಂಟ್ ಸಿಸ್ಟಂ ಅಳವಡಿಸಲು ಶ್ರಮಿಸುತ್ತಿದೆ. ವೋಲ್ವೋ ಸುಧಾರಿತ ಫೀಚರ್‌ಗಳಿಂದ ಕಾರು ಬಳಕೆದಾರರ ಸುರಕ್ಷತೆ ಮತ್ತು ಸುಸ್ಥಿರತೆಗೆ ಬದ್ಧವಾಗಿದೆ.

ಎಸ್90 ಪ್ರೀಮಿಯಂ, 4-ಡೋರ್, 5-ಸೀಟ್ ಫ್ಲಾಗ್‍ಶಿಪ್ ಸೆಡಾನ್ ಆಗಿದ್ದು ಅದನ್ನು ಸ್ಕೇಲಬಲ್ ಪ್ರಾಡಕ್ಟ್ ಆರ್ಕಿಟೆಕ್ಚರ್(ಎಸ್‍ಪಿಎ), ವೋಲ್ವೋದ ಸುಧಾರಿತ ಮಾಡ್ಯುಲರ್ ವೆಹಿಕಲ್ ಪ್ಲಾಟ್‍ಫಾರಂ ಮೂಲಕ ನಿರ್ಮಿಸಲಾಗಿದೆ.

ವರ್ಲ್ಡ್‌ ಕಾರ್ ಆಫ್ ದಿ ಇಯರ್ ಪ್ರಶಸ್ತಿ

ವರ್ಲ್ಡ್‌ ಕಾರ್ ಆಫ್ ದಿ ಇಯರ್ ಪ್ರಶಸ್ತಿ

2018ರಲ್ಲಿ ವರ್ಲ್ಡ್‌ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಗಳಿಸಿದ ಅತ್ಯಂತ ಜನಪ್ರಿಯ ಎಕ್‌ಸಿ60 ಈಗ ವೋಲ್ವೋ ಕಾರುಗಳ ಅತ್ಯಾಧುನಿಕ ಅಡ್ವಾನ್ಸ್ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಸೆನ್ಸರ್ ಪ್ಲಾಟ್‍ಫಾರಂ ಹೊಂದಿದ್ದು ಅದು ಆಧುನಿಕ, ವಿಸ್ತರಿಸಬಲ್ಲ ಸುರಕ್ಷತೆಯ ವ್ಯವಸ್ಥೆಯಾಗಿದ್ದು ರಾಡಾರ್‌ಗಳು, ಕ್ಯಾಮರಾಗಳು ಮತ್ತು ಅಲ್ಟ್ರಾಸಾನಿಕ್ ಸೆನ್ಸರ್‌ಗಳಿರುತ್ತವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+