ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಲಿದೆ. ಎಪ್ಪತ್ತರಿಂದ ಎಂಬತ್ತು ಸಾವಿರ ಸಿಬ್ಬಂದಿ ವಿಆರ್ ಎಸ್ ಆಯ್ಕೆ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ವೇತನದಲ್ಲಿ ಏಳು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಉಳಿತಾಯ ಆಗಲಿದೆ.
ಬಿಎಸ್ ಎನ್ ಎಲ್ ಅಧ್ಯಕ್ಷ- ಕಾರ್ಯನಿರ್ವಾಹಕ ನಿರ್ದೇಶಕ ಪಿ. ಕೆ. ಪುರ್ ವರ್ ಮಾತನಾಡಿ, ಈ ಯೋಜನೆಯು ನವೆಂಬರ್ ನಾಲ್ಕರಿಂದ ಡಿಸೆಂಬರ್ ಮೂರನೇ ತಾರೀಕಿನ ಮಧ್ಯೆ ಮುಕ್ತವಾಗಿರುತ್ತದೆ. ವಿಆರ್ ಎಸ್ ಯೋಜನೆ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಈಗಾಗಲೇ ತಿಳಿಸಿದ್ದೇವೆ ಎಂದಿದ್ದಾರೆ.
ಒಟ್ಟಾರೆಯಾಗಿ ಒಂದೂವರೆ ಲಕ್ಷ ಸಿಬ್ಬಂದಿ ಬಿಎಸ್ ಎನ್ ಎಲ್ ನಲ್ಲಿ ಇದ್ದಾರೆ. ಅದರಲ್ಲಿ ಒಂದು ಲಕ್ಷ ಮಂದಿ ವಿಆರ್ ಎಸ್ ಗೆ ಅರ್ಹರಿದ್ದಾರೆ. "ಇದು ಸರ್ಕಾರ ನೀಡುತ್ತಿರುವ ಅತ್ಯುತ್ತಮ ವಿಆರ್ ಎಸ್ ಯೋಜನೆ. ಬಿಎಸ್ ಎನ್ ಎಲ್ ಸಿಬ್ಬಂದಿ ಇದನ್ನು ಸಕಾರಾತ್ಮಕ ಮನಸ್ತತ್ವದಿಂದ ನೋಡಬೇಕು" ಎಂದು ಅವರು ಹೇಳಿದ್ದಾರೆ.

ಎಪ್ಪತ್ತರಿಂದ ಎಂಬತ್ತು ಸಾವಿರ ಸಿಬ್ಬಂದಿ ಈ ಯೋಜನೆ ಆರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ವೇತನ ಪಾವತಿಯಲ್ಲಿ ಏಳು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಉಳಿತಾಯ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಆರ್ ಎಸ್ ಯೋಜನೆಗೆ ಯಾರು ಅರ್ಹರು?
ಎಲ್ಲ ರೆಗ್ಯುಲರ್ ಮತ್ತು ಕಾಯಂ ಬಿಎಸ್ ಎನ್ ಎಲ್ ಉದ್ಯೋಗಿಗಳು ಅರ್ಹರು. ಬೇರೆ ಸಂಸ್ಥೆಗಳಿಗೆ ನಿಯೋಜನೆ ಮೇಲೆ ತೆರಳಿದವರು ಅಥವಾ ನಿಯೋಜನೆ ಮೇಲೆ ಬಿಎಸ್ ಎನ್ ಎಲ್ ನ ಆಚೆಗೆ ಪೋಸ್ಟ್ ಆಗಿರುವವರು, ಐವತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಯೋಜನೆಗೆ ಅರ್ಹರು.
ವಿಆರ್ ಎಸ್ ಪರಿಹಾರ ಮೊತ್ತ ಲೆಕ್ಕಾಚಾರ ಹೇಗೆ?
ಇನ್ನು ವಿಆರ್ ಎಸ್ ನಲ್ಲಿ ಎಕ್ಸ್ ಗ್ರೇಷಿಯಾ ಹೇಗೆ ಲೆಕ್ಕ ಹಾಕುತ್ತಾರೆ ಅಂದರೆ, ಈಗಾಗಲೇ ಪೂರ್ಣಗೊಳಿಸಿರುವ ಸೇವೆಯ ವರ್ಷಗಳಿಗೆ ಒಂದು ವರ್ಷಕ್ಕೆ 35 ದಿನದಂತೆ ಹಾಗೂ ಬಾಕಿ ಇರುವ ಸೇವೆಗೆ ವರ್ಷಕ್ಕೆ 25 ದಿನದಂತೆ ವೇತನ ಲೆಕ್ಕ ಹಾಕಿ ನೀಡಲಾಗುತ್ತದೆ.
ಉದಾಹರಣೆಗೆ ಇಪ್ಪತ್ತೈದು ವರ್ಷ ಸೇವೆ ಪೂರ್ಣಗೊಳಿಸಿ, ಇನ್ನು ಹತ್ತು ವರ್ಷ ಸೇವೆ ಬಾಕಿ ಇದ್ದಲ್ಲಿ ಲೆಕ್ಕಾಚಾರ ಹೀಗಿರುತ್ತದೆ. ಪೂರ್ಣಗೊಂಡ ವರ್ಷಗಳಿಗೆ 25X35= 875 ಹಾಗೂ ಬಾಕಿ ಇರುವ ವರ್ಷಗಳಿಗೆ 10X25= 250 ಮತ್ತು ಎರಡೂ ಒಟ್ಟು ಮಾಡಿದರೆ 1125 ದಿನಗಳ ವೇತನ ದೊರೆಯುತ್ತದೆ.


Click it and Unblock the Notifications