ಪ್ರಮುಖ ಕ್ರಿಪ್ಟೋ ಕಂಪ್ಲಿಯನ್ಸ್ ಪ್ಲಾಟ್‌ಫಾರ್ಮ್ ಅನ್ನು ನಿಯೋಜಿಸಲು ಟಿಆರ್‌ಎಂ ಲ್ಯಾಬ್‌ಗಳೊಂದಿಗಿನ ವಾಜಿರ್ ಎಕ್ಸ್ ಪಾಲುದಾರಿಕೆ ಹೊಂದುವ ಮೂಲಕ ಕ್ರಿಪ್ಟೋ ಕರೆನ್ಸಿ ಭವಿಷ್ಯದ ಬದ್ಧತೆಯನ್ನು ಕಂಪನಿಯು ಬಲಪಡಿಸಿದೆ.
ಭಾರತದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ವಾಜಿರ್ ಎಕ್ಸ್, ಪ್ರಮುಖ ಬ್ಲಾಕ್‌ಚೈನ್ ಅನಾಲಿಟಿಕ್ಸ್ ಪೂರೈಕೆದಾರರಾದ ಟಿಆರ್‌ಎಂ ಲ್ಯಾಬ್ಸ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ವಾಜಿರ್ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಿದ ವಹಿವಾಟುಗಳ ಹಣ ವರ್ಗಾವಣೆ, ವಂಚನೆ-ವಿರೋಧಿ ಕ್ರಮಗಳನ್ನು ಅನುಸರಿಸುತ್ತದೆ.
ಟಿಆರ್ಎಂ ಲ್ಯಾಬ್ಸ್ ಕ್ರಿಪ್ಟೋ ಕಂಪ್ಲಿಯನ್ಸ್ ಮತ್ತು ಅಪಾಯ ನಿರ್ವಹಣೆಗೆ ಪೂರ್ಣ ಸೇವಾ ವೇದಿಕೆಯನ್ನು ಒದಗಿಸುತ್ತದೆ, ಇದರಲ್ಲಿ ವ್ಯಾಲೆಟ್ ಸ್ಕ್ರೀನಿಂಗ್, ವಹಿವಾಟು ಮೇಲ್ವಿಚಾರಣೆ ಮತ್ತು ತನಿಖೆಗಳು ಸೇರಿವೆ. ಟಿಆರ್‌ಎಂನ ಮೇಲ್ವಿಚಾರಣಾ ಸಾಮರ್ಥ್ಯವು 3,60,000+ ಡಿಜಿಟಲ್ ಅಸೆಟ್ ಗಳನ್ನು ಒಳಗೊಂಡಿದೆ. ಇದರಲ್ಲಿ ಬಿಇಪಿ -20 ಟೋಕನ್‌ಗಳು (ಬೈನಾನ್ಸ್ ಸ್ಮಾರ್ಟ್ ಚೈನ್), ಇಆರ್‌ಸಿ -20 ಟೋಕನ್‌ಗಳು (ಎಥೆರಿಯಮ್), ಡೋಜ್‌ಕೋಯಿನ್, ಕಾರ್ಡಾನೊ ಮತ್ತು ಇನ್ನೂ ಅನೇಕ ಉದ್ಯಮಗಳಲ್ಲಿ ವ್ಯಾಪಕವಾದ ವ್ಯಾಪ್ತಿಯನ್ನು ಪ್ರತಿನಿಧಿಸುತ್ತವೆ.

ಭಾರತದಲ್ಲಿ ಕ್ರಿಪ್ಟೋ ಬಳಕೆ ಮತ್ತು ಬೇಡಿಕೆಯು ಹೆಚ್ಚಾಗುತ್ತಿದ್ದಂತೆ ಪಾಲುದಾರಿಕೆಗೂ ಬೇಡಿಕೆ ಬಂದಿದ್ದು, ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಗೆ ಬ್ಯಾಂಕಿಂಗ್ ಸೇವೆಗಳ ಪ್ರವೇಶದ ಬಗ್ಗೆ ಇತ್ತೀಚಿನ ಸ್ಪಷ್ಟೀಕರಣದ ಬಳಿಕ ವ್ಯಾಪಾರದ ಪ್ರಮಾಣವು ಗಮನಾರ್ಹವಾಗಿ ಹೆಚ್ಚುತ್ತಿದೆ.
"ನಮ್ಮ ಕಾರ್ಯಾಚರಣೆಗಳು ಸುರಕ್ಷಿತ ಮತ್ತು ಜಾಗತಿಕ ನಿಯಂತ್ರಕ ಅವಶ್ಯಕತೆಗಳಿಗೆ ಅನುಗುಣವಾಗಿರುತ್ತವೆ ಎಂದು ಖಚಿತಪಡಿಸಿಕೊಂಡಿರುವುದು ನಮ್ಮ ಯಶಸ್ಸಿಗೆ ನಿರ್ಣಾಯಕ ಅಂಶವಾಗಿದೆ; ಅದೇ ಸಮಯದಲ್ಲಿ, ವೇಗವಾದ, ತಡೆರಹಿತ ವಹಿವಾಟುಗಳಿಗಾಗಿ ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ನಾವು ಬಯಸುತ್ತೇವೆ. ಎಆರ್ಎಲ್ (ಆಂಟಿ ಮನಿ ಲ್ಯಾಂಡರಿಂಗ್) ನೊಂದಿಗೆ ಈ ಸಮತೋಲನವನ್ನು ಸಾಧಿಸಲು ಟಿಆರ್ಎಂನ ವೇದಿಕೆ ನಮಗೆ ಸಹಾಯ ಮಾಡುತ್ತದೆ. ನಾವು ಒದಗಿಸುವ ಪರಿಹಾರವು ದೊಡ್ಡ ಕಂಪ್ಲಿಯನ್ಸ್ ತಂಡಗಳಿಗೆ ಬಳಸಲು ಸುಲಭವಾಗಿದೆ, ಅದರೊಂದಿಗೆ ಉತ್ತಮ-ದರ್ಜೆಯ ಬ್ಲಾಕ್‌ಚೈನ್ ವಿಶ್ಲೇಷಣೆಗಳಿಂದ ಕೂಡಿದೆ "ಎಂದು ವಾಜಿರ್ ಎಕ್ಸ್‌ನ ಸ್ಥಾಪಕ ಮತ್ತು ಸಿಇಒ ನಿಶ್ಚಲ್ ಶೆಟ್ಟಿ ಹೇಳಿದ್ದಾರೆ.
ಕ್ರಿಪ್ಟೋ ಅಸೆಟ್ ಗಳನ್ನು ಹಣದ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಧನಸಹಾಯದಂತಹ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಬಹುದೆಂದು ಭಾರತೀಯ ಅಧಿಕಾರಿಗಳು ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು. ವಾಜಿರ್ ಎಕ್ಸ್ ನಂತಹ ವಿನಿಮಯ ಕೇಂದ್ರಗಳ ವೇದಿಕೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಪತ್ತೆಹಚ್ಚಲು ಮತ್ತು ತಡೆಯಲು ಬಲಿಷ್ಠವಾದ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications