ಬೆಂಗಳೂರು, ಮಾರ್ಚ್ 13: ಜಗತ್ತಿನೆಲ್ಲೆಡೆ ಕೊರೊನಾವೈರಸ್ ಭೀತಿಯಿಂದ ವ್ಯಾಪಾರ ವಹಿವಾಟು ಡಲ್ ಹೊಡೆಯುತ್ತಿದೆ. ಅತಿ ಶ್ರೀಮಂತರ ಪಟ್ಟಿಯಲ್ಲಿ ಹಾವು ಏಣಿಯಾಟ ಮೊದಲಾಗಿದೆ. ಈ ನಡುವೆ ಕೊರೊನಾವೈರಸ್ ಸೋಂಕು ಕರ್ನಾಟಕದಲ್ಲಿ ವ್ಯಾಪಿಸುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳತೊಡಗಿದೆ.
ಮಾರ್ಚ್ 14ರಿಂದ ಒಂದು ವಾರಗಳ ಕಾಲ ಮಾಲ್, ಥಿಯೇಟರ್, ಕಾಲೇಜು, ವಿವಿ, ಬಾರ್, ಪಬ್, ರೆಸ್ಟೋರೆಂಟ್ ಬಂದ್ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ. ಸಭೆ, ಸಮಾರಂಭ, ಜಾತ್ರೆ, ಮದುವೆ ಎಲ್ಲಕ್ಕೂ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಐಟಿ-ಬಿಟಿ ಕಂಪನಿಗಳಿಗೆ ಕಡ್ಡಾಯವಾಗಿ ವರ್ಕ್ ಫ್ರಮ್ ಹೋಮ್ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಮನೆಯಿಂದ ವರ್ಕ್ ಮಾಡುವಾಗ ಯಾವ ಸಂಸ್ಥೆಯ ಇಂಟರ್ನೆಟ್ ಕನೆಕ್ಷನ್ ಉತ್ತಮವಾಗಿದೆ ಎಂಬ ಚಿಂತೆ ಮೂಡುತ್ತದೆ.
ಭಾರತದಲ್ಲಿ ಫಿಕ್ಸೆಡ್-ಲೈನ್ ಬ್ರಾಡ್‍ಬ್ಯಾಂಡ್‍ನ ಸರಾಸರಿ ವೇಗ 25 ಎಂಬಿಪಿಎಸ್ ಆಗಿದೆ. ಜೊತೆಗೆ ದಿನವಿಡಿ ಸಹಾಯವಾಣಿ ಸೌಲಭ್ಯ ಯಾವ ಸಂಸ್ಥೆ ನೀಡಬಹುದು ಎಂಬ ಪ್ರಶ್ನೆ ಮೂಡುತ್ತದೆ.
ಬೆಂಗಳೂರಿನಲ್ಲಿ ಸದ್ಯಕ್ಕೆ ACT, ಹಾಥ್ವೆ, ಬಿಎಸ್ಎನ್ಎಲ್, ಏರ್ಟೆಲ್, ಜಿಯೋ, ಕೇಬಲ್ ಇಂಟರ್ನೆಟ್ ,ಟಿಕೋನಾ, ಯೂ ಬ್ರಾಡ್ ಬ್ಯಾಂಡ್ ಹೀಗೆ ಹಲವು ಇಂಟರ್ನೆಟ್ ಪೂರೈಕೆ ಸಂಸ್ಥೆಗಳಿವೆ.
ಜಿಯೋ ಬ್ರಾಡ್ ಬ್ಯಾಂಡ್ ಏನು ಉಪಯೋಗ?
ಭಾರತದ ಮೊದಲ ಆಲ್-ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯಾದ ಜಿಯೋಫೈಬರ್ 100 ಎಂಬಿಪಿಎಸ್‍ನಿಂದ ಪ್ರಾರಂಭವಾಗಲಿದ್ದು 1 ಜಿಬಿಪಿಎಸ್‍ವರೆಗೂ ಇರಲಿದೆ
ಜಿಯೋಫೈಬರ್ ಪ್ಲಾನ್ ಬಾಡಿಗೆಗಳು ರೂ. 699ರಿಂದ ಪ್ರಾರಂಭವಾಗಿ ರೂ. 8,499ವರೆಗೂ ಇರಲಿವೆ. ಗಣನೀಯವಾಗಿ ಹೆಚ್ಚಿನ ಮೌಲ್ಯ ನೀಡುವ 3, 6 ಹಾಗೂ 12 ತಿಂಗಳ ಪ್ಲಾನುಗಳನ್ನು ಜಿಯೋಫೈಬರ್ ಬಳಕೆದಾರರು ಪಡೆದುಕೊಳ್ಳಬಹುದು.
ನಿಮ್ಮ ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್, ಜಿಯೋ ಕೇರ್ ಸಂಪರ್ಕಿಸಬಹುದು. ಇಲ್ಲವೆ ಜಿಯೋ ವೆಬ್ಸೈಟ್ ಮೂಲಕ ಗ್ರಾಹಕರು ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.
ಜಿಯೋ ಫೈಬರ್ ಸಂಪರ್ಕ ಪಡೆಯುವುದು ಹೇಗೆ?
ಜಿಯೋ ಫೈಬರ್ ಸಂಪರ್ಕ ಪಡೆಯುವುದು ಹೇಗೆ? 1. ಜಿಯೋ ಫೈಬರ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 2. ಜಿಯೋ ಫೈಬರ್ ಸಂಪರ್ಕಕ್ಕಾಗಿ ನಿಮ್ಮ ವಿಳಾಸವನ್ನು ನಮೂದಿಸಿ 3. ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನಮೂದಿಸಿ 4. 'ಒಟಿಪಿ ಜನರೇಟ್' ಮೇಲೆ ಕ್ಲಿಕ್ ಮಾಡಿ 5. ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ 6. ಎಲ್ಲಾ ಮಾಹಿತಿಯನ್ನು ಪರಿಶೀಲಿಸಲು ಮತ್ತು ಇತರ ವಿವರಗಳನ್ನು ಹಂಚಿಕೊಳ್ಳಲು ರಿಲಯನ್ಸ್ ಜಿಯೋ ಕಾರ್ಯನಿರ್ವಾಹಕ ನಿಮ್ಮ ಸ್ಥಳಕ್ಕೆ ಭೇಟಿ ನೀಡುತ್ತಾರೆ. ನಿಮ್ಮ ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್, ಜಿಯೋ ಕೇರ್ ಸಂಪರ್ಕಿಸಬಹುದು. ಇಲ್ಲವೆ ಜಿಯೋ ವೆಬ್ಸೈಟ್ ಮೂಲಕ ಗ್ರಾಹಕರು ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.
ಆಕ್ಟ್ ಬ್ರಾಡ್ ಬ್ಯಾಂಡ್
ಆಕ್ಟ್ ಬ್ರಾಡ್ ಬ್ಯಾಂಡ್ ಭಾರತದ ಅತಿ ವಿಸ್ತೃತ ಜಾಲ ಹೊಂದಿರುವ ಇಂಟರ್ನೆಟ್ ಸೇವಾ ಸಂಸ್ಥೆಯಾಗಿದೆ. ACT storm, ACT incredible, Act GIGA ಮೂರು ಮಾದರಿಯಲ್ಲಿ ಇಂಟರ್ನೆಟ್ ನೀಡುತ್ತಿದ್ದು,
ACT storm: 1159 ರು(150 ಎಂಬಿಪಿಎಸ್), 650 ಜಿಬಿ ಡೌನ್ಲೋಡ್ ಮಿತಿ, 1ಎಂಬಿಪಿಎಸ್ ವೇಗ
ACT incredible: 1999 ರು, (250 ಎಂಬಿಪಿಎಸ್), 1000ಜಿಬಿ ಡೌನ್ಲೋಡ್+ ಅಪ್ಲೋಡ್, 2 ಎಂಬಿಪಿಎಸ್ ವೇಗ
Act GIGA: 5999 ರು , 1ಜಿಬಿಪಿಎಸ್, 3500 ಜಿಬಿ ಡೌನ್ಲೋಡ್ + ಅಪ್ಲೋಡ್, 5 ಎಂಬಿಪಿಎಸ್
ಜೊತೆಗೆ 993 ರುಗೆ 150 ಎಂಬಿಪಿಎಸ್ 650 ಜಿಬಿ ಡೌನ್ಲೋಡ್ ಮಿತಿ
ಹಾಥ್ವೇ ಬ್ರಾಡ್ ಬ್ಯಾಂಡ್ ಸಂಪರ್ಕ
* 150 ಎಂಬಿಪಿಎಸ್ ವೇಗ
* 100 ಜಿಬಿ ಡೌನ್ಲೋಡ್ ಹಾಗೂ ಅಪ್ಲೋಡ್
* ಉಚಿತ ಇನ್ಸ್ಟಾಲೇಷನ್
* ಉಚಿತ ವೈ ಫೈ ರೂಟರ್
* ಒಂದು ವರ್ಷಗಳ ಕಾಲ ಸನ್ ನೆಕ್ಸ್ಟ್ ಚಂದಾದರಿಗೆ ಉಚಿತ.
BSNL ಹಾಗೂ ಏರ್ಟೆಲ್ ಬ್ರಾಡ್ ಬ್ಯಾಂಡ್
BSNL ಬ್ರಾಡ್ ಬ್ಯಾಂಡ್ ಲ್ಯಾಂಡ್ ಲೈನ್ ಜೊತೆಗೆ ಸಿಗಲಿದೆ. ಭಾರತ್ ಫೈಬರ್, ವೈ ಮ್ಯಾಕ್ಸ್ ಬ್ರಾಡ್ ಬ್ಯಾಂಡ್ ಮೂರು ಮಾದರಿಯಲ್ಲಿ ಲಭ್ಯ. 299 ರು ಪ್ರತಿ ತಿಂಗಳು 50 ಜಿಬಿ, 1ಎಂಬಿಪಿಎಸ್ ನಿಂದ 491ರು, 120 ಜಿಬಿ ತನಕ ಲಭ್ಯ
ಏರ್ಟೆಲ್ ಬ್ರಾಡ್ ಬ್ಯಾಂಡ್: 799 ಪ್ರತಿ ತಿಂಗಳು, 150 ಜಿಬಿ, 100 ಎಂಬಿಪಿಎಸ್ ವೇಗ, ಏರ್ ಟೆಲ್ ಎಕ್ಸ್ಟ್ರೀಮ್


Click it and Unblock the Notifications