For Quick Alerts
ALLOW NOTIFICATIONS  
For Daily Alerts

ಬೇರೆ ದೇಶಗಳನ್ನು 'ಋಣಕ್ಕೆ ಕೆಡವಿ ಲಾಭ ಮಾಡಿಕೊಳ್ಳುವ' ಚೀನಾ ತಂತ್ರ ಎಂಥದ್ದು?

By ಅನಿಲ್ ಆಚಾರ್
|

ಚೀನಾ ದೇಶದಿಂದ ಸಾಲ ಪಡೆಯುವುದು ಅಂದರೆ ಅಭಿವೃದ್ಧಿ ಆಗುತ್ತಿರುವ ಹಾಗೂ ಬಡ ದೇಶಗಳ ಪಾಲಿಗೆ ಎಚ್ಚರಿಕೆ ಗಂಟೆ ಇದ್ದಂತೆ. ಅಂಥ ದೇಶಗಳ ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಸಿಕ್ಕಾಪಟ್ಟೆ ಸಾಲ ನೀಡುತ್ತದೆ. ಆ ನಂತರ ಆ ದೇಶಗಳನ್ನು ಸಾಲದ ಬಲೆಗೆ ಕೆಡವುತ್ತದೆ ನೋಡಿ, ಚೀನಾದ ಇಕ್ಕಳ ಹಿಡಿತದಿಂದ ಆಚೆ ಬರುವುದಕ್ಕೆ ಆಗುವುದೇ ಇಲ್ಲ. ಸಾಲ ಪಡೆದ ದೇಶದಲ್ಲಿ ಚೀನಾದ ಪಾರುಪತ್ತೆ ಆಗುತ್ತದೆ; ಪಾಕಿಸ್ತಾನದಲ್ಲಿ ಇರುವಂತೆ.

ಈ ತಂತ್ರಕ್ಕೆ ಆರ್ಥಿಕ ಜಗತ್ತು ನೀಡಿರುವ ಹೆಸರು 'ಡೆಟ್ ಟ್ರ್ಯಾಪ್ಡ್ ಡಿಪ್ಲೊಮಸಿ'. ಚೀನಾದಲ್ಲಿ ಅಗಾಧ ಪ್ರಮಾಣದ ವಸ್ತುಗಳ ಉತ್ಪಾದನೆ ಆಗುತ್ತದೆ. ಅವುಗಳನ್ನು ಎಲ್ಲ ದೇಶಗಳಿಗೂ ತಲುಪಿಸುವುದು ಅದರ ಗುರಿ. ತನಗೆ ಅಗತ್ಯ ಇರುವ ಸಾರಿಗೆ, ಸಂಪರ್ಕ, ಸಂಗ್ರಹ ವ್ಯವಸ್ಥೆಗೆ ಪಕ್ಕಾ ಪ್ಲ್ಯಾನ್ ಮಾಡುತ್ತದೆ ಚೀನಾ.

2017ರಲ್ಲಿ ಶ್ರೀಲಂಕಾವು ಹಂಬನ್ ತೋಟದ ಹೊಸ ಬಂದರನ್ನು ಚೀನಾದ ಕಾರ್ಯಚಟುವಟಿಕೆಗೆ ಬಿಟ್ಟುಕೊಡಬೇಕಾಯಿತು. ಅದಕ್ಕೆ ಕಾರಣ ಏನು ಗೊತ್ತಾ? ಚೀನಾದಿಂದ ಪಡೆದಿದ್ದ ಸಾಲದ ಮೊತ್ತವನ್ನು ಸಮಯಕ್ಕೆ ಹಿಂತಿರುಗಿಸಲು ಲಂಕಾಗೆ ಸಾಧ್ಯವಾಗದೇ ಹೋದದ್ದು.

ಚೀನಾದ ಮಂತ್ರಕ್ಕೆ, ಭಾರತದ ತಿರುಮಂತ್ರ :ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತವೇ ಫೇವರಿಟ್ಚೀನಾದ ಮಂತ್ರಕ್ಕೆ, ಭಾರತದ ತಿರುಮಂತ್ರ :ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತವೇ ಫೇವರಿಟ್

ಆರ್ಥಿಕವಾಗಿ ದುರ್ಬಲವಾಗಿ ಇರುವ ದೇಶಗಳ ಜತೆಗೆ ರಾಜಕೀಯ ಸಂಬಂಧವನ್ನು ಬೆಳೆಸುವ ಚೀನಾ, ಆ ದೇಶಗಳಿಗೆ ನಿಧಾನಕ್ಕೆ ಸಾಲ ನೀಡುತ್ತದೆ. ಆ ದೇಶದಲ್ಲಿ ತನ್ನ ರಾಜಕೀಯ ಅಸ್ತಿತ್ವವನ್ನು ಗಟ್ಟಿ ಮಾಡುತ್ತದೆ. ಕ್ರಮೇಣ ತನ್ನ ದೇಶದಲ್ಲಿ ಉತ್ಪಾದಿಸುವ ವಸ್ತುಗಳಿಗೆ ಮಾರ್ಕೆಟ್ ಮಾಡಿಕೊಳ್ಳುತ್ತದೆ. ಸಾಲ ಹಿಂತಿರುಗಿಸಲು ಸಾಧ್ಯವಿಲ್ಲದ ದೇಶಗಳ ಮೇಲೆ ಚೀನಾ ಹಿಡಿತ ಸಾಧಿಸುತ್ತದೆ.

ಕೆಲವು ಮೂಲಗಳು ಹೇಳುವ ಪ್ರಕಾರ, ಕೀನ್ಯಾದ ಹೊರಗಿನ ಸಾಲಗಳಲ್ಲಿ ಶೇಕಡಾ 70ರಷ್ಟು ಚೀನಾಗೇ ನೀಡಬೇಕು. ಇನ್ನೂ ಕೆಲವರ ಪ್ರಕಾರ, ಚೀನಾಗೆ ಕೀನ್ಯಾ ನೀಡಬೇಕಾಗಿರುವುದು ಒಟ್ಟು ಸಾಲದ ಶೇಕಡಾ 21ರಷ್ಟು ಮಾತ್ರ. ಇರಲಿ, ಶೇಕಡಾ ಇಪ್ಪತ್ತೊಂದರಷ್ಟು ಸಾಲ ಅಂದರೂ ಅದು ಆತಂಕಕ್ಕೆ ಕಾರಣ ಅಲ್ಲವೇ?

ಕಚ್ಚಾ ವಸ್ತು ಖರೀದಿಸಿ, ಸಿದ್ಧ ವಸ್ತು ಮಾರುತ್ತದೆ

ಕಚ್ಚಾ ವಸ್ತು ಖರೀದಿಸಿ, ಸಿದ್ಧ ವಸ್ತು ಮಾರುತ್ತದೆ

ಅಂತರರಾಷ್ಟ್ರೀಯ ತಜ್ಞರ ಪ್ರಕಾರ, ಚೀನಾದ ಈ 'ಋಣಕ್ಕೆ ಕೆಡವುವ ರಾಜತಾಂತ್ರಿಕತೆ'ಯಿಂದಾಗಿ ಆಫ್ರಿಕಾ ಖಂಡದ ಎಷ್ಟೋ ದೇಶಗಳ ಆರ್ಥಿಕ ಹಾಗೂ ರಾಜಕೀಯ ಸಾರ್ವಭೌಮತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಅಮೆರಿಕ ಮೂಲದ ಸಂಸ್ಥೆಯೊಂದು ಕಂಡುಕೊಂಡಿರುವಂತೆ, ತನಗೆ ಬರಬೇಕಾದ ಸಾಲದ ಬದಲಿಗೆ ಆ ದೇಶದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿರುವುದು ವಿರಳ. ನಲವತ್ತು ಪ್ರಕರಣಗಳನ್ನು ಅಧ್ಯಯನ ಮಾಡಿ, ಈ ವಿಚಾರವನ್ನು ಆ ಸಂಸ್ಥೆ ತಿಳಿಸಿದೆ. ಆಫ್ರಿಕಾದ ಜತೆ ಅತಿ ದೊಡ್ಡ ವ್ಯಾಪಾರಿ ಸಹಭಾಗಿತ್ವ ಹೊಂದಿರುವ ಚೀನಾ, 1980ರಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದ ಪರಸ್ಪರ ವ್ಯಾಪಾರಗಳನ್ನು 2018ರ ಹೊತ್ತಿಗೆ 170 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚಿಸಿತ್ತು. ಅದರಲ್ಲಿ ಆಮದು ಕೂಡ ಒಳಗೊಂಡಿತ್ತು. ಚೀನಾವು ಆಫ್ರಿಕಾ ದೇಶಗಳಿಂದ ಅದಿರು, ಕಚ್ಚಾ ತೈಲ, ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಚೀನಾ, ಆ ನಂತರ ಸಿದ್ಧಪಡಿಸಿದ ವಸ್ತುಗಳನ್ನು ಆಫ್ರಿಕನ್ ಮಾರುಕಟ್ಟೆಗಳಲ್ಲೇ ಮಾರಾಟ ಮಾಡುತ್ತದೆ. ಈ ಹಿಂದೆ ಬ್ರಿಟಿಷರು ಹೇಗೆ ಮತ್ತೊಂದು ದೇಶದಲ್ಲಿ ಬೇರು ಬಿಡುತ್ತಿದ್ದರೋ ಅದೇ ರೀತಿ ಚೀನಾ ಕೂಡ ಮಾಡುತ್ತಿದೆ.

ಪ್ರಾದೇಶಿಕ ಶಕ್ತಿಯಾಗಿ ರೂಪುಗೊಳ್ಳುವ ಉಮೇದು

ಪ್ರಾದೇಶಿಕ ಶಕ್ತಿಯಾಗಿ ರೂಪುಗೊಳ್ಳುವ ಉಮೇದು

1976ರಲ್ಲಿ ಮಾವೋ ಜೆಡಾಂಗ್ ನಿಧನದ ನಂತರ ಚೀನಾದ ಆರ್ಥಿಕತೆ ಬದಲಾಗುತ್ತಾ ಬಂತು. ಪ್ರಾದೇಶಿಕ ಶಕ್ತಿಯಾಗಿ ರೂಪುಗೊಳ್ಳುವ ಉಮೇದಿನೊಂದಿಗೆ ಆಫ್ರಿಕಾಗೆ ಕಾಲಿಟ್ಟಿತು. ಯಾವಾಗ ಡೆಂಗ್ ಕ್ಸಿಯೋ ಪಿಂಗ್ ಅಧಿಕಾರಕ್ಕೆ ಬಂದರೋ ಮಾರುಕಟ್ಟೆ ಸ್ನೇಹಿ ವಾತಾವರಣ ರೂಪಿಸಿದರು. ಚೀನಾದ ಆರ್ಥಿಕತೆಯನ್ನು ಆಧುನಿಕಗೊಳಿಸಿದರು. ಈ ಅವಧಿಯಲ್ಲಿ ವಿದೇಶಿ ಹೂಡಿಕೆ ಹಾಗೂ ಆರ್ಥಿಕ ಪ್ರಗತಿ ಅಮೋಘವಾಗಿ ಆಯಿತು. ತಜ್ಞರೇ ಹೇಳುವ ಹಾಗೆ, ಚೀನಾಗೆ ಹೊಸ ಬಲಿಪಶು ಕೀನಾ. ಅಂದ ಹಾಗೆ ಚೀನಾದ ಎಕ್ಸಿಮ್ ಬ್ಯಾಂಕ್ ನಿಂದ ಪಡೆದ ಸಾಲ ಹಿಂತಿರುಗಿಸಲು ವಿಫಲವಾದರೆ ಕೀನ್ಯಾದ ಮೊಂಬಾಸಾ ಬಂದರು ಚೀನಾದ ತೆಕ್ಕೆಗೆ ಹೋಗುತ್ತದೆ. ಕೀನ್ಯಾದ ರೈಲ್ವೆ ಕಾರ್ಪೊರೇಷನ್ ಪಡೆದಿರುವ 2.3 ಬಿಲಿಯನ್ ಅಮೆರಿಕನ್ ಡಾಲರ್ ಸಾಲದ ನಿಬಂಧನೆಯೇ ಅದು. ಏಕೆಂದರೆ ಬಂದರು ಆಸ್ತಿಯನ್ನೇ ಸಾಲಕ್ಕೆ ಅಡಮಾನ ಮಾಡಲಾಗಿದೆ.

ಪಾಕ್ ಸೇರಿ ಎಷ್ಟೊಂದು ದೇಶಗಳಲ್ಲಿ ಚೀನಾ ಹವಾ

ಪಾಕ್ ಸೇರಿ ಎಷ್ಟೊಂದು ದೇಶಗಳಲ್ಲಿ ಚೀನಾ ಹವಾ

ಮೊಂಬಾಸಾ- ನೈರೋಬಿ ಸ್ಟ್ಯಾಂಡರ್ಡ್ ಗೇಜ್ ರೈಲ್ವೆ ನಿರ್ಮಾಣಕ್ಕಾಗಿ ಕೀನ್ಯಾದ ರೈಲ್ವೆ ಕಾರ್ಪೊರೇಷನ್ ಸಾಲ ಪಡೆಯಿತು. ಅದರ ನಿರ್ಮಾಣವು ಚೀನಾ ರೋಡ್ಸ್ ಅಂಡ್ ಬ್ರಿಡ್ಜಸ್ ಕಾರ್ಪೊರೇಷನ್ ನದು. ಒಪ್ಪಂದದ ಪ್ರಕಾರ, ರೈಲು ಯೋಜನೆಯಿಂದ ಬರುವ ಆದಾಯ ಸಾಲದೇ ಇದ್ದಲ್ಲಿ ಕೀನ್ಯಾ ಸರ್ಕಾರಕ್ಕೆ ಬರುವ ಆದಾಯದಿಂದ ಚೀನಾದ ಎಕ್ಸಿಮ್ ಬ್ಯಾಂಕ್ ನ ಸಾಲ ತೀರಿಸಲಾಗುತ್ತದೆ ಎಂದಿದೆ. ಕೀನ್ಯಾ ಮಾತ್ರ ಅಲ್ಲ, ಡ್ಜಿಬೌಟಿ, ತಜಕಿಸ್ತಾನ್, ಮಾಲ್ಡೀವ್ಸ್, ಮಡಗಾಸ್ಕರ್, ಪಾಕಿಸ್ತಾನ, ಮಾಂಟೆನೆಗ್ರೋ ಹೀಗೆ ಹಲವು ರಾಷ್ಟ್ರಗಳು ತಮ್ಮ ದೇಶದ ಮೂಲಸೌಕರ್ಯ ಯೋಜನೆಗಳಿಗಾಗೊ ಚೀನಾದಿಂದ ಸಾಲ ಪಡೆದಿವೆ. ಡ್ಜಿಬೌಟಿಯ ಒಟ್ಟು ಜಿಡಿಪಿಯ 1.72 ಬಿಲಿಯನ್ ಅಮೆರಿಕನ್ ಡಾಲರ್, ಅಂದರೆ ಪೈಕಿ ಶೇಕಡಾ 88ರಷ್ಟು ಚೀನಾಗೆ ಸೇರಿದ್ದು. ಅಭಿವೃದ್ಧಿ ಹಾಗೂ ಮೂಲಸೌಕರ್ಯ ಸಾಲವಾಗಿ ಹರಿದುಬಂದಿರುವುದು.

ಋಣಕ್ಕೆ ಕೆಡವುವ ಜಾಲ

ಋಣಕ್ಕೆ ಕೆಡವುವ ಜಾಲ

ಮಧ್ಯಮಾವಧಿ ಹಾಗೂ ದೀರ್ಘಾವಧಿಯನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಚೀನಾದ 'ಋಣಕ್ಕೆ ಕೆಡವುವ ಜಾಲ'ವು ಆಫಿಕನ್ ರಾಷ್ಟ್ರಗಳಿಗೆ ಖಂಡಿತಾ ಅನುಕೂಲಕರ ಅಲ್ಲ. ಇದರಿಂದ ಚೀನಾ ಮಾತ್ರ ದೊಡ್ಡ ಮಟ್ಟದ ಲಾಭ ಗಳಿಸುತ್ತದೆ. ಅದು ಶ್ರೀಲಂಕಾ, ಕೀನ್ಯಾ, ಡ್ಜಿಬೌಟಿ ಮತ್ತಿತರ ದೇಶಗಳ ವಿಷಯಗಳಲ್ಲೂ ನಿಜ ಆಗಿದೆ. ಹಾಗಂತ ಚೀನಾದಿಂದ ಹಿಡಿತದಿಂದ ತಪ್ಪಿಸಿಕೊಂಡು, ಸಾಲವಿಲ್ಲದೆ ಇರಬಲ್ಲಂಥ ದೇಶಗಳು ಸಂಖ್ಯೆ ಕೂಡ ದೊಡ್ಡ ಮಟ್ಟದಲ್ಲಿ ಇಲ್ಲ. ಹಾಗಿದ್ದರೆ ಈ ದೇಶಗಳು ಬಚಾವ್ ಆಗುವ ಬಗೆ ಹೇಗೆ? ಸ್ವಂತ ಶಕ್ತಿಯ ಮೇಲೆ ಈ ರಾಷ್ಟ್ರಗಳು ನಿಲ್ಲುವಂತಾಗಬೇಕು. ಚೀನಾದ ಆರ್ಥಿಕ ತಂತ್ರವೇನು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸಾಲ ಕೊಟ್ಟು, ಬಡ್ಡಿಯನ್ನು ಕಟ್ಟಿಸಿಕೊಳ್ಳುತ್ತದೆ. ಯಾವಾಗ ವಾಪಸು ಮಾಡದ ಸ್ಥಿತಿ ತಲುಪುತ್ತದೋ ಅಂಥ ವೇಳೆ ಆ ದೇಶಗಳ ಮೇಲೆ ಹಿಡಿತ ಸಾಧಿಸುವುದು ಚೀನಾ ಲೆಕ್ಕಾಚಾರ. ಹಲವು ಬಾರಿ ಇದರಲ್ಲಿ ಯಶಸ್ಸು ಕೂಡ ಕಂಡಿದೆ.

English summary

What Is China's Debt Trapped Diplomacy? Here Is An Explainer

China's debt trapped diplomacy explained here in Kannada.
Story first published: Monday, April 20, 2020, 17:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X