ಕ್ರಿಪ್ಟೋಕರೆನ್ಸಿಯು ಆಧುನಿಕ ಯುಗದ ಮುದ್ರಣ ರೂಪ ಇಲ್ಲದ ಡಿಜಿಟಲ್ ಕರೆನ್ಸಿಯಾಗಿದೆ. ಇದು ಎಲೆಕ್ಟ್ರಾನಿಕ್ ರೂಪದಲ್ಲಿ ಮೊಬೈಲ್ ಆ್ಯಪ್, ಕಂಪ್ಯೂಟರ್ ಮೂಲಕ ಚಲಾವಣೆ ಆಗುವಂತದ್ದಾಗಿದೆ.
ಕ್ರಿಪ್ಟ್ರೋಕರೆನ್ಸಿಗಳ ಮೂಲಕ ಸುಲಭವಾಗಿ ರೂಪಾಯಿ, ಡಾಲರ್, ಯೂರೋಗಳಂತೆಯೇ ವಸ್ತುಗಳನ್ನು ಖರೀದಿಸಬಹುದು ಮತ್ತು ಸೇವೆಗಳನ್ನ ಪಡೆಯಬಹುದಾಗಿದೆ. ಇದು ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದರ ನಿಯಂತ್ರಣದಲ್ಲಿಲ್ಲ.

ವಿದೇಶದಲ್ಲಿ ಯಾವುದಾದರೂ ಹೋಟೆಲ್ ಬುಕ್ಕಿಂಗ್ ಅಥವಾ ಸೇವೆಯನ್ನ ಪಡೆಯಲು ಯಾವುದೇ ಕರೆನ್ಸಿಯು ಇನ್ನೊಂದು ದೇಶದ ಕರೆನ್ಸಿಗೆ ಎಕ್ಸ್‌ಚೇಂಜ್ ಮೂಲಕ ಬುಕ್ಕಿಂಗ್ ಮಾಡಬೇಕಾಗಬಹುದು. ಜೊತೆಗೆ ಸಾಮಾನ್ಯ ಬೆಲೆಗಿಂತ ಹೆಚ್ಚಿನ ಹಣ ಪಾವತಿಸಬೇಕಾಗಬಹುದು. ಆದರೆ ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುವ ಹೋಟೆಲ್‌ಗಳು, ಸೇವಾ ಸಂಸ್ಥೆಗಳಲ್ಲಿ ಸುಲಭವಾಗಿ ಮತ್ತು ವೇಗವಾಗಿ ಈ ಕರೆನ್ಸಿಗಳು ಚಲಾವಣೆಯಾಗುತ್ತದೆ. ವಾಲೆಟ್‌ನಿಂದ ವಾಲೆಟ್‌ಗೆ ಹಣ ವರ್ಗಾವಣೆಯಾಗುವುದರಿಂದ ಯಾವುದೇ ಹೆಚ್ಚಿನ ಹಣ ಪಾವತಿ ಮಾಡಬೇಕಿಲ್ಲ.
ಡಾಲರ್, ಯೂರೋ, ಪೌಂಡ್ ಹೀಗೆ ನಾನಾ ಕರೆನ್ಸಿಗಳನ್ನು ವಿನಿಮಯ ಮಾಡಿಕೊಳ್ಳಲು ಇಷ್ಟಪಡದ ಜನರು ಕ್ರಿಪ್ಟೋಕರೆನ್ಸಿಗಳತ್ತ ಮೊರೆ ಹೋಗುತ್ತಿದ್ದಾರೆ. ಯಾವುದೇ ದೇಶದಲ್ಲಿ ವಹಿವಾಟು ನಡೆಸಲು ಇದರಿಂದ ಸುಲಭವಾಗುತ್ತದೆ. ಹೀಗಾಗಿಯೇ ಇಂತಹ ಕ್ರಿಪ್ಟೋಕರೆನ್ಸಿಗಳ ಬೇಡಿಕೆ ಪ್ರತಿದಿನ ಹೆಚ್ಚುತ್ತಿದೆ. ಇಷ್ಟಾದರೂ ಕೆಲವು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲಾಗಿದೆ.
ಕ್ರಿಪ್ಟೋಕರೆನ್ಸಿ ಮೂಲಕ ಪೊಲೀಸರಿಗೆ ತಿಳಿಯದೇ ಡ್ರಗ್ಸ್ ಹಾಗೂ ಶಸ್ತ್ರಾಸ್ತ್ರಗಳನ್ನ ಖರೀದಿಸಬಹುದಾಗಿದೆ. ಇದರಿಂದ ಕ್ರಿಪ್ಟೋಕರೆನ್ಸಿಗಳ ಬ್ರ್ಯಾಂಡ್ ವ್ಯಾಲ್ಯೂ ಡ್ಯಾಮೇಜ್ ಆಗಿದೆ. ಕ್ರಿಪ್ಟೋಕರೆನ್ಸಿಗಳ ಮೂಲಕ ಅಕ್ರಮ ಚಟುವಟಿಕೆಗೆ ದಾರಿ ಮಾಡಿಕೊಡಲಾಗುತ್ತದೆ ಮತ್ತು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಸೇರಿದಂತೆ ನಾನಾ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿ ನಿಷೇಧಿಸಿವೆ.
ಇಷ್ಟಾದರೂ ಕ್ರಿಪ್ಟೋಕರೆನ್ಸಿಗಳ ಬೇಡಿಕೆ ಕಮ್ಮಿಯಾಗಿಲ್ಲ. 2017ರಲ್ಲಿ ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಕ್ಯಾಪ್ 17 ಬಿಲಿಯನ್ ಯೂರೋಗಳಷ್ಟಿತ್ತು, ಈಗಲೂ ಇದರ ಬಳಕೆ ಪ್ರಮಾಣ ಹೆಚ್ಚಿದೆ. ಆದರೆ 2019 ರಲ್ಲಿ ಭಾರತೀಯ ಸರ್ಕಾರಿ ಸಮಿತಿಯು ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಿದ್ದು , ಡಿಜಿಟಲ್ ಕರೆನ್ಸಿಗಳಲ್ಲಿ ವ್ಯವಹರಿಸುವ ಯಾರಿಗಾದರೂ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲು ಶಿಫಾರಸು ಮಾಡಿದೆ.


Click it and Unblock the Notifications