ಯುಎಸ್ ಫೆಡರಲ್ ಸಭೆಯ ಬಳಿಕ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಬಡ್ಡಿದರ ಏರಿಕೆಯ ಬಳಿಕ ಯುಎಸ್ ಮಾರುಕಟ್ಟೆ ಬೆಂಚ್‌ಮಾರ್ಕ್‌ಗಳಾದ ಎಸ್&ಪಿ 500, ನದಾಕ್, ಬ್ಲ್ಯೂಚಿಪಿ ಡೌವ್ ಜಾನ್ಸ್ ನಷ್ಟವನ್ನು ಅನುಭವಿಸಿದೆ. ಈ ನಡುವೆ ಏಷ್ಯನ್ ಮಾರುಕಟ್ಟೆಯು ಕೂಡಾ ಕುಸಿದಿದೆ. ಕೋರಿಯನ್ ಕೋಸ್ಪಿ, ಆಸ್ಟ್ರೇಲಿಯಾದ ಎಸ್&ಪಿ ಎಎಸ್‌ಎಕ್ಸ್ 200, ಜಪಾನ್‌ನ ನಿಕಾಯ್, ಟಾಪಿಕ್ಸ್ ಸರಿಸುಮಾರು ಶೇಕಡ 1.07ರಷ್ಟು ಇಳಿಕೆ ಅಥವಾ ನಷ್ಟವನ್ನು ಕಂಡಿದೆ. ಹಾಗಾದರೆ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಯುಎಸ್ ಫೆಡ್ ದರ ಏರಿಕೆಯ ಪ್ರಭಾವ ಹೇಗಿದೆ ನೋಡೋಣ.
ಯುಎಸ್ ಫೆಡ್ ದರ ಏರಿಕೆಯು ಭಾರತದ ಷೇರು ಮಾರುಕಟ್ಟೆಯ ಮೇಲೆಯೂ ನೆಗೆಟಿವ್ ಪ್ರಭಾವ ಉಂಟು ಮಾಡುವ ಅಂದಾಜು ಮಾಡಲಾಗಿತ್ತು. ಅದರಂತೆಯೇ ಗುರುವಾರ ಷೇರು ಮಾರುಕಟ್ಟೆಯು ಡೌನ್ ಆಗಿದೆ. ನಷ್ಟದೊಂದಿಗೆ ಷೇರುಪೇಟೆಯಲ್ಲಿ ವಹಿವಾಟು ಆರಂಭವಾಗಿದೆ. ಯುಎಸ್ ಫೆಡರಲ್ ಸಭೆಯ ಬಳಿಕ ದರವನ್ನು 25 ಮೂಲಾಂಕ ಹೆಚ್ಚಿಸಿದೆ. ಇನ್ನು ಕಳೆದ ಬಾರಿ ಫೆಬ್ರವರಿ 8ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೂಡಾ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ರೆಪೋ ದರವನ್ನು 25 ಬಿಪಿಎಸ್ ಹೆಚ್ಚಳ ಮಾಡಿದೆ.

ಭಾರತೀಯ ಷೇರು ಮಾರುಕಟ್ಟೆ ಹೇಗಿದೆ?
ಯುಎಸ್ ಫೆಡರಲ್ ದರ ಏರಿಕೆಯ ಬಳಿಕ ಗುರುವಾರ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯು ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಮಾರ್ಚ್ 23ರಂದು ನಿಫ್ಟಿ ವಹಿವಾಟಿನ ಆರಂಭದಲ್ಲಿ 17,100ಕ್ಕೂ ಕೆಳಕ್ಕೆ ಕುಸಿದಿದೆ. ಗುರುವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 283.40 ಪಾಯಿಂಟ್ ಅಥವಾ ಶೇ.0.49ರಷ್ಟು ಕುಸಿದು, 57,931.19ಕ್ಕೆ ತಲುಪಿದೆ. ನಿಫ್ಟಿ 84.90 ಅಂಕ, ಶೇ.0.49ರಷ್ಟು ಇಳಿದು 17,067ಕ್ಕೆ ತಲುಪಿದೆ. 819 ಷೇರುಗಳು ಏರಿಕೆಯಾಗಿದ್ದರೆ, 1004 ಷೇರುಗಳು ಇಳಿಕೆಯಾಗಿದೆ. 86 ಷೇರುಗಳು ಸ್ಥಿರವಾಗಿದೆ.
Opening Bell: ಮತ್ತೆ ಪುಟಿದೆದ್ದ ಷೇರುಪೇಟೆ, ಆರಂಭಿಕ ವಹಿವಾಟಿನಲ್ಲಿ ಗೂಳಿಯಾಟ
ಆರಂಭಿಕ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್, ಟಾಟಾ ಮೋಟರ್ಸ್, ಟಾಟಾ ಸ್ಟೀಲ್ಸ್, ಎಲ್‌ಟಿ, ಸನ್‌ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್ ಕಾರ್ಪೋರೇಷನ್, ಇಂಡಸ್‌ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ, ಮಾರುತಿ, ಟೆಕ್ ಎಂ ಸ್ಟಾಕ್ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಆಕ್ಸಿಸ್ ಬ್ಯಾಂಕ್, ಟೈಟಾನ್, ಎಚ್‌ಸಿಎಲ್ ಟೆಕ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಎಂ&ಎಂ, ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಇನ್ಶೂರೆನ್ಸ್, ವಿಪ್ರೋ, ಬಜಾಜ್ ಫೈನಾನ್ಸ್, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸಿ, ಟಿಸಿಎಸ್, ಐಟಿಸಿ, ಪವರ್‌ಗ್ರಿಡ್, ಎಚ್‌ಡಿಎಫ್‌ಸಿ, ರಿಲಯನ್ಸ್, ಏಷ್ಯನ್ ಪೇಂಟ್ಸ್ ಸ್ಟಾಕ್ ಇಳಿಕೆಯಾಗಿದೆ.
12 ಗಂಟೆಗೆ ಸ್ಟಾಕ್ ಮಾರುಕಟ್ಟೆ ಬೆಳವಣಿಗೆ
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೆನ್ಸೆಕ್ಸ್ 51.67 ಪಾಯಿಂಟ್ ಅಥವಾ ಶೇ.0.09ರಷ್ಟು ಏರಿದ್ದು, 58,266.26ಕ್ಕೆ ತಲುಪಿದೆ. ನಿಫ್ಟಿ 15.10 ಅಂಕ, ಶೇ.0.09ರಷ್ಟು ಹೆಚ್ಚಳವಾಗಿ 17,167.00ಕ್ಕೆ ತಲುಪಿದೆ. 1625 ಷೇರುಗಳು ಏರಿಕೆಯಾಗಿದ್ದರೆ, 1507 ಷೇರುಗಳು ಇಳಿಕೆಯಾಗಿದೆ. 120 ಷೇರುಗಳು ಸ್ಥಿರವಾಗಿದೆ. ಹಿಂಡಾಲ್ಕೊ, ನೆಸ್ಲೆ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಮೋಟರ್ಸ್, ಆಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ, ಐಟಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್ ಏರಿಕೆಯಾಗಿದೆ.
ಜೆಎಸ್‌ಡಬ್ಲ್ಯೂ ಸ್ಟೀಲ್ಸ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಬಜಾಜ್ ಫೈನಾನ್ಸ್, ಹಿರೋ, ಎಚ್‌ಯುಎಲ್, ಟೆಕ್ ಮಹೀಂದ್ರಾ, ಅದಾನಿ ಪೋರ್ಟ್ಸ್, ಲಾರ್ಸೆನ್, ಸಿಪ್ಲಾ, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ಒಎನ್‌ಜಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಕನ್ಸ್ಯೂಮರ್ ಪ್ರೊಡೆಕ್ಸ್, ದಿವೀಸ್ ಲ್ಯಾಬ್, ಟಿಸಿಎಸ್, ಎಂ&ಎಂ, ಗ್ರಾಸಿಮ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಅದಾನಿ, ಡಾ ರೆಡ್ಡೀಸ್, ಟೈಟಾನ್ ಕಂಪನಿ, ಕೋಲ್ ಇಂಡಿಯಾ, ಈಚರ್ ಮೋಟರ್ಸ್, ಅಪೋಲೋ, ಪವರ್ ಗ್ರಿಡ್, ಯುಪಿಎಲ್, ಬ್ರಿಟಾನಿಯಾ, ಬಿಪಿಸಿಎಲ್, ಎಸ್‌ಬಿಐ, ವಿಪ್ರೋ, ರಿಲಯನ್ಸ್, ಕೋಟಕ್ ಮಹೀಂದ್ರಾ, ಇನ್ಫೋಸಿಸ್, ಬಜಾಜ್ ಆಟೋ, ಎಚ್‌ಸಿಎಲ್ ಟೆಕ್, ಏಷ್ಯನ್ ಪೇಂಟ್ಸ್ ಸ್ಟಾಕ್ಸ್ ಇಳಿಕೆಯಾಗಿದೆ.


Click it and Unblock the Notifications