ನವದೆಹಲಿ, ಡಿಸೆಂಬರ್ 09: ಫೋನ್ ಪೇ, ಗೂಗಲ್ ಪೇ ಹಾಗೂ ಆನ್ ಲೈನ್ ಪಾವತಿ ಪ್ರಕ್ರಿಯೆಗಳು ಭಾರತದ ಹಣಕಾಸು ವಹಿವಾಟಿನ ವಲಯದಲ್ಲೇ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಿವೆ.
ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳು ನಮ್ಮ ವಹಿವಾಟಿನ ವೈಖರಿಯನ್ನೇ ಬದಲಿಸಿ ಬಿಟ್ಟಿದೆ. ಬಳಕೆದಾರರು ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಬಯಸಿದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಅನುಮತಿಸುವ ಮೂಲಕ ಹೆಚ್ಚಿನ ಸಂದರ್ಭಗಳಲ್ಲಿ ನಗದು ಹಣವನ್ನು ಬಳಸುವ ಅಗತ್ಯವನ್ನು ತಪ್ಪಿಸಲಾಗುತ್ತಿದೆ.
ಭಾರತದ ಬಹುತೇಕ ನಗರಗಳಲ್ಲಿ ರಸ್ತೆಬದಿಯ ಮಾರಾಟಗಾರರಿಂದ ಹಿಡಿದು ಚಿಲ್ಲರೆ ವ್ಯಾಪಾರಿಗಳವರೆಗೂ ಯುಪಿಐ ಪಾವತಿಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ. ಯುಪಿಐ ಸುರಕ್ಷಿತ ಪಾವತಿ ವ್ಯವಸ್ಥೆಯಾಗಿದ್ದರೂ, ನಿಮ್ಮ ಕಡೆಯಿಂದ ಅಜಾಗರೂಕ ದೋಷಗಳು ಕೆಲವೊಮ್ಮೆ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಹಾಗೆ ಆದಂತ ಸಂದರ್ಭದಲ್ಲಿ ಮುಂದೇನು ಮಾಡಬೇಕು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.
ಯಾರದ್ದೋ ಖಾತೆಗೆ ಜಮಾ ಆಯ್ತಾ ನಿಮ್ಮ ಹಣ?
ಜಾಗತಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳುವ ಸಂದರ್ಭದಲ್ಲಿ ಜನರು ಹಲವು ರೀತಿಯ ಅನಾನೂಕೂಲತೆಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಾರೆ. ತಪ್ಪಾದ ಯುಪಿಐ ಐಡಿಯನ್ನು ನಮೂದಿಸುವುದು, ಬೇರೆಯವರ ಬ್ಯಾಂಕ್ ಖಾತೆಗೆ ತಪ್ಪಾಗಿ ಹಣವನ್ನು ಕಳುಹಿಸುವುದು ಸಹ ನೀವು ಎದುರಿಸಬಹುದಾದ ಸನ್ನಿವೇಶಗಳಲ್ಲಿ ಸೇರಿದೆ. ನಮ್ಮಲ್ಲಿ ಹೆಚ್ಚಿನವರು ಅಂತಹ ಸಂದರ್ಭಗಳಲ್ಲಿ ಭಯಭೀತರಾಗುತ್ತಾರೆ, ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ವರ್ಗಾವಣೆ ಮಾಡಿದ ಮೊತ್ತವನ್ನು ವಾಪಸ್ ಪಡೆದುಕೊಳ್ಳಬಹುದು.
ತಪ್ಪಾದ ಪಾವತಿ ಬಗ್ಗೆ ಆರ್‌ಬಿಐ ಹೇಳುವುದೇನು?
ಡಿಜಿಟಲ್ ಸೇವೆಗಳ ಮೂಲಕ ಯಾರಿಗೋ ಕಳುಹಿಸಬೇಕಾದ ಹಣವನ್ನು ಇನ್ಯಾವುದೋ ಸಂಖ್ಯೆಗೆ ಕಳುಹಿಸಿದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಒಂದೇ ಒಂದು ಸಂಖ್ಯೆ ತಪ್ಪಾಗುವುದರಿಂದ ಕೈಯಲ್ಲಿದ್ದ ಕಾಸು ಕೈ ತಪ್ಪಿ ಹೋಗಿರುವ ಘಟನೆಗಳು ನಡೆದಿರುತ್ತವೆ. ಈ ಹಂತದಲ್ಲಿ ತೊಂದರೆಯನ್ನು ಅನುಭವಿಸುವ ವ್ಯಕ್ತಿಗಳು ತಾವು ಪಾವತಿ ಮಾಡಲು ಬಯಸಿದ ವ್ಯವಸ್ಥೆಯೊಂದಿಗೆ ದೂರು ಸಲ್ಲಿಸಬೇಕು ಎಂದು ಆರ್‌ಬಿಐ ಹೇಳುತ್ತದೆ.
ಪ್ಲೀಸ್ ನಮ್ ಹಣ ವಾಪಸ್ ಕೊಡಿ ಎನ್ನುವುದು ಹೇಗೆ?
ಸಾಮಾನ್ಯವಾಗಿ ಡಿಜಿಟಲ್ ಪೇಮೆಂಟ್ ಮಾಡುವುದಕ್ಕೆ ಸಾರ್ವಜನಿಕರು ಹೆಚ್ಚಾಗಿ ಪೇಟಿಎಂ, ಗೂಗಲ್ ಪೇ ಮತ್ತು ಫೋನ್ ಪೇನಂತಹ ಅಪ್ಲಿಕೇಶನ್‌ಗಳನ್ನು ಅವಲಂಬಿಸಿದ್ದಾರೆ. ಹೀಗೆ ಇರುವಾಗ ಗ್ರಾಹಕ ಸೇವೆಯಿಂದ ನೀವು ಸಹಾಯವನ್ನು ಪಡೆಯಬಹುದು. ಆ ಮೂಲಕ ನೀವು ತಪ್ಪಾದ ಸಂಖ್ಯೆಗೆ ಕಳುಹಿಸಿದ ಹಣವನ್ನು ಮರುಪಾವತಿ ಮಾಡುವಂತೆ ವಿನಂತಿಸಬಹುದು.
ಪಾವತಿ ವ್ಯವಸ್ಥೆಯು ನಿಮ್ಮ ಸಮಸ್ಯೆ ಬಗೆಹರಿಸದಿದ್ದರೇನು ಗತಿ?
ಒಂದು ಹಂತದಲ್ಲಿ ನೀವು ಬಳಸುವ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ಪಾವತಿ ವ್ಯವಸ್ಥೆಗಳು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ, ಡಿಜಿಟಲ್ ವಹಿವಾಟುಗಳಿಗಾಗಿ ನೀವು ಆರ್‌ಬಿಐನ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು. ಆರ್‌ಬಿಐ ಪ್ರಕಾರ, "ಸ್ಕೀಮ್‌ನ ಷರತ್ತು 8 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದೂರಿನ ಆಧಾರದ ಮೇಲೆ ಒಳಗೊಂಡಿರುವ ಕೆಲವು ಸೇವೆಗಳಲ್ಲಿನ ಕೊರತೆಗಾಗಿ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಸಿಸ್ಟಮ್ ಭಾಗವಹಿಸುವವರ ವಿರುದ್ಧ ಗ್ರಾಹಕರ ದೂರುಗಳನ್ನು ನಿವಾರಿಸಲು" ಈ ಹಿರಿಯ ಅಧಿಕಾರಿಗಳಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications