ಭಾರತದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಹಣದುಬ್ಬರವು ನಿರೀಕ್ಷೆಗಳಿಗೆ ಅನುಗುಣವಾಗಿ ಆಗಸ್ಟ್‌ನಲ್ಲಿ ಶೇಕಡ 0.52 ಕ್ಕೆ ಕುಸಿತ ಕಂಡಿದೆ. ಸತತ ಐದನೇ ತಿಂಗಳು ದೇಶದ ಡಬ್ಲ್ಯುಪಿಐ ನೆಗೆಟಿವ್ ಆಗಿದೆ. ಖನಿಜ ತೈಲಗಳು, ಮೂಲ ಲೋಹಗಳು, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ಜವಳಿ ಮತ್ತು ಆಹಾರ ಉತ್ಪನ್ನಗಳ ದರ ಕುಸಿತದಿಂದಾಗಿ ಸಗಟು ಹಣದುಬ್ಬರ ಕುಸಿತವಾಗಿದೆ.
ಸಗಟು ಹಣದುಬ್ಬರ ಹಿಂದಿನ ತಿಂಗಳಲ್ಲಿ, ಜೂನ್ 2023 ರಲ್ಲಿ ಶೇಕಡ 4.12 ರಷ್ಟು ಕುಸಿತ ಕಂಡು ಶೇಕಡ 1.36 ಕ್ಕೆ ಇಳಿಕೆಯಾಗಿದೆ. ಏಪ್ರಿಲ್ 2023 ರಿಂದ ಸಗಟು ಹಣದುಬ್ಬರವು ನೆಗೆಟಿವ್ ಆಗಿದೆ. ಡಬ್ಲ್ಯೂಪಿಐ ಮೇ ತಿಂಗಳಲ್ಲಿ ಶೇಕಡ 3.48 ಮತ್ತು ಏಪ್ರಿಲ್‌ನಲ್ಲಿ ಶೇಕಡ 0.79 ಕ್ಕೆ ಕುಸಿತವನ್ನು ಕಂಡಿದೆ.

ಸೆಪ್ಟೆಂಬರ್ 14 ರಂದು ಹೇಳಿಕೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು, ಅಖಿಲ ಭಾರತ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಸಂಖ್ಯೆಗಳ ಆಧಾರದ ಮೇಲೆ ವಾರ್ಷಿಕ ಹಣದುಬ್ಬರ ದರವು 2023 ರ ಆಗಸ್ಟ್‌ನಲ್ಲಿ ಶೇಕಡ (-) 0.52 ರಷ್ಟಿದೆ. ಜುಲೈ 2023 ರಲ್ಲಿ (-) 1.36 ಆಗಿತ್ತು. ಹಿಂದಿನ ತಿಂಗಳಿಗೆ ಹೋಲಿಸಿದರೆ ಖನಿಜ ತೈಲಗಳು, ಮೂಲ ಲೋಹಗಳು, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ಜವಳಿ ಮತ್ತು ಆಹಾರ ಉತ್ಪನ್ನಗಳ ಬೆಲೆಗಳಲ್ಲಿನ ಕುಸಿತದಿಂದಾಗಿ ಹಣದುಬ್ಬರ ಕುಸಿಸಿದೆ ಎಂದು ತಿಳಿಸಿದೆ.
ಇಂಧನ ಮತ್ತು ಶಕ್ತಿ ಮತ್ತು ತಯಾರಿಸಿದ ಉತ್ಪನ್ನಗಳಲ್ಲಿನ ಡಬ್ಲ್ಯೂಪಿಐ ದರವು ಋಣಾತ್ಮಕವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಾಥಮಿಕ ವಸ್ತುಗಳಲ್ಲಿ ಹಣದುಬ್ಬರ ದರವು ಶೇಕಡ 6.34, ಇಂಧನ ಮತ್ತು ಶಕ್ತಿ ಹಣದುಬ್ಬರ ದರವು ಶೇಕಡ -6.03, ತಯಾರಿಸಿದ ಉತ್ಪನ್ನಗಳಲ್ಲಿ ಹಣದುಬ್ಬರ ದರವು ಶೇಕಡ -2.37, ಆಹಾರ ಸೂಚ್ಯಂಕದಲ್ಲಿ ಹಣದುಬ್ಬರ ದರವು ಶೇಕಡ 5.62 ಆಗಿದೆ. ಜುಲೈ 2023 ಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ ಡಬ್ಲ್ಯೂಪಿಐ ಸೂಚ್ಯಂಕದಲ್ಲಿ ತಿಂಗಳಿನಿಂದ ತಿಂಗಳ ಬದಲಾವಣೆಯು ಶೇಕಡ 0.33 ರಷ್ಟಿದೆ ಎಂದು ಸಚಿವಾಲಯವು ಹೇಳಿದೆ.
ರಿಟೇಲ್ ಹಣದುಬ್ಬರ
ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಏನ್‌ಎಸ್‌ಒ) ಮಂಗಳವಾರ, ಸೆಪ್ಟೆಂಬರ್ 12 ರಂದು ಒದಗಿಸಿದ ಮಾಹಿತಿಯ ಪ್ರಕಾರ ಭಾರತದಲ್ಲಿ ರಿಟೇಲ್ ಹಣದುಬ್ಬರವು ಜುಲೈನ ಗರಿಷ್ಠ ಮಟ್ಟದಿಂದ ಆಗಸ್ಟ್‌ನಲ್ಲಿ ಶೇಕಡ 6.83 ಕ್ಕೆ ಇಳಿಕೆ ಕಂಡಿದೆ. ಜುಲೈ ತಿಂಗಳಿನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕದಿಂದ ಅಳೆಯಲಾಗುವ ಈ ರಿಟೇಲ್ ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟವಾದ ಶೇಕಡ 7.44 ಕ್ಕೆ ಏರಿಕೆ ಕಂಡಿತ್ತು.
ಆಗಸ್ಟ್‌ನ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಶೇಕಡ 6.83 ರಷ್ಟಿದ್ದು, ಜುಲೈನಲ್ಲಿದ್ದ ಹಣದುಬ್ಬರಕ್ಕಿಂತ ಸುಮಾರು 61 ಬೇಸಿಸ್ ಪಾಯಿಂಟ್‌ಗಳು ಕಡಿಮೆಯಾಗಿದೆ. ಆದರೂ ಕೂಡಾ ಭಾರತದಲ್ಲಿ ರಿಟೇಲ್ ಹಣದುಬ್ಬರವು ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಿತಿಗಿಂತ ರಿಟೇಲ್ ಹಣದುಬ್ಬರ ಅಧಿಕವಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications