ಭಾರತದ ಸಗಟು ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಸತತ ಆರನೇ ತಿಂಗಳಿಗೆ ನೆಗೆಟಿವ್ ಝೋನ್‌ನಲ್ಲಿದೆ. ಹಣದುಬ್ಬರವು ಶೇಕಡ -0.26 ರ ಮಟ್ಟದಲ್ಲಿದೆ ಎಂದು ಅಕ್ಟೋಬರ್ 16 ರಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಹಣದುಬ್ಬರವು ಆಗಸ್ಟ್ 2023 ರಲ್ಲಿ ಶೇಕಡ -0.52 ಆಗಿತ್ತು. ಸೆಪ್ಟೆಂಬರ್ 2022 ರಲ್ಲಿ ಶೇಕಡ 10.55 ಆಗಿತ್ತು.
ಶೇಕಡ -0.26 ಇತ್ತೀಚಿನ ಸಗಟು ಹಣದುಬ್ಬರ ಅಂದಾಜಿಗಿಂತ ಕೆಳಗೆ ಇದೆ. ಅರ್ಥಶಾಸ್ತ್ರಜ್ಞರು ಕಳೆದ ತಿಂಗಳು ಶೇಕಡ 0.7 ಕ್ಕೆ ಏರಿಕೆಯಾಗಿದೆ ಎಂದು ಊಹಿಸಿದ್ದಾರೆ. ಅಕ್ಟೋಬರ್ 12 ರಂದು ಸಚಿವಾಲಯವು ಸೆಪ್ಟೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ರಿಟೇಲ್ ಹಣದುಬ್ಬರ ಇಳಿದಿದೆ ಎಂದು ಹೇಳಿದ ಬಳಿಕ ಈಗ ಡಬ್ಲ್ಯೂಪಿಐ ಡೇಟಾ ಬಂದಿದೆ.

ಸೆಪ್ಟೆಂಬರ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ ಶೇಕಡ 5.02ಕ್ಕೆ ಇಳಿಕೆಯಾಗಿದೆ. ಜುಲೈನಲ್ಲಿ ರಿಟೇಲ್ ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟ ಶೇಕಡ 7.44 ಆಗಿದೆ. ಅಂದರೆ ಈಗ ಸುಮಾರು 242 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಅದೇ ಅವಧಿಯಲ್ಲಿ, ಡಬ್ಲ್ಯುಪಿಐ ಹಣದುಬ್ಬರವು 97 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಳವಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕದ ಸಾಮಾನ್ಯ ಸೂಚ್ಯಂಕದಂತೆ, ಡಬ್ಲ್ಯೂಪಿಐಯ ಎಲ್ಲಾ-ಸರಕು ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ ತಿಂಗಳಿನಿಂದ ತಿಂಗಳಿಗೆ ಕುಸಿತ ಕಂಡಿದೆ. ಸಿಪಿಐ ಶೇಕಡ 1.1ರಿಂದ ಶೇಕಡ 0.59ಕ್ಕೆ ಕುಸಿದಿದೆ.
ಸೆಪ್ಟೆಂಬರ್‌ನಲ್ಲಿ, ಡಬ್ಲ್ಯುಪಿಐನ ಆಹಾರ ಸೂಚ್ಯಂಕವು ತಿಂಗಳಿನಿಂದ ತಿಂಗಳಿಗೆ ಶೇಕಡ 4.46ಕ್ಕೆ ಕಡಿಮೆಯಾಗಿದೆ. ಆಗಸ್ಟ್‌ನಲ್ಲಿ ತಿಂಗಳಿನಿಂದ ತಿಂಗಳಿಗೆ ಶೇಕಡ 1.38 ರಷ್ಟು ಕುಸಿತ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಟೊಮೆಟೊ ಬೆಲೆಗಳು ತೀವ್ರವಾಗಿ ಇಳಿಕೆಯಾಗಿರುವುದು ಆಗಿದೆ.
ಜೂನ್ ಮತ್ತು ಜುಲೈನಲ್ಲಿ ಕ್ರಮವಾಗಿ ಶೇಕಡ 56 ಮತ್ತು ಶೇಕಡ 318 ರಷಷ್ಟು ಟೊಮೆಟೊ ಬೆಲೆಗಳು ಹೆಚ್ಚಳವಾಗಿದೆ. ಆದರೆ ಆಗಸ್ಟ್‌ನಲ್ಲಿ ಟೊಮೆಟೊ ಬೆಲೆಗಳು ಶೇಕಡ 22 ರಷ್ಟು ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಶೇಕಡ 73 ರಷ್ಟು ಕುಸಿದಿದೆ. ತರಕಾರಿಗಳ ಒಟ್ಟಾರೆ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ ಶೇಕಡ 37 ರಷ್ಟು ಕಡಿಮೆಯಾಗಿದೆ.
ಸರ್ಕಾರಕ್ಕೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗೆ ಚಿಂತೆಯ ವಿಷಯವೆಂದರೆ ಧಾನ್ಯಗಳು (ಶೇ. 1), ಬೇಳೆಕಾಳುಗಳು (ಶೇ. 6), ಹಣ್ಣುಗಳು (ಶೇ. 5) ಮತ್ತು ಹಾಲು (ಶೇ. 5) ಸೇರಿದಂತೆ ಬಹುತೇಕ ಎಲ್ಲಾ ಇತರ ಆಹಾರ ಪದಾರ್ಥಗಳ ಬೆಲೆಯು ಏರಿಕೆ ಆಗಿರುವುದು ಆಗಿದೆ.
ಇದರೊಂದಿಗೆ ಡಬ್ಲ್ಯೂಪಿಐಯ ಇಂಧನ ಮತ್ತು ಶಕ್ತಿ ಹಣದುಬ್ಬರವು ಶೇಕಡ 2 ರಷ್ಟು ತಿಂಗಳಿನಿಂದ ತಿಂಗಳಿಗೆ ಏರಿಕೆಯಾಗಿದೆ. ತಯಾರಿಸಿದ ಉತ್ಪನ್ನಗಳ ಸೂಚ್ಯಂಕವು ಸುಮಾರು ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ, ಸೆಪ್ಟೆಂಬರ್‌ನಲ್ಲಿ ಸತತವಾಗಿ ಎರಡನೇ ತಿಂಗಳಿಗೆ ಅನುಕ್ರಮವಾಗಿ ಏರಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications