ಸಗಟು ಬೆಲೆ ಸೂಚ್ಯಂಕ-ಆಧಾರಿತ ಹಣದುಬ್ಬರವು ಅಕ್ಟೋಬರ್‌ನಲ್ಲಿ ಏಳನೇ ಸತತ ತಿಂಗಳಿಗೆ ನೆಗೆಟಿವ್ ಝೋನ್‌ನಲ್ಲಿದೆ. ಆಹಾರ ಪದಾರ್ಥಗಳ ಬೆಲೆಗಳು ಕುಸಿತವಾದ ಕಾರಣ ಅಕ್ಟೋಬರ್ ಸಗಟು ಹಣದುಬ್ಬರವು ಶೇಕಡ (-) 0.52 ರಲ್ಲಿಯೇ ಉಳಿದುಕೊಂಡಿದೆ.
ಡಬ್ಲ್ಯೂಪಿಐ ಆಧಾರಿತ ಹಣದುಬ್ಬರ ದರವು ನೆಗೆಟಿವ್ ಝೋನ್‌ನಲ್ಲಿದ್ದು, ಸೆಪ್ಟೆಂಬರ್, 2023 ರಲ್ಲಿ ಶೇಕಡಾ (-) 0.26 ರಷ್ಟಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಡಬ್ಲ್ಯುಪಿಐ ಶೇಕಡ 8.67 ರಷ್ಟಿತ್ತು.

ಅಕ್ಟೋಬರ್‌ನಲ್ಲಿ ಆಹಾರ ವಸ್ತುಗಳ ಹಣದುಬ್ಬರವು ಶೇಕಡ 2.53 ಕ್ಕೆ ಇಳಿದಿದೆ. ಹಿಂದಿನ ತಿಂಗಳಲ್ಲಿ ಇದು ಶೇಕಡ 3.35 ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇಕಡ (-) 2.47 ಆಗಿದ್ದು, ಸೆಪ್ಟೆಂಬರ್‌ನಲ್ಲಿ ಶೇಕಡ (-) 3.35 ಆಗಿತ್ತು.
"ರಾಸಾಯನಿಕಗಳು, ವಿದ್ಯುತ್, ಜವಳಿ, ಮೂಲ ಲೋಹಗಳು, ಆಹಾರ ಉತ್ಪನ್ನಗಳು, ಕಾಗದ ಮತ್ತು ಕಾಗದದ ಉತ್ಪನ್ನಗಳು ಇತ್ಯಾದಿಗಳ ಬೆಲೆಗಳಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಅಕ್ಟೋಬರ್, 2023 ರಲ್ಲಿ ಹಣದುಬ್ಬರವು ನೆಗೆಟಿವ್ ಝೋನ್‌ನಲ್ಲಿದೆ," ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಮಂಗಳವಾರ ತಿಳಿಸಿದೆ.
ತಯಾರಿಸಿದ ಉತ್ಪನ್ನಗಳಲ್ಲಿ, ಹಣದುಬ್ಬರ ದರವು ಸೆಪ್ಟೆಂಬರ್‌ನಲ್ಲಿ ಶೇಕಡ (-) 1.34 ಶೇಕಡಕ್ಕೆ ಹೋಲಿಸಿದರೆ ಶೇಕಡ (-) 1.13 ಕ್ಕೆ ತಲುಪಿದೆ. ಅಕ್ಟೋಬರ್‌ನ ವಾರ್ಷಿಕ ರಿಟೇಲ್ ಅಥವಾ ಗ್ರಾಹಕ ಬೆಲೆ ಹಣದುಬ್ಬರವು 5 ತಿಂಗಳ ಕನಿಷ್ಠ ಶೇಕಡ 4.87ಕ್ಕೆ ತಲುಪಿದೆ ಎಂದು ಸೋಮವಾರ ಬಿಡುಗಡೆಯಾದ ಅಂಕಿಅಂಶಗಳು ತೋರಿಸಿವೆ.
ರಿಟೇಲ್ ಹಣದುಬ್ಬರ ಎಷ್ಟಿದೆ?
ಭಾರತದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಅಕ್ಟೋಬರ್ 2023 ರಲ್ಲಿ ನಾಲ್ಕು ತಿಂಗಳುಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕಳೆದ ತಿಂಗಳು ಕೂಡಾ ಕುಸಿದಿದ್ದ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇಕಡ 4.87ಕ್ಕೆ ತಲುಪಿದೆ. ಹಿಂದಿನ ತಿಂಗಳಲ್ಲಿ, ರಿಟೇಲ್ ಹಣದುಬ್ಬರ ದರವು ಶೇಕಡ 5.02 ರಷ್ಟಿತ್ತು.
ಹಣದುಬ್ಬರವು ಪ್ರಸ್ತುತ ಆರ್‌ಬಿಐನ ಮಧ್ಯಮ-ಅವಧಿಯ ಗುರಿಯಾದ ಶೇಕಡ 4ಕ್ಕೆ ಸಮೀಪದಲ್ಲಿದೆ. ಸತತ ಎರಡನೇ ತಿಂಗಳು ರಿಟೇಲ್ ಹಣದುಬ್ಬರವು ಆರ್‌ಬಿಐನ ಸಹಿಷ್ಣು ಮಿತಿಗಿಂತ ಕಡಿಮೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣದುಬ್ಬರ ಶೇಕಡ 6.77ರಷ್ಟಿತ್ತು.


Click it and Unblock the Notifications