Inflation: ಮಾರ್ಚ್‌ ಸಗಟು ಹಣದುಬ್ಬರ ಶೇ.1.34ಕ್ಕೆ ಇಳಿಕೆ, ಇಲ್ಲಿದೆ ವಿವರ

ಸರ್ಕಾರ ಮಾರ್ಚ್ ತಿಂಗಳ ಸಗಟು ಹಣದುಬ್ಬರವನ್ನು ಬಿಡುಗಡೆ ಮಾಡಿದೆ. ಈ ಡೇಟಾ ಪ್ರಕಾರ ಮಾರ್ಚ್ ತಿಂಗಳಿನಲ್ಲಿ ಸಗಟು ಹಣದುಬ್ಬರವು ಶೇಕಡ 1.34ಕ್ಕೆ ಇಳಿಕೆಯಾಗಿದೆ. ಸೋಮವಾರ ವಾಣಿಜ್ಯ ಸಚಿವಾಲಯ ಈ ಡೇಟಾವನನ್ನು ಸೋಮವಾರ ಬಿಡುಗಡೆ ಮಾಡಿದೆ. ಡೇಟಾ ಪ್ರಕಾರ ಮಾರ್ಚ್ ತಿಂಗಳ ಸಗಟು ಹಣದುಬ್ಬರವು ಶೇಕಡ 1.34 ಆಗಿದೆ. ಕಳೆದ ವರ್ಷದ ಪ್ರಮಾಣಕ್ಕಿಂತ ಇಳಿಕೆಯಾಗಿದೆ. ಫೆಬ್ರವರಿಯಲ್ಲಿ ಶೇಕಡ 3.85 ಆಗಿದೆ.

ಮಾರ್ಚ್ 2023ರಲ್ಲಿ ಹಣದುಬ್ಬರ ದರದಲ್ಲಿ ಕುಸಿತ ಕಂಡು ಬಂದಿದೆ. ಪ್ರಾಥಮಿಕವಾಗಿ ಲೋಹಗಳು, ಆಹಾರ ಉತ್ಪನ್ನಗಳು, ಜವಳಿ, ಆಹಾರೇತರ ವಸ್ತುಗಳು, ಖನಿಜಗಳು, ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಕಾಗದ ಮತ್ತು ಕಾಗದದ ಉತ್ಪನ್ನಗಳ ಬೆಲೆಗಳ ಕುಸಿತದಿಂದಾಗಿ ದೇಶದಲ್ಲಿ ಮಾರ್ಚ್ ತಿಂಗಳಿನಲ್ಲಿ ಸಗಟು ಹಣದುಬ್ಬರವು ಇಳಿಕೆಯಾಗಿದೆ.

 Inflation: ಮಾರ್ಚ್‌ ಸಗಟು ಹಣದುಬ್ಬರ ಶೇ.1.34ಕ್ಕೆ ಇಳಿಕೆ

ಕಳೆದ ಮೂರು ತಿಂಗಳುಗಳಲ್ಲಿ ಆಹಾರ ಹಣದುಬ್ಬರವು ಭಾರೀ ಇಳಿಕೆಯಾಗುತ್ತಿದೆ. ಜನವರಿಯಲ್ಲಿ ಶೇಲಡ 3.13ರಷ್ಟಿದ್ದ ಸಗಟು ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡ 2.76ಕ್ಕೆ ಕುಸಿದಿದೆ. ಇನ್ನು ಮಾರ್ಚ್ ವೇಳೆಗೆ ಶೇಕಡ 2.32ಕ್ಕೆ ಇಳಿಕೆಯಾಗಿದೆ. ಆದರೆ ಫೆಬ್ರವರಿ 2023ಕ್ಕೆ ಹೋಲಿಸಿದರೆ ಡಬ್ಲ್ಯೂಪಿ ಸೂಚ್ಯಂಕದಲ್ಲಿ ತಿಂಗಳಿನಿಂದ ತಿಂಗಳ ಬದಲಾವಣೆಯು ಬದಲಾಗದೆ ಉಳಿದಿದೆ.

ಯಾವ ವಲಯದಲ್ಲಿ ಹಣದುಬ್ಬರ ಎಷ್ಟು ಏರಿಕೆ, ಇಳಿಕೆ?

ಪ್ರಮುಖ ಗುಂಪಿನ ಸೂಚ್ಯಂಕವು ಫೆಬ್ರವರಿ, 2023 ರ ತಿಂಗಳಿಗೆ 173.0 (ತಾತ್ಕಾಲಿಕ) ನಿಂದ ಮಾರ್ಚ್, 2023 ರಲ್ಲಿ 175.0 (ತಾತ್ಕಾಲಿಕ) ಕ್ಕೆ ಅಂದರೆ ಶೇಕಡ 1.16ರಷ್ಟು ಹೆಚ್ಚಳವಾಗಿದೆ. ಖನಿಜಗಳ ಬೆಲೆಗಳು (ಶೇಕಡ 8.16), ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (ಶೇಕಡ 4.61) ಮತ್ತು ಆಹಾರ ಉತ್ಪನ್ನ (ಶೇಕಡ 1.13) ಫೆಬ್ರವರಿಗೆ ಹೋಲಿಕೆ ಮಾಡಿದಾಗ ಮಾರ್ಚ್‌ನಲ್ಲಿ ಏರಿಕೆಯಾಗಿದೆ. ಇನ್ನು ಆಹಾರೇತರ ವಸ್ತುಗಳ ದರವು ಫೆಬ್ರವರಿಗೆ ಹೋಲಿಕೆ ಮಾಡಿದಾಗ ಮಾರ್ಚ್‌ನಲ್ಲಿ ಶೇಕಡ 2.05ರಷ್ಟು ಇಳಿಕೆಯಾಗಿದೆ.

ಇನ್ನು ಉತ್ಪಾದಾಕ ವಸ್ತುಗಳ ಸೂಚ್ಯಂಕವು ಮಾರ್ಚ್ ತಿಂಗಳಿನಲ್ಲಿ ಶೇಕಡ 0.28ರಷ್ಟು ಇಳಿಕೆಯಾಗಿ, 141.2ಕ್ಕೆ ತಲುಪಿದೆ. ಅದಕ್ಕೂ ಹಿಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ 141.6 ಆಗಿತ್ತು. ಇದೇ ಸಂದರ್ಭದಲ್ಲಿ ಇಂಧನ ಹಾಗೂ ಪವರ್ ಗ್ರೂಪ್ ಸೂಚ್ಯಂಕ ಶೇಕಡ 1.26ರಷ್ಟು ಇಳಿದು 156.8ಕ್ಕೆ ತಲುಪಿದೆ. ಫೆಬ್ರವರಿಯಲ್ಲಿ 158.8 ಆಗಿತ್ತು. ಕಲ್ಲಿದ್ದಲು ಬೆಲೆಯು ಏರಿಕೆಯಾಗಿದೆ. ಖನಿಜ ತೈಲಗಳು ಮತ್ತು ವಿದ್ಯುತ್ ದರವು ಕ್ರಮವಾಗಿ ಶೇಕಡ 0.24 ಅಥವಾ ಶೇಕಡ 4.95ರಷ್ಟು ಕುಸಿತವಾಗಿದೆ.

ಫೆಬ್ರವರಿ ಸಗಟು ಹಣದುಬ್ಬರ

ಫೆಬ್ರವರಿಯಲ್ಲಿ ಸತತ 9ನೇ ತಿಂಗಳು ಸಗಟು ಹಣದುಬ್ಬರವು ಇಳಿಕೆಯಾಗಿದೆ. ಪ್ರಮುಖವಾಗಿ ಇಂಧನ ಹಾಗೂ ಪವರ್ ಬೆಲೆ ಇಳಿಯುತ್ತಿದ್ದಂತೆ ಸಗಟು ಹಣದುಬ್ಬರವು ಕುಸಿತ ಕಂಡಿದೆ. ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ಇಳಿದು ಶೇಕಡ 3.85ಕ್ಕೆ ತಲುಪಿದೆ ಎಂದು ಸರ್ಕಾರದ ಡೇಟಾ ಹೇಳಿದೆ. ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ (ಡಬ್ಲ್ಯೂಪಿಐ) ಮೂಲದ ಹಣದುಬ್ಬರ ದರ ಜನವರಿ ತಿಂಗಳಿನಲ್ಲಿ ಶೇಕಡ 4.73 ಆಗಿತ್ತು. ಇನ್ನು ಫೆಬ್ರವರಿ 2022ರಲ್ಲಿ ಹಣದುಬ್ಬರವು ಶೇಕಡ 13.43 ಆಗಿತ್ತು.

ಇನ್ನು ಆಹಾರ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡ 3.81ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ ಆಹಾರ ಹಣದುಬ್ಬರವು ಶೇಕಡ 2.38 ಆಗಿತ್ತು. ಕಚ್ಚಾ ಪೆಟ್ರೋಲಿಯಂ & ನೈಸರ್ಗಿಕ ಅನಿಲ, ಆಹಾರ ಉತ್ಪನ್ನ, ಮಿನರೇಲ್, ಕಂಪ್ಯೂಟರ್, ಎಲೆಕ್ಟ್ರಿಕ್ & ಒಪ್ಟಿಕಲ್ ಉತ್ಪನ್ನ, ಕೆಮಿಕಲ್ & ಕೆಮಿಕಲ್ ಉತ್ಪನ್ನ, ಎಲೆಕ್ಟ್ರಿಕ್ ಇಕ್ವಿಪ್‌ಮೆಂಟ್, ಮೋಟಾರು ವಾಹನ ಮೊದಲಾದವುಗಳ ದರ ಇಳಿದ ಪರಿಣಾಮ ಸಗಟು ಹಣದುಬ್ಬರ ಇಳಿದಿದೆ ಎಂದು ಸರ್ಕಾರ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+