ಸತತ 9ನೇ ತಿಂಗಳು ಸಗಟು ಹಣದುಬ್ಬರವು ಇಳಿಕೆಯಾಗಿದೆ. ಪ್ರಮುಖವಾಗಿ ಇಂಧನ ಹಾಗೂ ಪವರ್ ಬೆಲೆ ಇಳಿಯುತ್ತಿದ್ದಂತೆ ಸಗಟು ಹಣದುಬ್ಬರವು ಕುಸಿತ ಕಂಡಿದೆ. ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ಇಳಿದು ಶೇಕಡ 3.85ಕ್ಕೆ ತಲುಪಿದೆ ಎಂದು ಸರ್ಕಾರದ ಡೇಟಾ ಹೇಳಿದೆ. ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ (ಡಬ್ಲ್ಯೂಪಿಐ) ಮೂಲದ ಹಣದುಬ್ಬರ ದರ ಜನವರಿ ತಿಂಗಳಿನಲ್ಲಿ ಶೇಕಡ 4.73 ಆಗಿತ್ತು. ಇನ್ನು ಫೆಬ್ರವರಿ 2022ರಲ್ಲಿ ಹಣದುಬ್ಬರವು ಶೇಕಡ 13.43 ಆಗಿತ್ತು.
ಇನ್ನು ಆಹಾರ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡ 3.81ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ ಆಹಾರ ಹಣದುಬ್ಬರವು ಶೇಕಡ 2.38 ಆಗಿತ್ತು. ಕಚ್ಚಾ ಪೆಟ್ರೋಲಿಯಂ & ನೈಸರ್ಗಿಕ ಅನಿಲ, ಆಹಾರ ಉತ್ಪನ್ನ, ಮಿನರೇಲ್, ಕಂಪ್ಯೂಟರ್, ಎಲೆಕ್ಟ್ರಿಕ್ & ಒಪ್ಟಿಕಲ್ ಉತ್ಪನ್ನ, ಕೆಮಿಕಲ್ & ಕೆಮಿಕಲ್ ಉತ್ಪನ್ನ, ಎಲೆಕ್ಟ್ರಿಕ್ ಇಕ್ವಿಪ್‌ಮೆಂಟ್, ಮೋಟಾರು ವಾಹನ ಮೊದಲಾದವುಗಳ ದರ ಇಳಿದ ಪರಿಣಾಮ ಸಗಟು ಹಣದುಬ್ಬರ ಇಳಿದಿದೆ ಎಂದು ಸರ್ಕಾರ ಹೇಳಿದೆ.

ಫೆಬ್ರವರಿ 2023ರಲ್ಲಿ ಕಾಳು-ಧಾನ್ಯಗಳ ಹಣದುಬ್ಬರವು ಶೇಕಡ 2.59 ಆಗಿದ್ದು, ತರಕಾರಿ ಹಣದುಬ್ಬವು (-) ಶೇಕಡ 21.53 ಆಗಿದೆ. ತೈಲ ಬೀಜ ಹಣದುಬ್ಬರವು (-) ಶೇಕಡ 7.38 ಆಗಿತ್ತು. ಇಂಧನ ಮತ್ತು ಪವರ್ ಬಾಸ್ಕೆಟ್ ಹಣದುಬ್ಬರ ಶೇಕಡ 15.15ರಿಂದ ಶೇಕಡ 14.82ಕ್ಕೆ ಇಳಿಕೆಯಾಗಿದೆ. ಉತ್ಪಾದನ ವಸ್ತುಗಳ ಹಣದುಬ್ಬರವು ಶೇಕಡ 2.99ರಿಂದ ಶೇಕಡ 1.94ಕ್ಕೆ ತಲುಪಿದೆ.
ರಿಟೇಲ್ ಹಣದುಬ್ಬರದ ಬಗ್ಗೆ ಮಾಹಿತಿ
ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆದರೆ ಫೆಬ್ರವರಿ 2023ರಲ್ಲಿ ಸಿಪಿಐ ಹಣದುಬ್ಬರ ಕೊಂಚ ಇಳಿಕೆಯಾಗಿ ಶೇಕಡ 6.44ಕ್ಕೆ ತಲುಪಿದೆ. ಆದರೂ ಆರ್ಥಿಕ ಸ್ಥಿತಿ ಇನ್ನೂ ಕೂಡಾ ಸುಧಾರಿಸಿಲ್ಲ. ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (ಸಿಪಿಐ) ಸತತ ಎರಡನೇ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಹಿಷ್ಣು ಮಿತಿಗಿಂತ ಹೆಚ್ಚಳವಾಗಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.52 ಆಗಿದೆ.
ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಒ) ಡೇಟಾದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡ 6.72ರಷ್ಟಿದೆ, ಜನವರಿಯಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.85 ಆಗಿತ್ತು. ಇನ್ನು ನಗರ ಪ್ರದೇಶಗಳಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6ರಿಂದ ಶೇಕಡ 6.10ಕ್ಕೆ ಏರಿಕೆಯಾಗಿದೆ. ಇನ್ನು ಆಹಾರ ಹಣದುಬ್ಬರವು ಕೂಡಾ ಕೊಂಚ ಏರಿದೆ. ಜನವರಿಯಲ್ಲಿದ್ದ ಶೇಕಡ 5.94ರಿಂದ ಫೆಬ್ರವರಿಯಲ್ಲಿ ಶೇಕಡ 5.95ಕ್ಕೆ ತಲುಪಿದೆ. ಸಿಪಿಐ ಬಾಸ್ಕೆಟ್‌ನ ಅರ್ಧದಷ್ಟು ಆಹಾರ ಹಣದುಬ್ಬರವಿದೆ.
ಜನವರಿ ರಿಟೇಲ್, ಸಗಟು ಹಣದುಬ್ಬರ ಮಾಹಿತಿ
ಇನ್ನು ಜನವರಿಯಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದ್ದು, ರಿಟೇಲ್ ಹಣದುಬ್ಬರವು ಏರಿಕೆಯಾಗಿದೆ. ಸಗಟು ಹಣದುಬ್ಬರವು 24 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಶೇಕಡ 4.73ಕ್ಕೆ ತಲುಪಿದೆ. ಕಳೆದ ಕೆಲವು ತಿಂಗಳುಗಳಿಂದ ಸಗಟು ಹಣದುಬ್ಬರವು ಕಡಿಮೆಯಾಗುತ್ತಿದೆ. ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದೆ. 2022ರ ನವೆಂಬರ್‌ನಲ್ಲಿ ಶೇಕಡ 5.85ರಷ್ಟಿದ್ದ ಸಗಟು ಹಣದುಬ್ಬರ, ಡಿಸೆಂಬರ್‌ಗೆ ಶೇಕಡ 4.95ಕ್ಕೆ ಇಳಿಕೆಯಾಗಿದೆ.
ಜನವರಿ ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6.5ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.7ರಷ್ಟು ಆಗಿತ್ತು. ಕಳೆದ ವರ್ಷ ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6 ಆಗಿತ್ತು.
ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸುಮಾರು 10 ತಿಂಗಳ ಬಳಿಕ 2022ರ ಮೇ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವನ್ನು ಏರಿಸಿದೆ. ಆರ್‌ಬಿಐ ಒಟ್ಟು ಆರು ಬಾರಿ ರೆಪೋ ದರವನ್ನು ಏರಿಸಿದೆ. ಮೇ ತಿಂಗಳಿನಿಂದ ಈವರೆಗೆ 250 ಮೂಲಾಂಕ ಹೆಚ್ಚಿಸಿದೆ. ಕಳೆದ ಬಾರಿ ಮೇ ತಿಂಗಳಿನಲ್ಲಿ 25 ಮೂಲಾಂಕ ಏರಿಸಿದ್ದು ಪ್ರಸ್ತುತ ರೆಪೋ ದರ ಶೇಕಡ 6.50ರಷ್ಟಿದೆ.


Click it and Unblock the Notifications