ಜರ್ಮನಿ ಉತ್ಪಾದಿತ ವಸ್ತುಗಳು ವಿಶ್ವದೆಲ್ಲೆಡೆ ಉತ್ತಮ ಮಾರುಕಟ್ಟೆಯನ್ನ ಹೊಂದಿದೆ. ಮೇಡ್ ಇನ್ ಜರ್ಮನಿ ಎಂದರೆ ಸಾಕು ಉತ್ತಮ ಗುಣಮಟ್ಟ, ಬಲಿಷ್ಠ ಎಂಬತೆಲ್ಲಾ ನಂಬಿಕೆಯನ್ನ ಸೃಷ್ಟಿಸಿದೆ. ಮರ್ಸಿಡಿಸ್, ಬಿಎಂಡಬ್ಲ್ಯೂ ಹೀಗೆ ನಾನಾ ಆಟೊಮೊಬೈಲ್ ಮುಂಚೂಣಿ ತಯಾರಿಕಾ ಕಂಪನಿಗಳ ಜೊತೆಗೆ ಅನೇಕ ಉತ್ಪನ್ನಗಳ ಬೃಹತ್ ಮಾರುಕಟ್ಟೆಯನ್ನ ಹೊಂದಿದೆ.
ಜರ್ಮನಿ ಉತ್ಪನ್ನಗಳು ನಿಖರತೆ, ಗುಣಮಟ್ಟ ಹಾಗೂ ಸೃಜನಶೀಲ ಮನೋಭಾವದಿಂದ ಕೂಡಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳು ಮೇಡ್ ಇನ್ ಜರ್ಮನಿ ಲೇಬಲ್ ಅನ್ನು ಒಯ್ಯುತ್ತವೆ. ಹಾಗಿದ್ದರೆ ಅದರ ಯಶಸ್ಸಿನ ಹಿಂದಿನ ರಹಸ್ಯವೇನು ಎಂಬುದನ್ನು ನೀವು ತಿಳಿಯಬೇಕು.
ಒಂದು ಕಾಲದಲ್ಲಿ ಜರ್ಮನಿ ಕಡಿಮೆ ಗುಣಮಟ್ಟದ ಉತ್ಪನ್ನಗಳ ತಯಾರಿಕೆ ವಸ್ತುಗಳನ್ನು ಉತ್ಪಾದನೆ ಜೊತೆಗೆ ಕಡಿಮೆ ಬೆಲೆಯನ್ನ ಹೊಂದಿತ್ತು. 1887ನೇ ಇಸವಿಯಲ್ಲಿ ಲೇಬಲಿಂಗ್ ಕಾಯಿದೆಯನ್ನ ಜಾರಿಗೊಳಿಸಿತು. ಪರಿಣಾಮ ಪ್ರತಿ ರಾಷ್ಟ್ರಗಳಂತೆ ಜರ್ಮನಿಯು ತಮ್ಮ ಉತ್ಪಾದಿನ ವಸ್ತುಗಳ ಮೇಲೆ ಮೇಡ್ ಇನ್ ಜರ್ಮನಿ ಲೇಬಲ್ ಮೂಲಕ ರಫ್ತು ಮಾಡಬೇಕಾಗಿತ್ತು. ಇದು ಜರ್ಮನಿಯ ಉತ್ಪನ್ನಗಳನ್ನ ಗ್ರಾಹಕರು ತಿರಸ್ಕರಿಸುವಂತೆ ಮಾಡುವ ಉದ್ದೇಶವನ್ನು ಹೊಂದಿತ್ತು.

ಆದರೆ ಬ್ರಿಟನ್‌ನ ಈ ಯೋಜನೆಯು ಅವರಿಗೆ ತಿರುಗು ಬಾಣವಾಯ್ತು. ಏಕೆಂದರೆ ಅಲ್ಲಿಯವರೆಗೆ ಕೆಳಮಟ್ಟದ ಗುಣಮಟ್ಟ ನೀಡುತ್ತಿದ್ದ ಜರ್ಮನಿಯು ಅತ್ಯಂತ ಉತ್ತಮ ಗುಣಮಟ್ಟದ ವಸ್ತುಗಳನ್ನ ಉತ್ಪಾದಿಸಿ ಮಾರುಕಟ್ಟೆಗೆ ನೀಡಿತು. ಉದಾಹರಣೆಗೆ ಸಂಗೀತದ ವಾದ್ಯಗಳು, ಗೊಂಬೆಗಳು, ಗಡಿಯಾರ, ಅತ್ಯಾಧುನಿಕ ಟ್ರೈನ್‌ಗಳು ಹೀಗೆ ನಾನಾ ರೀತಿಯ ಉತ್ಪನ್ನಗಳು ಮೇಡ್ ಇನ್ ಜರ್ಮನಿ ಲೇಬಲ್‌ನಲ್ಲಿ ಭಾರೀ ಪ್ರಚಾರಗಿಟ್ಟಿಸಿದವು. ಇದರಿಂದ ಚಾಕು, ಕತ್ತರಿಗಳು ಕೂಡ ಹೊರತಾಗಿಲ್ಲ.
ಜರ್ಮನಿಯ ಲೇಬಲ್‌ನ ವಸ್ತುಗಳು ತಮ್ಮ ಯಶಸ್ವಿ ಗುಣಮಟ್ಟದಿಂದಾಗಿ ಯೂರೋಪ್ ಮಾರುಕಟ್ಟೆಯಲ್ಲಷ್ಟೇ ಅಲ್ಲದೆ ಏಷ್ಯಾ, ಆಫ್ರಿಕಾ, ಅಮೆರಿಕಾದಲ್ಲೂ ಸಾಕಷ್ಟು ಹೆಸರುವಾಸಿಯಾಗಿದೆ.


Click it and Unblock the Notifications