ಗುರು ನಾನಕ್ ಜಯಂತಿ ಮತ್ತು ಕಾರ್ತಿಕ ಪೂರ್ಣಿಮೆ ಹಿನ್ನೆಲೆ ನಾಳೆ ಅಂದರೆ ನವೆಂಬರ್ 5, ಬುಧವಾರದಂದು ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗುತ್ತದೆ. ಅಲ್ಲದೇ ಈ ದಿನ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಇನ್ನು ಗುರುನಾನಕ್ ಜಯಂತಿ (Gurunanak Jayanti) ಪ್ರಯುಕ್ತ ನಾಳೆ ಷೇರು ಮಾರುಕಟ್ಟೆ ಕೂಡಾ ಕ್ಲೋಸ್ ಇರಲಿದೆ. ಇದೀಗ ನಾಳೆ ಗುರುನಾನಕ್ ಜಯಂತಿ ಹಿನ್ನೆಲೆ ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತಾ? ಹಾಗಿದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಬ್ಯಾಂಕ್‌ಗೆ ರಜೆ (Bank Holiday) ಇರಲಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ನವೆಂಬರ್ 5 ರಂದು ಯಾವ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ನವದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಚಂಡೀಗಢ, ಹಿಮಾಚಲ ಪ್ರದೇಶ, ಮಿಜೋರಾಂ, ತೆಲಂಗಾಣ, ರಾಜಸ್ಥಾನ, ಒಡಿಶಾ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂದು ವರದಿಯಾಗಿದೆ.
ಆದ್ದರಿಂದ ನಾಳೆ ಒಂದು ದಿನ ಈ ರಾಜ್ಯಗಳಲ್ಲಿ ಬ್ಯಾಂಕ್ ಸೌಲಭ್ಯಗಳು ಇರುವುದಿಲ್ಲ. ಈ ಹಿನ್ನೆಲೆ ಗ್ರಾಹಕರು ತಮ್ಮ ಅಗತ್ಯ ಬ್ಯಾಂಕ್ ಕೆಲಸಗಳನ್ನು ನಾಳೆ ಒಂದು ದಿನ ಮಾಡಲಾಗುವುದಿಲ್ಲ.
ಈ ತಿಂಗಳ ಮುಂದಿನ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:
ಇನ್ನು ನವೆಂಬರ್ 6 ರಂದು ಮೇಘಾಲಯದಲ್ಲಿ ನೊಂಗ್‌ಕ್ರೆಮ್ ನೃತ್ಯ ಉತ್ಸವ ಮತ್ತು ಬಿಹಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವ ಕಾರಣ ಬಿಹಾರ ಮತ್ತು ಮೇಘಾಲಯದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತವೆ. ನವೆಂಬರ್ 7 ರಂದು ವಾಂಗಲಾ ಉತ್ಸವಕ್ಕಾಗಿ ಮೇಘಾಲಯದಲ್ಲಿ ರಜೆ ಇರಲಿದೆ. ಅದೇ ರೀತಿ ನವೆಂಬರ್ 8 ರಂದು ಕನಕದಾಸ ಜಯಂತಿಯ ನಿಮಿತ್ತ ಕರ್ನಾಟಕದಲ್ಲಿ ಬ್ಯಾಂಕ್ ರಜೆ ನೀಡಲಾಗಿದೆ..
ಗುರುನಾನಕ್ ಜಯಂತಿಯ ಮಹತ್ವ:
ಸಿಖ್ ಧರ್ಮದವರು ಅತ್ಯಂತ ಭಕ್ತಿಯಿಂದ, ಗೌರವದಿಂದ ಆಚರಿಸುವ ಹಬ್ಬವೇ ಗುರುನಾನಕ್ ಜಯಂತಿ ಅಥವಾ ಗುರು ನಾನಕ್ ಪ್ರಕಾಶ್ ಉತ್ಸವ. ಇದು ಸಿಖ್ ಧರ್ಮದ ಮೊದಲ ಗುರುವಾದ ಗುರು ನಾನಕ್ ದೇವ್ ಜೀ ಅವರ ಜನ್ಮದಿನ ಪ್ರಯುಕ್ತ ಸಲ್ಲಿಸುವ ಗೌರವವಾಗಿದೆ. ಇನ್ನು ಪ್ರತೀ ವರ್ಷವೂ ಕಾರ್ತಿಕ ಮಾಸದ ಹುಣ್ಣಿಮೆಯಂದೇ ಬರುತ್ತದೆ. ಅದೇ ರೀತಿ ಈ ಬಾರಿ ನವೆಂಬರ್ 5 ರಂದು ಬಂದಿದೆ.
ಷೇರು ಮಾರುಕಟ್ಟೆಯೂ ಕ್ಲೋಸ್:
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಪ್ರಕಾರ ನಾಳೆ ಗುರು ನಾನಕ್ ಜಯಂತಿ ಪ್ರಯುಕ್ತ ಷೇರು ಮಾರುಕಟ್ಟೆಯೂ ಒಂದು ದಿನ ಕ್ಲೋಸ್ ಇರಲಿದೆ. ಈ ಹಿನ್ನೆಲೆ ಈಕ್ವಿಟಿ, ಡೆರಿವೇಟಿವ್ಸ್, ಸೆಕ್ಯುತಿಟೀಸ್ ಲೆಂಡಿಂಗ್ ಆಂಡ್ ಬಾರೋಯಿಂಗ್ ಮತ್ತು ಕರೆನ್ಸಿ ಡೆರಿವೇಟಿವ್ಸ್ ಸೇರಿಂದಂತೆ ಹಲವು ವಿಭಾಗಗಳಲ್ಲಿ ಯಾವುದೇ ಕಾರ್ಯಾಚರಣೆ ನಡೆಯುವುದಿಲ್ಲ.
ಬ್ಯಾಂಕ್ ಕೆಲಸವಿದ್ದವರು ಇಂದು ಬಿಟ್ಟರೆ ಇನ್ನು ಗುರುವಾರವೇ ಮಾಡಬೇಕಾಗುತ್ತದೆ. ಆದ್ದರಿಂದ ಅಗತ್ಯ ಹಣಕ್ಕಾಗಿ ಎಟಿಎಂ ಅಥವಾ ಆನ್‌ಲೈನ್ ಪೇಮೆಂಟ್ ಆಪ್‌ಗಳನ್ನು ಬಳಸಿದರೆ ಉತ್ತಮ.


Click it and Unblock the Notifications