ಉತ್ಪಾದನೆ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯಾ ಜತೆಗೆ ಒಪ್ಪಂದಕ್ಕೆ ಬರುವಲ್ಲಿ ಒಪೆಕ್ ವಿಫಲವಾದ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರದಲ್ಲಿ 30 ಪರ್ಸೆಂಟ್ ನಷ್ಟು ಭಾರೀ ಇಳಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲ ಉತ್ಪಾದನೆ ಹೆಚ್ಚಳ ಮಾಡಿ, ಬೆಲೆ ಇಳಿಕೆ ಮಾಡುವುದಕ್ಕೆ ಸೌದಿ ಅರೇಬಿಯಾ ಯೋಜನೆ ರೂಪಿಸಿದೆ.
ಅಂತರರಾಷ್ಟ್ರೀಯ ಮಟ್ಟದ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಫ್ಯೂಚರ್ಸ್ ಬೆಲೆಯಲ್ಲಿ 30 ಪರ್ಸೆಂಟ್ ಇಳಿಕೆಯಾಗಿ, ಬ್ಯಾರಲ್ ಗೆ $ 31.23ರಲ್ಲಿ ವಹಿವಾಟು ನಡೆಸಿತು. ಫೆಬ್ರವರಿ 2016ರ ನಂತರದ ಕನಿಷ್ಠ ಬೆಲೆ ಇದಾಗಿದೆ. ಯು.ಎಸ್. ವೆಸ್ಟ್ ಟೆಕ್ಸಾಸ್ ಕಚ್ಚಾ ತೈಲ 26% ಇಳಿದು ಬ್ಯಾರಲ್ ಗೆ 30 ಡಾಲರ್ ನಂತೆ ವಹಿವಾಟು ನಡೆಸಿತು. ಇದು ಕೂಡ ಫೆಬ್ರವರಿ 2016ರ ನಂತರದ ಕನಿಷ್ಠ ಬೆಲೆ.

ತೈಲ ಬೆಲೆ ಮತ್ತಷ್ಟು ಇಳಿಕೆ: ಮಾರ್ಚ್ 7ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಇನ್ನಷ್ಟು ಬೆಲೆ ಕಡಿತ ಮಾಡುವ ನಿರೀಕ್ಷೆ ಇದೆ. ಇದರಿಂದ ಭಾರತದ ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಏಕೆಂದರೆ, ಕಚ್ಚಾ ತೈಲವನ್ನು ಅತಿ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶ ಭಾರತ.
ಕಳೆದ 15 ದಿನದಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ಎರಡು ರುಪಾಯಿಯಷ್ಟು ಇಳಿಕೆಯಾಗಿದೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications