ಕಚ್ಚಾ ತೈಲದ ದರವು ಭಾರೀ ಏರಿಕೆಯಾಗುತ್ತಿರುವಾಗ ಕೇಂದ್ರ ಸರ್ಕಾರವು ಪ್ರತಿ ಟನ್‌ಗೆ 3,500 ರೂಪಾಯಿ (42.56 ಯುಎಸ್‌ಡಿ) ಆಗಿದ್ದ ಕಚ್ಚಾ ತೈಲದ ವಿಂಡ್‌ಫಾಲ್ ತೆರಿಗೆಯನ್ನು ಶೂನ್ಯಕ್ಕೆ ಇಳಿಕೆ ಮಾಡಿದೆ. ಏಪ್ರಿಲ್ 4, 2023ರಂತೆ ಜಾರಿಗೆ ಬರುವಂತೆ ಈ ಘೋಷಣೆಯನ್ನು ಕೇಂದ್ರ ಸರ್ಕಾರವು ಮಾಡಿದೆ. ಇದೇ ಸಂದರ್ಭದಲ್ಲಿ ಡೀಸೆಲ್ ಮೇಲಿನ ರಫ್ತು ಸುಂಕವನ್ನು 50 ಪೈಸೆ ಇಳಿಕೆ ಮಾಡಲಾಗಿದೆ. ಆದರೆ ಈಗ ಕೇಂದ್ರ ಸರ್ಕಾರವು ಕಚ್ಚಾತೈಲದ ಮೇಲೆ ಮತ್ತೆ ವಿಂಡ್‌ಫಾಲ್ ತೆರಿಗೆ ಏರಿಸಿದೆ.
ಹೌದು ಈ ಹಿಂದೆ ವಿಂಡ್‌ಫಾಲ್ ತೆರಿಗೆಯನ್ನು ಸಂಪೂರ್ಣವಾಗಿ ರದ್ದು ಮಾಡಿದ್ದ ಕೇಂದ್ರ ಸರ್ಕಾರವು ಮಂಗಳವಾರ (ಏಪ್ರಿಲ್ 18) ಕಚ್ಚಾ ತೈಲದ ಮೇಲೆ ಮತ್ತೆ ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಿದೆ. ಸ್ಥಳೀಯವಾಗಿ ಉತ್ಪಾದನೆ ಮಾಡಲಾಗುವ ಕಚ್ಚಾ ತೈಲದ ಮೇಲೆ ಕೇಂದ್ರ ಸರ್ಕಾರವು ಪ್ರತಿ ಟನ್‌ಗೆ 6,400 ರೂಪಾಯಿ ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ರಫ್ತು ಸುಂಕವನ್ನು ಸಂಪೂರ್ಣವಾಗಿ ರದ್ದು ಮಾಡಿದೆ.

ಪೆಟ್ರೋಲ್ ಮತ್ತು ಅವಿಯೇಷನ್ ಟರ್ಬೈನ್ ಫ್ಯೂಲ್ (ಎಟಿಎಫ್) ರಫ್ತು ಸುಂಕ ವಿನಾಯಿತಿ ಈ ಹಿಂದೆ ಇರುವಂತೆಯೇ ಮುಂದುವರಿಯಲಿದೆ. ಈ ಹಿಂದೆ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರವು ಕಚ್ಚಾ ತೈಲದ ವಿಂಡ್‌ಫಾಲ್ ತೆರಿಗೆಯನ್ನು ಶೂನ್ಯಕ್ಕೆ ಇಳಿಕೆ ಮಾಡಿದೆ. ಹಾಗೆಯೇ ಡೀಸೆಲ್ ಮೇಲಿನ ರಫ್ತು ಸುಂಕವನ್ನು 50 ಪೈಸೆ ಇಳಿಕೆ ಮಾಡಲಾಗಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹೊರಡಿಸಿದ ಅಧಿಸೂಚನೆಯ ಪ್ರಕಾರ ಸುಂಕವು 19 ಏಪ್ರಿಲ್ 2023 ರಿಂದ ಜಾರಿಗೆ ಬರಲಿದೆ.
ಈ ಹಿಂದೆ ನಡೆದ ಬೆಳವಣಿಗೆಗಳ ಬಗ್ಗೆ ತಿಳಿಯಿರಿ
ಜುಲೈನಲ್ಲಿ ಭಾರತವು ಗ್ಯಾಸೋಲಿನ್, ಡೀಸೆಲ್ ಮತ್ತು ಅವಿಯೇಷನ್ ಟರ್ಬೈನ್ ಫ್ಯೂಲ್ (ಎಟಿಎಫ್) ರಫ್ತುಗಳ ಮೇಲೆ ಕಚ್ಚಾ ತೈಲ ಉತ್ಪಾದಕರ ಸುಂಕಗಳ ಮೇಲೆ ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಿತ್ತು. ಅದಾದ ನಂತರ ಖಾಸಗಿ ಸಂಸ್ಕರಣಾಗಾರರು ಎಟಿಎಫ್ ಅನ್ನು ದೇಶೀಯವಾಗಿ ಮಾರಾಟ ಮಾಡುವ ಬದಲು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಲಾಭವನ್ನು ಗಳಿಸುವ ಉದ್ದೇಶವನ್ನು ಹೊಂದಿದ್ದರು.
ಈ ಕಾರಣದಿಂದಾಗಿ ಕೇಂದ್ರ ಸರ್ಕಾರವು ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಿತ್ತು. ವಿಂಡ್‌ಫಾಲ್ ತೆರಿಗೆಯು ಆರ್ಥಿಕ ವಿಸ್ತರಣೆಯಿಂದ ಲಾಭ ಪಡೆದ ವ್ಯವಹಾರಗಳು ಅಥವಾ ಆರ್ಥಿಕ ವಲಯಗಳ ಮೇಲೆ ಸರ್ಕಾರವು ವಿಧಿಸುವ ಹೆಚ್ಚುವರಿ ತೆರಿಗೆಯಾಗಿದೆ. ವರದಿಯ ಪ್ರಕಾರ, ಇಂಧನ ಕಂಪನಿಗಳ ಲಾಭದ ಮೇಲೆ ತೆರಿಗೆ ವಿಧಿಸುವ ರಾಷ್ಟ್ರಗಳಿಗೆ ಭಾರತವು ಕಳೆದ ವರ್ಷ ಸೇರಿದೆ.
ಹಲವಾರು ದೇಶಗಳು ಲಾಭವನ್ನು ಪಡೆಯುವ ಸಂಸ್ಥೆಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತದೆ. ಭಾರತವು ಕಳೆದ ವರ್ಷ ಜುಲೈನಲ್ಲಿ ಮೊದಲ ಬಾರಿಗೆ ವಿಂಡ್‌ಫಾಲ್ ಲಾಭ ತೆರಿಗೆಯನ್ನು ವಿಧಿಸಿತು. ಆ ಸಮಯದಲ್ಲಿ, ಪ್ರತಿ ಲೀಟರ್‌ಗೆ ರೂಪಾಯಿ 6 (ಪ್ರತಿ ಬ್ಯಾರೆಲ್‌ಗೆ 12 ಯುಎಸ್ ಡಾಲರ್) ರಫ್ತು ಸುಂಕವನ್ನು ಪೆಟ್ರೋಲ್ ಮೇಲೆ ಮತ್ತು ಡೀಸೆಲ್ ಮೇಲೆ ರೂಪಾಯಿ 13 (ಒಂದು ಬ್ಯಾರೆಲ್‌ಗೆ 26 ಯುಎಸ್ ಡಾಲರ್) ವಿಧಿಸಲಾಯಿತು.
ನಂತರ ಸರ್ಕಾರವು ಪೆಟ್ರೋಲ್ ಮೇಲಿನ ರಫ್ತು ತೆರಿಗೆಯನ್ನು ಮೊದಲ ವಿಮರ್ಶೆಯಲ್ಲಿ ರದ್ದುಗೊಳಿಸಿದೆ. ಎಟಿಎಫ್‌ನಲ್ಲಿ ಮಾರ್ಚ್ 4 ರಂದು ಕೊನೆಯ ವಿಮರ್ಶೆಯಲ್ಲಿ ತೆಗೆದುಹಾಕಲಾಯಿತು. ಹಿಂದಿನ ಎರಡು ವಾರಗಳಲ್ಲಿ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿ ಹದಿನೈದು ದಿನಗಳಿಗೊಮ್ಮೆ ತೆರಿಗೆ ದರಗಳನ್ನು ಪರಿಶೀಲಿಸಲಾಗುತ್ತದೆ.


Click it and Unblock the Notifications