For Quick Alerts
ALLOW NOTIFICATIONS  
For Daily Alerts

ವಿಪ್ರೊ 3ನೇ ತ್ರೈಮಾಸಿಕ ಹಣಕಾಸು ವರದಿ: ಲಾಭ 3 ಪರ್ಸೆಂಟ್ ಇಳಿಕೆ

|

ದೇಶದ ಮಾಹಿತಿ ತಂತ್ರಜ್ಙಾನ ಉದ್ದಿಮೆಯ ಖ್ಯಾತ ಕಂಪನಿಗಳಲ್ಲಿ ಒಂದಾದ ವಿಪ್ರೊ ಮಂಗಳವಾರ ಮೂರನೇ ತ್ರೈಮಾಸಿಕ ಹಣಕಾಸು ವರದಿ ಬಿಡುಗಡೆ ಮಾಡಿದ್ದು, ಕಂಪನಿಯ ಲಾಭವು ಇಳಿಕೆಯಾಗಿದೆ.

ವಿಪ್ರೊ ಕಂಪನಿಯ ಏಕೀಕೃತ ಲಾಭವು ಕಳೆದ ವರ್ಷಕ್ಕೆ ಹೋಲಿಸಿದರೆ 3.20 ಪರ್ಸೆಂಟ್ ಇಳಿಕೆಯಾದೆ. ವರ್ಷದ ಹಿಂದಿನ 2,510 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಹಣಕಾಸು ಅವಧಿಯಲ್ಲಿ 2,462.90 ಕೋಟಿ ರುಪಾಯಿಗಳ ಲಾಭ ಗಳಿಸಿದ್ದು, ಲಾಭ ಗಳಿಕೆಯಲ್ಲಿ ಇಳಿಕೆ ಕಂಡಿದೆ. ಇಟಿ ನೌ ಸಮೀಕ್ಷೆಯ ಪ್ರಕಾರ 2,450.80 ಕೋಟಿ ರುಪಾಯಿ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು.

ವಿಪ್ರೊ 3ನೇ ತ್ರೈಮಾಸಿಕ ಹಣಕಾಸು ವರದಿ: ಲಾಭ 3 ಪರ್ಸೆಂಟ್ ಇಳಿಕೆ

ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 2.73 ಪರ್ಸೆಂಟ್ ಹೆಚ್ಚಳವಾಗಿದ್ದು 15,470.50 ಕೋಟಿ ರುಪಾಯಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸಂಖ್ಯೆ 15,059.50 ಕೋಟಿ ರುಪಾಯಿಯಷ್ಟಿತ್ತು. ಐಟಿ ಸೇವೆಗಳ ಆದಾಯವು 2.97 ಪರ್ಸೆಂಟ್ ಏರಿಕೆಯಾಗಿದ್ದು, 15,100.60 ಕೋಟಿ ತಲುಪಿದೆ.

ವಿಪ್ರೊ ಕಂಪನಿಯ ಮಂಡಳಿಯು ಈಕ್ವಿಟಿ ಷೇರಿಗೆ 1 ರುಪಾಯಿ ಮಧ್ಯಂತರ ಲಾಭವನ್ನು ಘೋಷಿಸಿದೆ.

English summary

Wipro Q3 Results Profit Falls 3 Percent

Wipro Tuesday reported 3.20 percent year on year drop in profit at 2,462.90 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X