ಪ್ರಸ್ತುತ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ನಡುವೆ ವಿಪ್ರೋ ಸಂಸ್ಥೆಯು ಹೊಸದಾಗಿ ನೇಮಕಾತಿಯನ್ನು ಮಾಡಿದೆ. ಆದರೆ ಅರ್ಧದಷ್ಟು ವೇತನಕ್ಕೆ ಉದ್ಯೋಗಿಗಳನ್ನು ನೇಮಕಾತಿ ಮಾಡಲಾಗಿದೆ. ವಿಪ್ರೋದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಸೌರಭ್ ಗೋವಿಲ್ ಶೇಕಡ 92ರಷ್ಟು ಮಂದಿ ಅರ್ಧ ಸಂಬಳದಲ್ಲಿ ಐಟಿ ದೈತ್ಯಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಹೊಸ ಉದ್ಯೋಗವನ್ನು ಪಡೆಯುವವರು ಈ ಹಿಂದೆ ಆಫರ್ ನೀಡಿದ ವೇತನಕ್ಕಿಂತ ಅರ್ಧ ವೇತನಕ್ಕೆ ಸಂಸ್ಥೆಗೆ ಸೇರ್ಪಡೆಯಾಗಲು ಅಥವಾ ಉದ್ಯೋಗವನ್ನು ನಿರಾಕರಿಸಲು ಆಯ್ಕೆಯನ್ನು ನೀಡಲಾಗಿತ್ತು. ಈ ಪೈಕಿ ಶೇಕಡ 92ರಷ್ಟು ಉದ್ಯೋಗಿಗಳು ಅರ್ಧ ವೇತನಕ್ಕೆ ಉದ್ಯೋಗಕ್ಕೆ ಸೇರ್ಪಡೆಯಾಗಲು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಕ್ಕೆ ಮಾಹತಿ ನೀಡಿದ್ದಾರೆ.

ಐಟಿ ಬೆಹೆಮೊಥ್‌ನ ಮುಖ್ಯ ಎಚ್‌ಆರ್‌ಒ, ಫ್ರೆಶರ್‌ಗಳಿಗೆ ಪರಿಹಾರ ಪ್ಯಾಕೇಜ್‌ಗಳನ್ನು ಕಡಿಮೆ ಮಾಡುವ ಕಂಪನಿಯ ನಿರ್ಧಾರವನ್ನು "ಪಾರದರ್ಶಕತೆ" ಯಿಂದ ತೆಗೆದುಕೊಳ್ಳಲಾಗಿದೆ ಎಂದು ಒತ್ತಿಹೇಳಿದ್ದಾರೆ. ಸಂಸ್ಥೆಗೆ ಸೇರ್ಪಡೆಯಾಗಲು ಅಥವಾ ಈ ಆಫರ್ ಅನ್ನು ತಿರಸ್ಕಾರ ಮಾಡಲು ಆಯ್ಕೆಯನ್ನು ನೀಡಲಾಗಿದೆ ಎಂದು ವರದಿಯು ಹೇಳಿದ್ದಾರೆ. ಹಾಗೆಯೇ ಶೇಕಡ 92ರಷ್ಟು ಜನರು ಅರ್ಧ ವೇತನಕ್ಕೆ ಕೆಲಸವನ್ನು ಮಾಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ನಾವು ಅಭ್ಯರ್ಥಿಗಳ ಮೊದಲ ಬ್ಯಾಚ್ ಅನ್ನು ನೇಮಕಾತಿ ಮಾಡಿದ್ದೇವೆ. ಆ ಸಮಯದಲ್ಲಿ ನಮಗೆ ಹೊಸ ನೇಮಕಾತಿಯ ಅಗತ್ಯವಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ. ಆದರೂ ಕೂಡಾ ಕಡಿಮೆ ವೇತನವನ್ನು ನೀಡಿ ನಾವು ನೇಮಕಾತಿಯನ್ನು ಮಾಡುತ್ತಿದ್ದೇವೆ. ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಅವರಿಗೆ ಆಯ್ಕೆಯನ್ನು ನೀಡಿದ್ದೇವೆ. ಹಳೆಯ ಆಯ್ಕೆ ಜಾರಿಯಲ್ಲಿ ಇರುತ್ತದೆ. ಆದರೆ ನೇಮಕಾತಿಗಾಗಿ ಅವರು ಕಾಯಬೇಕಾಗುತ್ತದೆ ಅಥವಾ ಈಗಲೇ ಕಡಿಮೆ ವೇತನಕ್ಕೆ ಸೇರ್ಪಡೆಯಾಗಬಹುದು," ಎಂದು ವಿಪ್ರೋ ಎಚ್‌ಆರ್ ಮುಖ್ಯಸ್ಥರು ಹೇಳಿದರು.
"ಶೇಕಡ 92ರಷ್ಟು ಮಂದಿ ಕಡಿಮೆ ವೇತನಕ್ಕ ವಿಪ್ರೋ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಆದರೂ ಇನ್ನು ಕೆಲವರು ಈ ಆಯ್ಕೆಯನ್ನು ಮಾಡಿಲ್ಲ. ನಾವು ಸಂಸ್ಥೆಗೆ ಸೇರ್ಪಡೆ ಮಾಡಿದಾಗ ಅವರಿಗೆ 6.5 ಲಕ್ಷ ರೂಪಾಯಿ ವೇತನ ಎಂದು ನಿಗದಿಪಡಿಸಲಾಗಿತ್ತು. ನಾವು ಅತೀ ಪಾರದರ್ಶಕವಾಗಿದ್ದೇವೆ. ನಾವು ಯಾವುದೇ ವೇತನವನ್ನು ಕಡಿತ ಮಾಡಿಲ್ಲ. ನಾವು ಆಯ್ಕೆಯನ್ನು ಮಾತ್ರ ನೀಡಿದ್ದೇವೆ," ಎಂದು ಸೌರಭ್ ಗೋವಿಲ್ ತಿಳಿಸಿದ್ದಾರೆ.
ನಾವು ಸಂಸ್ಥೆಗೆ ಸೇರ್ಪಡೆ ಮಾಡಿದಾಗ ಅವರಿಗೆ 6.5 ಲಕ್ಷ ರೂಪಾಯಿ ವೇತನ ಎಂದು ನಿಗದಿಪಡಿಸಲಾಗಿತ್ತು. ಪ್ರಸ್ತುತ ಅತೀ ಕಡಿಮೆ ವೇತನಕ್ಕೆ ಅಂದರೆ 3.5 ಲಕ್ಷ ರೂಪಾಯಿ ವೇತನಕ್ಕೆ ವಿಪ್ರೋದಲ್ಲಿ ನೇಮಕಾತಿ ಮಾಡಲಾಗಿದೆ. ಆದರೆ ವಿಪ್ರೋದ ಈ ನಿರ್ಧಾರದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಸಂಸ್ಥೆಯು ಈ ಹೊಸ ಉದ್ಯೋಗಿಗಳ ತರಬೇತಿಗಾಗಿ ಪ್ರತಿ ವ್ಯಕ್ತಿಗೆ 30,000 ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ಈ ಹಿಂದೆ ಫೆಬ್ರವರಿ 16ರಂದು ಫ್ರೆಶರ್‌ಗಳಿಗೆ ಇಮೇಲ್ ಒಂದು ಬಂದಿದ್ದು, ಇದರಲ್ಲಿ ವಾರ್ಷಿಕವಾಗಿ 6.5 ಲಕ್ಷ ರೂಪಾಯಿ ವೇತನದ ಪ್ಯಾಕೇಜ್ ಎಂದು ತಿಳಿಸಲಾಗಿತ್ತು. ಆದರೆ ಫೆಬ್ರವರಿ 20ರಂದು ಕಳುಹಿಸಲಾದ ಇಮೇಲ್‌ನಲ್ಲಿ ವೇತನದ ಪ್ಯಾಕೇಜ್ ಅನ್ನು 3.5 ಲಕ್ಷ ರೂಪಾಯಿಗೆ ಇಳಿಸಲಾಗಿದೆ. ಈ ಪ್ಯಾಕೇಜ್ ಅನ್ನು ಒಪ್ಪಿಕೊಳ್ಳಲು ಡೆಡ್‌ಲೈನ್ ಅನ್ನು ಕೂಡಾ ನೀಡಲಾಗಿದೆ. ಅಂದರೆ ಗಡುವು ನೀಡಲಾಗಿತ್ತು.
"ನಾವು ಪ್ರಸ್ತುತ ಪ್ರೊಡ್ಜೆಕ್ಟ್ ಇಂಜಿನಿಯರ್ ಹುದ್ದೆಯನ್ನು ಹೊಂದಿದ್ದು, 3.5 ಲಕ್ಷ ರೂಪಾಯಿ ವಾರ್ಷಿಕ ವೇತನವನ್ನು ಆಫರ್ ಮಾಡಲಾಗುತ್ತದೆ. ಈ ಆಫರ್ ಅನ್ನು ನೀವು ಒಪ್ಪಿಕೊಳ್ಳುವುದಾದರೆ, ಈ ಹಿಂದಿನ ಎಲ್ಲ ಆಫರ್‌ಗಳು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ," ಎಂದು ಸಂಸ್ಥೆಯು ಇನ್ನೊಂದು ಇಮೇಲ್‌ನಲ್ಲಿ ಉಲ್ಲೇಖ ಮಾಡಲಾಗಿತ್ತು.


Click it and Unblock the Notifications