ಬ್ರಿಟನ್‌ನ 23 ವರ್ಷದ ಯುವತಿ ಜಿಮ್ಮಾ ನಿಕ್ಲಿನ್ ಕೋಟಿ ಬೆಲೆಬಾಳುವ ಮನೆಯನ್ನು ಗೆದ್ದ ಅದೃಷ್ಟವಂತೆ. ಜಿಮ್ಮಾ ನಿಕ್ಲಿನ್ ಟಿಕೆಟ್ ಒಂದನ್ನು ಖರೀದಿಸಿ ಈ ಕೋಟಿಗಟ್ಟಲೆ ಬೆಲೆ ಬಾಳುವ ಮನೆ ಒಡತಿಯಾಗಿದ್ದಾರೆ.
ಬ್ರಿಟನ್‌ನಲ್ಲಿ ಮೈಕೇಲ್ ಹಾಗೂ ಲಿಂಡಾ ಎಂಬ ದಂಪತಿ ಮನೆ ಮಾರಾಟ ಮಾಡಲು ಸಾಕಷ್ಟು ಪ್ರಯತ್ನಿಸಿತು. ಆದರೆ ಎಷ್ಟೇ ಕಷ್ಟಪಟ್ಟರು ಮನೆ ಮಾರಾಟ ಸಾಧ್ಯವಾಗಿರಲಿಲ್ಲ. ಕೊನೆಗೆ ಸ್ಪರ್ಧೆಯೊಂದನ್ನು ಏರ್ಪಡಿಸಿ ಮನೆ ಮಾರಾಟಕ್ಕೆ ಪ್ರಯತ್ನಿಸಿದರು.

ರಾಫೆಲ್ ಟಿಕೆಟ್ ಒಂದಕ್ಕೆ 2.61 ಡಾಲರ್ (186.39 ರುಪಾಯಿ)ಗೆ ನಿಗದಿಪಡಿಸಲಾಗಿತ್ತು. ಈ ಟಿಕೆಟನ್ನು ಖರೀದಿಸಿದವರಲ್ಲಿ 23 ವರ್ಷದ ಯುವತಿ ಜಿಮ್ಮಾ ನಿಕ್ಲಿನ್ ಕೂಡ ಒಬ್ಬರು. ನೂರಾರು ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ಆದರೆ ಕನಸಿನ ಮನೆ ಗೆದ್ದು ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದು ಜಿಮ್ಮಾ ನಿಕ್ಲಿನ್.

ನಾಲ್ಕು ಬೆಡ್‌ರೂಂಗಳ ಫಾರ್ಮ್ ಹೌಸ್ ಆಗಿರುವ ಈ ಕಂಟ್ರಿಸೈಡ್ ಮನೆಯಲ್ಲಿ ಗ್ರಂಥಾಲಯ, ಅಡುಗೆ ಮನೆ, ದೊಡ್ಡ ಲಿವಿಂಗ್ ರೂಂ, ಡೈನಿಂಗ್ ರೂಂ ಸೇರಿದಂತೆ ಅನೇಕ ಅನುಕೂಲಗಳಿವೆ.
ರಾಫೆಲ್ ಎಂದರೇನು?
ರಾಫೆಲ್ ಎನ್ನುವುದು ಜೂಜಿನ ಸ್ಪರ್ಧೆಯಾಗಿದ್ದು, ಇದರಲ್ಲಿ ಜನರು ನಂಬರ್ ಹೊಂದಿರುವ ಟಿಕೆಟ್‌ಗಳನ್ನು ಪಡೆಯುತ್ತಾರೆ. ಪ್ರತಿ ಟಿಕೆಟ್‌ಗೆ ಬಹುಮಾನ ಗೆಲ್ಲುವ ಅವಕಾಶವಿರುತ್ತದೆ. ಯಾವುದಾದರೂ ಒಂದು ಟಿಕೆಟ್‌ಗೆ ಮಾತ್ರ ಬಹುಮಾನದ ಸಂಖ್ಯೆಗಳನ್ನು ಲಗತ್ತಿಸಲಾಗಿರುತ್ತದೆ. ಡ್ರಾ ಮಾಡಿದ ಟಿಕೆಟ್‌ಗಳನ್ನು ಬಹುಮಾನಗಳ ಸಂಗ್ರಹದೊಂದಿಗೆ ಸಂಖ್ಯೆಗಳನ್ನು ಲಗತ್ತಿಸಲಾಗಿದೆ. ಅದೃಷ್ಟಶಾಲಿಗಳು ಬಹುಮಾನವನ್ನು ಗೆಲ್ಲುತ್ತಾರೆ.


Click it and Unblock the Notifications