ಕೊರೊನಾ ಲಾಕ್ ಡೌನ್ ನಿಂದಾಗಿ ಹಲವು ಕಂಪೆನಿಗಳು ಇನ್ನೂ ನಾಲ್ಕೈದು ತಿಂಗಳು ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿವೆ. ಕೆಲವು ಕಂಪೆನಿಗಳಂತೂ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಗೆ ಎಂದುಬಿಟ್ಟಿವೆ. ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ಭತ್ಯೆ ನೀಡಲಾಗುತ್ತಿದ್ದು, ಮನೆಯಲ್ಲೇ ಕಚೇರಿಯಂಥ ವಾತಾವರಣ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಟ್ಟಿವೆ.
ಅಗತ್ಯ ಪೀಠೋಪಕರಣ, ಇಂಟರ್ನೆಟ್ ಗೆ ಅಗತ್ಯ ಇರುವ ಹಾರ್ಡ್ ವೇರ್ ಗಳನ್ನು ನೀಡಿವೆ ಮತ್ತು ನೀಡುತ್ತಿವೆ. ಈ ಮಧ್ಯೆ ಉದ್ಯೋಗಿಗಳಿಗೆ ವಿದ್ಯುತ್ ಹಾಗೂ ಇಂಟರ್ ನೆಟ್ ಬಿಲ್ ಹೆಚ್ಚಿಗೆ ಬರುತ್ತಿರುವುದರಿಂದ ಅವನ್ನು ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಉದ್ಯೋಗಿಗಳು ಕೇಳುವ ಮುನ್ನವೇ ವರ್ಕ್ ಫ್ರಮ್ ಗೆ ಭತ್ಯೆಗಳನ್ನು ನೀಡಿರುವ ಕಂಪೆನಿಗಳ ಪಟ್ಟಿ ಮತ್ತು ಅವು ನೀಡಿರುವುದೇನು ಎಂಬ ವಿವರ ಇಲ್ಲಿದೆ.
ಗೂಗಲ್
2020ನೇ ಇಸವಿಯ ಕೊನೆ ತನಕ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿದೆ ಗೂಗಲ್. ಇದಕ್ಕಾಗಿ ಪೀಠೋಪಕರಣ, ಹಾರ್ಡ್ ವೇರ್ ಮತ್ತಿತರ ಅಗತ್ಯಗಳಿಗಾಗಿ ಪ್ರತಿ ಸಿಬ್ಬಂದಿಗೆ 1000 ಅಮೆರಿಕನ್ ಡಾಲರ್ ಮೀಸಲಿಟ್ಟಿದೆ. ಭಾರತದ ರುಪಾಯಿಗಳಲ್ಲಿ ಹೇಳಬೇಕು ಅಂದರೆ, 74,800ಕ್ಕಿಂತ ಸ್ವಲ್ಪ ಹೆಚ್ಚು.
ಉಬರ್
ಗೂಗಲ್ ರೀತಿಯಲ್ಲೇ ಉಬರ್ ನಿಂದಲೂ ಭತ್ಯೆ ನೀಡಲಾಗುತ್ತಿದೆ.
Bobble.in
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಂಪೆನಿಯಾದ Bobble.in ಒಂದು ಸಲಕ್ಕೆ ಉದ್ಯೋಗಿಗಳಿಗೆ ಭತ್ಯೆಯನ್ನು ಎತ್ತಿಟ್ಟಿದೆ.
G7 ಸಿಆರ್ ಟೆಕ್ನಾಲಜೀಸ್
ಬೆಂಗಳೂರು ಮೂಲದ ಈ ಕಂಪೆನಿ ತನ್ನ ಎಲ್ಲ ಉದ್ಯೋಗಿಗಳಿ 18,000 ರುಪಾಯಿ ಭತ್ಯೆಯನ್ನು ಘೋಷಣೆ ಮಾಡಿದೆ.

ಇದೇ ರೀತಿಯಲ್ಲಿ ಇನ್ನೂ ಹಲವು ಸ್ಟಾರ್ಟ್ ಅಪ್ ಕಂಪೆನಿಗಳು ಭತ್ಯೆಯನ್ನು ನೀಡಿವೆ. ಜತೆಗೆ ಉದ್ಯೋಗಿಗಳಿಗೆ ಅಗತ್ಯವಾದ ಪೀಠೋಪಕರಣ, ಹೈ ಸ್ಪೀಡ್ ಇಂಟರ್ ನೆಟ್ ಮತ್ತಿತರ ಸೌಕರ್ಯ ಒದಗಿಸುತ್ತಿದೆ. ಇನ್ನೂ ಕೆಲವು ಕಂಪೆನಿಗಳು ಕೆಲವು ಬ್ರ್ಯಾಂಡ್ ಗಳ ಜತೆ ಮಾತುಕತೆ ನಡೆಸಿ, ಅಗತ್ಯ ಕುರ್ಚಿಗಳನ್ನು ಉದ್ಯೋಗಿಗಳ ಅಗತ್ಯಕ್ಕೆ ತಕ್ಕಂತೆ ಖರೀದಿಸಿ, ನೀಡುತ್ತಿವೆ.


Click it and Unblock the Notifications