ಕಾರ್ಮಿಕರಿಗೆ ವೇತನ ಕಟ್, ಶಿಸ್ತು ಕ್ರಮದ ಎಚ್ಚರಿಕೆ

ಕೊರೊನಾ ಲಾಕ್ ಡೌನ್ ತೆರವಾದ ಮೇಲೆ ಇಂತಿಷ್ಟು ಸಮಯದಲ್ಲಿ ಕೆಲಸಕ್ಕೆ ವಾಪಸ್ ಆಗದಿದ್ದಲ್ಲಿ ಅಂಥ ಕಾರ್ಮಿಕರ ವೇತನ ಕಡಿತ, ಶಿಸ್ತು ಕ್ರಮ ಜರುಗಿಸುವುದಕ್ಕೆ ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಿಗೆ ಕೆಲವು ರಾಜ್ಯಗಳಲ್ಲಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

ಕಾರ್ಮಿಕರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಇಂಥ ಕ್ರಮಕ್ಕೆ ಮುಂದಾಗಬಹುದು ಎಂದು ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್ ನ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಈಗಾಗಲೇ ಕಾರ್ಮಿಕರ ಕಾನೂನು ಸಡಿಲಗೊಂಡಿದ್ದು, ಬೇಕಾದಂತೆ ಕೆಲಸಕ್ಕೆ ತೆಗೆದುಕೊಳ್ಳುವ ಮತ್ತು ಕೆಲಸದಿಂದ ತೆಗೆಯುವ ಸ್ಥಿತಿ ಇದೆ. ಏಕೆಂದರೆ, ಕಂಪೆನಿಗಳಿಗೆ ಕೆಲಸ ಸಲೀಸಾಗಿ ನಡೆಯಲು ಅನುಕೂಲ ಆಗಬೇಕು ಮತ್ತು ಆರ್ಥಿಕ ಚಟುವಟಿಕೆ ಆರಂಭಕ್ಕೆ ಸಮಸ್ಯೆ ಆಗಬಾರದು ಎಂದು ಹೀಗೆ ಮಾಡಲಾಗಿದೆ.

ಕಾರ್ಮಿಕರಿಗೆ ವೇತನ ಕಟ್, ಶಿಸ್ತು ಕ್ರಮದ ಎಚ್ಚರಿಕೆ

ನಿರ್ದೇಶನ ಸಿದ್ಧವಾಗಿದೆ. ಅದರ ಪ್ರಕಾರ ಫ್ಯಾಕ್ಟರಿ ಕಾಯ್ದೆಯು ಹತ್ತು ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದ್ದಲ್ಲಿ, ಉತ್ಪಾದನೆಗೆ ವಿದ್ಯುತ್ ಬಳಸುತಿದ್ದಲ್ಲಿ ಅಥವಾ ಇಪ್ಪತ್ತು ಅಥವಾ ಅದಕ್ಕಿಂತ ಹೆಚ್ಚು ಜನರಿದ್ದು, ವಿದ್ಯುತ್ ಬಳಕೆ ಮಾಡಿದರೂ ಅಥವಾ ಮಾಡದಿದ್ದರೂ ಈ ಕಾನೂನು ಅನ್ವಯ ಆಗುತ್ತದೆ.

ಇಂಥ ಘಟಕಗಳ ವಲಸಿಗ ಕಾರ್ಮಿಕರು ಯಾರು ವಾಪಸ್ ತವರೂರಿಗೆ ಹೋಗಿದ್ದಾರೋ ಅಥವಾ ಕೆಲಸ ಮತ್ತು ವೇತನದ ಅನಿಶ್ಚಿತತೆ ಕಾರಣಕ್ಕೆ ಹೊರಡಲು ತಯಾರಾಗಿ ಇದ್ದಾರೋ ಅಂಥವರಿಗೆ ಇದು ಅನ್ವಯ ಆಗುತ್ತದೆ. ಇಂಥ ನಿಯಮಗಳನ್ನು ಮಾಡುವುದರಿಂದ ಕಾರ್ಮಿಕರು ಮತ್ತೆ ಶೀಘ್ರವಾಗಿ ಕೆಲಸಕ್ಕೆ ಹಿಂತಿರುಗಬೇಕಾದ ಒತ್ತಡ ಬೀಳುತ್ತದೆ.

ಕೆಲಸ, ಸಂಬಳ ಇಲ್ಲದ ಕಾರಣಕ್ಕೆ ಹತ್ತಾರು ಲಕ್ಷ ಮಂದಿ ವಲಸಿಗ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಹಿಂತಿರುಗಿದ್ದಾರೆ. ಅಗತ್ಯ ಸಂಖ್ಯೆಯಲ್ಲಿ ಕಾರ್ಮಿಕರಿಲ್ಲದ ಕಾರಣಕ್ಕೆ ಕಾರ್ಖಾನೆಗಳನ್ನು ಆರಂಭಿಸುವುದು ಈಗ ಕಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+