ನಿರುದ್ಯೋಗಿಗಳಿಗೆ ಸಿಹಿಸುದ್ದಿ..ಬರೋಬ್ಬರಿ 17 ಕೋಟಿ ಉದ್ಯೋಗಳು ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ ಸೃಷ್ಟಿಯಾಗಲಿವೆ. ಆದರೆ, ಇದೇ ಅವಧಿಯಲ್ಲಿ 9.2 ಕೋಟಿ ಜನರು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಾಗಿದೆ ಯಾಕೆ? ಸ್ಫೋಟಕ ವರದಿಯಲ್ಲಿ ಮಾಹಿತಿ ಬಹಿರಂಗ ಯಾವುದು? ಇಲ್ಲಿದೆ ಮಾಹಿತಿ
ಹೌದು, ವಿಶ್ವದಲ್ಲಿ ಹೊಸದಾಗಿ ಬರೋಬ್ಬರಿ 17 ಕೋಟಿ ಉದ್ಯೋಗಳು ಸೃಷ್ಟಿಯಾಗುತ್ತೇವೆ. ಇನ್ನೂ 7.8 ಕೋಟಿ ಉದ್ಯೋಗಗಳಷ್ಟೇ ಸೃಷ್ಟಿಯಾದಂತೆ ಆಗುತ್ತದೆ ಎಂದು ದಾವೋಸ್‌ನಲ್ಲಿ ಇದೇ 20ರಿಂದ 25ರ ವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗೂ ಮೊದಲೇ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್ ) ವರದಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಇನ್ನೂ 2030ರ ಹೊತ್ತಿಗೆ ಜಗತ್ತಿನಲ್ಲಿ ಕೃಷಿ ಕಾರ್ಮಿಕರು ಮತ್ತು ಚಾಲಕರ ಹುದ್ದೆಗಳ ಪ್ರಮಾಣ ಹೆಚ್ಚಳವಾಗಲಿದೆ.ಆದರೆ ಅದೇ ವೇಳೆಗೆ ಕ್ಯಾಷಿಯರ್ ಮತ್ತು ಟಿಕೆಟ್ ಬುಕಿಂಗ್ ಕ್ಷೇತ್ರ ಸೇರಿ ಇತರೆ ವಲಯಗಳಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದು ವರದಿಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಬದಲಾವಣೆ
ಮುಂದಿನ ದಿನಮಾನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನಗಳು ಹೆಚ್ಚಿನ ಬದಲಾವಣೆಗಳನ್ನು ಕಾಣಬಹುದು.ಆದರೆ ಜಾಗತಿಕ ಬಿಕ್ಕಟ್ಟಿನಿಂದ ದೇಶದ ಆರ್ಥಿಕ ಬೆಳವಣಿಗೆಯು ಹೆಚ್ಚಿನ ಒತ್ತಡಕ್ಕೆ ಸಿಲುಕಿದೆ.ಇದರಿಂದ ಕೈಗಾರಿಕೆಗಳು ಮತ್ತು ವೃತ್ತಿಪರ ವಲಯಗಳಲ್ಲಿ ಉದ್ಯೋಗಗಳ ಸಂಖ್ಯೆಯಲ್ಲಿ ಕಡಿಮೆಯಾಗಬಹುದು ಎಂದು ವರದಿ ಬಹಿರಂಗಪಡಿಸಿದೆ.
ಈ ವರದಿಯನ್ನು ವಿಶ್ವ ಆರ್ಥಿಕ ವೇದಿಕೆಯ ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳ ದತ್ತಾಂಶ ಕ್ರೋಢೀಕರಿಸಿ ಸಿದ್ಧ ಮಾಡಿದೆ. ವ್ಯಾಪಾರ ವಿನಿಮಯದಲ್ಲಿ ಉದ್ಯೋಗಿಗಳಲ್ಲಿ ಕೌಶಲ ಕೊರತೆ ಇರುವುದು ಎದ್ದು ಕಾಣುತ್ತದೆ ಎಂದು ಅಧ್ಯಯನದಲ್ಲಿ ಅತಿ ಹೆಚ್ಚಾಗಿ ಕಂಡುಬಂದಿದೆ ಎಂದು ಅವರು ವರದಿಯಲ್ಲಿ ಅವರು ಹೇಳಿದ್ದಾರೆ.
ವರ್ಷಗಳು ಕಳೆದಂತೆ ಉದ್ಯೋಗ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ದತ್ತಾಂಶ ಸಂಗ್ರಹ ಮತ್ತು ಸೈಬರ್ ಭದ್ರತಾ ವಲಯವು ವೇಗವಾಗಿ ಬೆಳವಣಿಗೆ ಅಭಿವೃದ್ದಿಯನ್ನು ಸಾಧಿಸುತ್ತಿದ್ದೇವೆ.ಇದರಿಂದ ಮಾನವ ಕೌಶಲ್ಯದ ಕೊರತೆಯು ಉಂಟಾಗುತ್ತದೆ. ಉದ್ಯೋಗದ ವಲಯ ಹೆಚ್ಚಿನ ಯಶಸ್ಸು ಕಾಣಬೇಕೆಂದರೆ ಬದಲಾವಣೆ ಜೊತೆಗೆ ತಂತ್ರಜ್ಞಾನ ಹಾಗೂ ಮಾನವ ಕೌಶಲ ಅತ್ಯಗತ್ಯವಿದೆ ಎಂದು ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಶಿಕ್ಷಣ ವಲಯದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ
ಉದ್ಯೋಗ ಅವಕಾಶಗಳು ಆಹಾರ ಮತ್ತು ಶಿಕ್ಷಣ ವಲಯದಲ್ಲಿ ಅತಿ ಹೆಚ್ಚು ಸೃಷ್ಟಿಯಾಗಲಿವೆ. ಕೃತಕ ಬುದ್ಧಿಮತ್ತೆಯಿಂದ ಇಂಧನ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ ಎಂದು ವರದಿ ಮಾಗಿತಿಯನ್ನು ಹೇಳಿದೆ.
ಈಗಲೇ ದೇಶದಲ್ಲಿ ಇರುವ ಕಂಪನಿಗಳು ಕೃತಕ ಬುದ್ಧಿಮತ್ತೆ (ಎಐ), ಇಂಧನ ತಂತ್ರಜ್ಞಾನ, ರೊಬೊಟಿಕ್ಸ್ ಮತ್ತು ಅವಲಂಬನೆಯನ್ನು ನಿವಾರಿಸುವ ಸ್ವಾಯತ್ತ ವ್ಯವಸ್ಥೆಗಳ ಮೇಲೆ ಭಾರಿ ಹೂಡಿಕೆ ಮಾಡಿದ್ದಾರೆ. ಇದರಿಂದ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಹೊಸ ನೋಟ ಸೃಷ್ಟಿಯಾಗುತ್ತದೆ. ಆದರಿಂದ ಜಾಗತಿಕವಾಗಿ ಹೊಂದಿಕೆಯಾಗುವ ರೀತಿಯಲ್ಲಿಮುನ್ನಡೆಯಲು ಇವರು ಯೋಜಿಸುತ್ತಿದ್ದಾರೆ ಎಂದು ವಿಶ್ವ ಆರ್ಥಿಕ ವೇದಿಕೆ ವರದಿಯು ಭಾರತದಲ್ಲಿ ಉದ್ಯಮಶೀಲತೆಯ ಮುಂದಿನ ನಡೆಯ ಬಗ್ಗೆ ವಿವರಣೆಯ ಮಾಹಿತಿಯನ್ನು ಬಿಚ್ಚಿಟ್ಟಿದೆ.
ಕಂಪ್ಯೂಟಿಂಗ್ ತಂತ್ರಜ್ಞಾನ
ಸೆಮಿಕಂಡಕ್ಟರ್ ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನದಿಂದ ಭಾರತದಲ್ಲಿ ಶೇ. 35ಕ್ಕೂ ಹೆಚ್ಚು ಉದ್ಯೋಗದಾತರು ತಮ್ಮ ನಿತ್ಯದ ಕಾರ್ಯಗಳ ರೀತಿ ಬದಲಾಗುತ್ತದೆ ಎಂದು ಮಾಹಿತಿಯಲ್ಲಿ ತಿಳಿಸಿದ್ದಾರೆ. ಜಾಗತಿಕ ಸರಾಸರಿಗಿಂತಲೂ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿಶೇ. 21ರಷ್ಟು ಉದ್ಯೋಗದಾತರು ಕ್ವಾಂಟಮ್, ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ತಮ್ಮ ಕಾರ್ಯ ರೀತಿ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಐ ತಂತ್ರಜ್ಞಾನಕ್ಕೆ ಜಾಗತಿಕವಾಗಿ ಬೇಡಿಕೆ ಹೆಚ್ಚು
ಎಐ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವಲ್ಲಿ ಭಾರತ ಮತ್ತು ಅಮೆರಿಕ ಮುಂದಿವೆ ಎಂದು ಹೇಳಬಹುದು. ಭಾರತದಲ್ಲಿ ಕಾರ್ಪೊರೇಟ್ ಪ್ರಾಯೋಜಕತ್ವವು ಜೆನ್ ಎಐ ತರಬೇತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.ದೇಶದಲ್ಲಿ ಇನ್ನುಂದೆ ಪದವಿಗಿಂತಲೂ ಅಭ್ಯರ್ಥಿಗಳ ಕೌಶಲ್ಯಗಳನ್ನು ಆಧರಿಸಿ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವ ನಿರೀಕ್ಷೆ ಹೆಚ್ಚಾಗಿ ಇವೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications