For Quick Alerts
ALLOW NOTIFICATIONS  
For Daily Alerts

2100ನೇ ಇಸವಿ ಹೊತ್ತಿಗೆ ಹೇಗಿರುತ್ತದೆ ಗೊತ್ತಾ ಈ ವಿಶ್ವ?

|

2100ನೇ ಇಸವಿ ಹೊತ್ತಿಗೆ ಈ ಭೂಮಿ ಮೇಲಿನ ಜನಸಂಖ್ಯೆ 880 ಕೋಟಿ ಇರಲಿದೆ. ಇದು ವಿಶ್ವಸಂಸ್ಥೆಯು ಸದ್ಯಕ್ಕೆ ಅಂದಾಜು ಮಾಡಿರುವುದಕ್ಕಿಂತ 200 ಕೋಟಿಯಷ್ಟು ಕಡಿಮೆ ಎಂದು ಪ್ರಮುಖ ಅಧ್ಯಯನವೊಂದು ತಿಳಿಸಿದೆ. ಫಲವತ್ತತೆಯ ಪ್ರಮಾಣದಲ್ಲಿ ಇಳಿಕೆ ಆಗುವುದರಿಂದ ಜನಸಂಖ್ಯೆಯ ಮೇಲೆ ಪರಿಣಾಮ ಆಗಲಿದೆ ಎಂದು ಹೇಳಲಾಗಿದೆ.

 

ಈ ಶತಮಾನದ ಕೊನೆ ಹೊತ್ತಿಗೆ 195 ರಾಷ್ಟ್ರಗಳ ಪೈಕಿ 183 ದೇಶಗಳು ವಲಸಿಗರ ಪ್ರವೇಶವನ್ನು ನಿಷೇಧಿಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಜಪಾನ್, ಸ್ಪೇನ್, ಇಟಲಿ, ಥಾಯ್ಲೆಂಡ್ಮ್ ಪೋರ್ಚುಗಲ್, ದಕ್ಷಿಣ ಕೊರಿಯಾ ಮತ್ತು ಪೋಲೆಂಡ್ ಸೇರಿದಂತೆ ಇಪ್ಪತ್ತು ದೇಶಗಳ ಜನಸಂಖ್ಯೆ ಕನಿಷ್ಠ ಅರ್ಧದಷ್ಟು ಕಡಿಮೆ ಆಗಲಿದೆ.

ಆಫ್ರಿಕಾ ಖಂಡದ ಹಲವೆಡೆ ಆರ್ಥಿಕ ಅವಕಾಶ

ಆಫ್ರಿಕಾ ಖಂಡದ ಹಲವೆಡೆ ಆರ್ಥಿಕ ಅವಕಾಶ

ಇನ್ನು ಚೀನಾದ ಜನಸಂಖ್ಯೆ ಈಗಿರುವ 140 ಕೋಟಿಯಿಂದ ಮುಂದಿನ 80 ವರ್ಷಗಳಲ್ಲಿ 73 ಕೋಟಿಗೆ ಇಳಿಯಬಹುದು. ಆಫ್ರಿಕಾ ಖಂಡದಲ್ಲಿ ಮುನ್ನೂರು ಕೋಟಿ ಮಂದಿ ಆಗಬಹುದು. ಅದರಲ್ಲೂ ನೈಜೀರಿಯಾ ಒಂದರಲ್ಲೇ 2100ನೇ ಇಸವಿ ಹೊತ್ತಿಗೆ 80 ಕೋಟಿ ಆಗಬಹುದು. ಅದು ಭಾರತದ ಜನಸಂಖ್ಯೆಯ 110 ಕೋಟಿಗೆ ಹೋಲಿಸಿದಲ್ಲಿ ಎರಡನೇ ಸ್ಥಾನದಲ್ಲಿ ಇರುತ್ತದೆ ಎನ್ನಲಾಗಿದೆ. ಈ ಅಂಶಗಳಿಂದ ಕೆಲವು ಒಳ್ಳೆ ಸುದ್ದಿಯನ್ನು ಕಾಣಬಹುದು. ಪ್ರಕೃತಿ ಮೇಲೆ ಒತ್ತಡ ಕಡಿಮೆ ಆಗುತ್ತದೆ. ಆಹಾರ ಉತ್ಪಾದನೆ ಮೇಲೆ ಒತ್ತಡ ಕಡಿಮೆ ಆಗುತ್ತದೆ. ಕಾರ್ಬನ್ ಹೊರಸೂಸುವಿಕೆ ಇಳಿಕೆಯಾಗುತ್ತದೆ. ಉಪ ಸಹಾರಾ ಭಾಗದ ಆಫ್ರಿಕಾದ ಹಲವೆಡೆ ಆರ್ಥಿಕ ಅವಕಾಶಗಳು ದೊರೆಯುತ್ತವೆ ಎಂದು ವಾಷಿಂಗ್ಟನ್ ವಿ.ವಿ.ಯ ಕ್ರಿಸ್ಟೋಫರ್ ಮರೆ ತಿಳಿಸಿದ್ದಾರೆ.

ಆರ್ಥಿಕತೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ
 

ಆರ್ಥಿಕತೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಆಫ್ರಿಕಾ ಖಂಡದ ಹೊರಗೆ ಹಲವು ದೇಶಗಳಲ್ಲಿ ಕಾರ್ಮಿಕರ- ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ಇದು ಕೂಡ ನಿಂತಿರುವುದರಿಂದ ಆರ್ಥಿಕತೆ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎನ್ನುತ್ತದೆ ವರದಿ. ಆದ್ದರಿಂದ ಹೆಚ್ಚಿನ ಆದಾಯ ಇರುವ ದೇಶಗಳು ಜನಸಂಖ್ಯೆಯ ಮಟ್ಟವನ್ನು ಹಾಗೂ ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳಬೇಕು ಅಂದರೆ ವಲಸೆ ನಿಯಮಗಳನ್ನು ಸಡಿಲ ಮಾಡಬೇಕು. ಮಕ್ಕಳು ಮಾಡಿಕೊಳ್ಳುವ ಕುಟುಂಬಗಳಿಗೆ ಸಾಮಾಜಿಕ ಬೆಂಬಲ ನೀಡಬೇಕು ಎಂದು ವರದಿಯಲ್ಲಿ ಅಭಿಪ್ರಾಯ ದಾಖಲಿಸಲಾಗುತ್ತದೆ. 2050ನೇ ಇಸವಿ ಹೊತ್ತಿಗೆ ಚೀನಾದ ಜಿಡಿಪಿ ಯುನೈಟೆಡ್ ಸ್ಟೇಟ್ಸ್ ಅನ್ನು ದಾಟಿರುತ್ತದಂತೆ. ಆದರೆ 2100ನೇ ಇಸವಿ ಹೊತ್ತಿಗೆ ಮತ್ತೆ ಎರಡನೇ ಸ್ಥಾನಕ್ಕೆ ಜಾರಿರುತ್ತದೆ ಎನ್ನುತ್ತದೆ ಅಧ್ಯಯನ ವರದಿ. ಇನ್ನು ಭಾರತ ಜಿಡಿಪಿಯಲ್ಲಿ ಮೂರನೇ ಸ್ಥಾನದಲ್ಲಿ ಇರುತ್ತದಂತೆ. ಜಪಾನ್, ಜರ್ಮನಿ, ಫ್ರಾನ್ಸ್ ಹಾಗೂ ಯು.ಕೆ. ವಿಶ್ವದ ಟಾಪ್ ಟೆನ್ ಅತಿ ದೊಡ್ಡ ಆರ್ಥಿಕತೆ ಪಟ್ಟಿಯಲ್ಲಿ ಇರುತ್ತದಂತೆ.

ಭಾರತ, ನೈಜಿರೀಯಾ, ಚೀನಾ, US ಪ್ರಮುಖ ಶಕ್ತಿ

ಭಾರತ, ನೈಜಿರೀಯಾ, ಚೀನಾ, US ಪ್ರಮುಖ ಶಕ್ತಿ

ಈ ಶತಮಾನದ ಕೊನೆಗೆ ಭಾರತ, ನೈಜಿರೀಯಾ, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರಮುಖ ಶಕ್ತಿಗಳಾಗಿರುತ್ತವೆ ಎನ್ನುತ್ತಾರೆ ತಜ್ಞರು. ಇನ್ನೊಂದು ಆಸಕ್ತಿಕರ ಅಂಶ ಏನೆಂದರೆ, 2100ನೇ ಇಸವಿ ಹೊತ್ತಿಗೆ ಈ ವಿಶ್ವದಲ್ಲಿ 65 ವರ್ಷ ಮೇಲ್ಪಟ್ಟವರು 237 ಕೋಟಿ ಮಂದಿ ಇರುತ್ತಾರಂತೆ. 80 ವರ್ಷ ಮೇಲ್ಪಟ್ಟವರ ಸಂಖ್ಯೆ ಈಗಿನ 14 ಕೋಟಿಯಿಂದ 86.6 ಕೋಟಿಗೆ ಹೆಚ್ಚಿರುತ್ತದಂತೆ. ಚೀನಾದಲ್ಲಿ ಈಗ ದುಡಿಯುವ ವಯಸ್ಸಿನಲ್ಲಿ ಬರುವ 95 ಕೋಟಿ ಮಂದಿ ಇದ್ದಾರೆ. ಈ ಶತಮಾನದ ಕೊನೆಗೆ ಆ ಸಂಖ್ಯೆ 35 ಕೋಟಿ ಆಗಬಹುದು. ಇನ್ನು ಭಾರತದಲ್ಲಿ ಈಗ 76.2 ಕೋಟಿ ಮಂದಿ ದುಡಿಯುವ ವರ್ಗ ಇದ್ದು, ಅದು 57.8 ಕೋಟಿಗೆ, ನೈಜೀರಿಯಾದಲ್ಲಿ ಈಗ 8.6 ಕೋಟಿ ಇರುವ ಸಂಖ್ಯೆ 45 ಕೋಟಿಗೆ ಹೆಚ್ಚಳ ಆಗಬಹುದು ಎಂದು ಅಂದಾಜು ಮಾಡಲಾಗಿದೆ,

English summary

World Population, Economy Projection For 2100 By UN

How much will be the world population and economy projection for 2100? Here is an interesting study report by UN.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X