ಏಪ್ರಿಲ್ 1 ವಿಶ್ವದಲ್ಲೇ ಶುದ್ಧ ಪೆಟ್ರೋಲ್- ಡೀಸೆಲ್ ಬಳಕೆ ಭಾರತದಲ್ಲಿ ಆರಂಭದ ದಿನ

ಈ ವರ್ಷದ ಏಪ್ರಿಲ್ 1ನೇ ತಾರೀಕಿನಿಂದ ವಿಶ್ವದಲ್ಲೇ ಅತ್ಯಂತ ಶುದ್ಧ ಪೆಟ್ರೋಲ್- ಡೀಸೆಲ್ ಬಳಕೆ ಭಾರತದಲ್ಲಿ ಆರಂಭವಾಗಲಿದೆ. ಯುರೋ IVನಿಂದ ನೇರವಾಗಿ ಯುರೋ VIಗೆ ಮೇಲ್ದರ್ಜೆಗೆ ಏರಲಿದೆ ಇಂಧನದ ಗುಣಮಟ್ಟ. ಕೇವಲ ಮೂರೇ ವರ್ಷದಲ್ಲಿ ಈ ಸಾಧನೆ ಮಾಡಿದ ಜಗತ್ತಿನ ಅತಿ ದೊಡ್ಡ ಆರ್ಥಿಕತೆ ಎಂಬ ಶ್ರೇಯ ಭಾರತಕ್ಕೆ ಸಿಕ್ಕಿದೆ.

ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಲ್ಫರ್ ಅಂಶವಿರುವ ಬಿಎಸ್ VI ಪೆಟ್ರೋಲ್- ಡೀಸೆಲ್ ಉತ್ಪಾದನೆಯನ್ನು ಎಲ್ಲ ರಿಫೈನರೀಸ್ ಕಳೆದ ವರ್ಷದ ಕೊನೆಯಿಂದಲೇ ಆರಂಭಿಸಿದೆ. "ಬಿಎಸ್ VI ಇಂಧನವನ್ನು ಏಪ್ರಿಲ್ 1ರಿಂದ ಪೂರೈಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಇದೇ ದೇಶದಾದ್ಯಂತ ಎಲ್ಲ ಸಂಗ್ರಹಾಲಯಕ್ಕೂ ತಲುಪಿಸಲಾಗಿದೆ" ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

ಸಂಗ್ರಹಾಲಯದಿಂದ ಪೆಟ್ರೋಲ್ ಪಂಪ್ ಗಳಿಗೆ ಸರಬರಾಜು ಆರಂಭವಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಎಲ್ಲವೂ ಬಿಎಸ್ VI ಗ್ರೇಡ್ ನ ಪೆಟ್ರೋಲ್- ಡೀಸೆಲ್ ಹೊಂದಿರುತ್ತವೆ. ಬಿಎಸ್ IVನಿಂದ ಬಿಎಸ್ VI ನೇರವಾಗಿ ಮೇಲ್ದರ್ಜೆಗೆ ಏರಿದ್ದು, ಮಧ್ಯೆ ಒಂದು ಹಂತವನ್ನು ಮೀರಲಾಗಿದೆ. ಇಲ್ಲದಿದ್ದರೆ ಬಿಎಸ್ V ಎಂಜಿನ್ ಗೆ ಬೇಕಾದ ಇಂಧನದ ಉತ್ಪಾದನೆಗೆ ಖರ್ಚಾಗುತ್ತಿತ್ತು. ಜತೆಗೆ ಸಮಯವೂ ವ್ಯರ್ಥ ಆಗುತ್ತಿತ್ತು.

ಏ. 1 ವಿಶ್ವದಲ್ಲೇ ಶುದ್ಧ ಪೆಟ್ರೋಲ್- ಡೀಸೆಲ್ ಬಳಕೆ ಭಾರತದಲ್ಲಿ ಆರಂಭ

ಸಲ್ಫರ್ ಪ್ರಮಾಣ ಅತ್ಯಂತ ಕಡಿಮೆ ಇರುವ ತೈಲ ಉತ್ಪಾದಿಸಲು ಸರ್ಕಾರಿ ಸ್ವಾಮ್ಯದ ರಿಫೈನರಿಗಳು 35 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಖರ್ಚು ಮಾಡಿವೆ. ಬಿಎಸ್ VIನಲ್ಲಿ ಸಲ್ಫರ್ ಪ್ರಮಾಣ 10 ಪಿಪಿಎಂ ಇರುತ್ತದೆ. ಹೊರಸೂಸುವ ಹೊಗೆಯು ಸಿಎನ್ ಜಿಯಷ್ಟು ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+