ವಿಶ್ವದಲ್ಲೇ ಅತ್ಯಂತ ದುಬಾರಿ ಸಂಬಾರ ಪದಾರ್ಥ ಅಂದರೆ ಕೇಸರಿ. ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಕೇಜಿಗೆ 2.5ರಿಂದ 3 ಲಕ್ಷ ರುಪಾಯಿ ಇದೆ. ಏಕಿಷ್ಟು ದುಬಾರಿ ಎಂಬ ಪ್ರಶ್ನೆ ಬರಬಹುದು. ಒಂದು ಕೇಜಿ ಒಣ ಕೇಸರಿ ಉತ್ಪಾದನೆಗೆ 1.5 ಲಕ್ಷ ಹೂವಿನ ಬಳಕೆ ಆಗುತ್ತದೆ.
ಅಂದ ಹಾಗೆ, ಊಟ- ತಿಂಡಿಗಳಲ್ಲಿ ಬಳಸುವ ಸಂಬಾರ ಪದಾರ್ಥಗಳಲ್ಲಿ ರುಚಿ- ವಿಶೇಷ ಎರಡೂ ಇದೆ. ಅಡುಗೆ ಪ್ರಪಂಚದಲ್ಲಿ ಅವುಗಳಿಗೆ ತುಂಬ ವಿಶೇಷ ಸ್ಥಾನ. ಈ ವಿಶ್ವದಲ್ಲಿ ನಾನಾ ಬಗೆಯ ಸಂಬಾರ ಪದಾರ್ಥಗಳಿದ್ದು, ಅವುಗಳ ರುಚಿಯಿಂದಲೇ ಹೆಸರಾಗಿವೆ. ಆದರೆ ನೆನಪಿರಲಿ, ಇವುಗಳ ಬೆಲೆಯ ಕಾರಣಕ್ಕೂ ಖ್ಯಾತಿ ಪಡೆದಿದೆ ಎಂಬುದು ಹೌದು. ಅಂದ ಹಾಗೆ ಈ ಸಂಬಾರ ಪದಾರ್ಥಗಳ ಸಸಿಗಳು ಕೂಡ ವಿಶ್ವದ ಅತ್ಯಂತ ದುಬಾರಿ ಸಸಿಗಳು.
ಭಾರತದ ಪುಲ್ಬಾಮದಲ್ಲಿನ ಪಂಪೋರೆಯಲ್ಲಿ ಬೆಳೆಯುವುದನ್ನೂ ಸೇರಿಸಿ, ಫ್ರಾನ್ಸ್, ಸ್ಪೇನ್, ಇರಾನ್, ಇಟಲಿ, ಗ್ರೀಸ್, ಜರ್ಮನಿ, ಜಪಾನ್, ರಷ್ಯಾ, ಆಸ್ಟ್ರಿಯಾ, ತುರ್ಕಿಸ್ತಾನ್, ಚೀನಾ, ಪಾಕಿಸ್ತಾನ ಮತ್ತು ಸ್ವಿಟ್ಜರ್ಲೆಂಡ್ ಗಳಲ್ಲಿ ಸಂಬಾರ ಪದಾರ್ಥಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.
ಕಾಶ್ಮೀರ ಕೇಸರಿಗೆ ಕ್ರಿಸ್ತಪೂರ್ವ 5ನೇ ಶತಮಾನದ ಇತಿಹಾಸ
ಜನಪ್ರಿಯ ನಂಬಿಕೆಗಳ ಆಧಾರದಲ್ಲಿ ಹೇಳಬೇಕು ಅಂದರೆ, ಕಾಶ್ಮೀರಕ್ಕೆ ಕೇಸರಿ ಬಂದದ್ದು ಬೌದ್ಧ ಸನ್ಯಾಸಿ ಮಧ್ಯಂತಿಕ ಎಂಬುವರ ಮೂಲಕ. ಅದು ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ. ಅಲ್ಲಿಂದ ಭಾರತದ ಉಪಖಂಡಕ್ಕೆ ವ್ಯಾಪಿಸಿತು. ಕೇಸರಿಯನ್ನು ಆಹಾರಕ್ಕೆ ಮಾತ್ರ ಅಲ್ಲ, ಬಟ್ಟೆಗಳಿಗೆ ಬಣ್ಣವಾಗಿಯೂ ಬಳಸಲಾಗುತ್ತದೆ.
ಕೇಸರಿಯ ಮೂಲ ಸ್ಪೇನ್ ನಲ್ಲಿ
ಆದರೆ, ಕೆಲವು ನಂಬಿಕೆಗಳ ಪ್ರಕಾರ ಕೇಸರಿಯ ಮೂಲ ಇರುವುದು ದಕ್ಷಿಣ ಯುರೋಪ್ ದೇಶವಾದ ಸ್ಪೇನ್ ನಲ್ಲಿ. ಇವತ್ತಿಗೆ ವಿಶ್ವದಲ್ಲೇ ಅತಿ ಹೆಚ್ಚು ಕೇಸರಿ ಬೆಳೆಯುವುದು ಸ್ಪೇನ್ ನಲ್ಲಿ. ಕೇಸರಿ ಹೂವಿನ ಸುವಾಸನೆ ಅದೆಷ್ಟು ವಿಶೇಷ ಅಂದರೆ, ಬೆಳೆಯುವ ಸುತ್ತಮುತ್ತಲ ಪ್ರದೇಶದಲ್ಲೆಲ್ಲ ವ್ಯಾಪಿಸಿರುತ್ತದೆ. ಒಂದು ಹೂವಿನಲ್ಲಿ ಮೂರು ಕೇಸರಿ ಮಾತ್ರ ಕಂಡುಬರುತ್ತದೆ.
ಆಯುರ್ವೇದ ಔಷಧದಲ್ಲಿ ಬಳಕೆ
ಇನ್ನು ಕೇಸರಿಯನ್ನು ಆಯುರ್ವೇದದಲ್ಲಿ ಕೂಡ ಬಳಸಲಾಗುತ್ತದೆ. ಆಹಾರ ಖಾದ್ಯ ಹಾಗೂ ದೇವರ ಪೂಜೆಯಲ್ಲೂ ಕೇಸರಿಗೆ ಸ್ಥಾನ. ಅಷ್ಟೇ ಅಲ್ಲ, ಪಾನ್- ಗುಟ್ಕಾದಲ್ಲಿ ಸಹ ಬಳಸಲಾಗುವುದು. ಆಸ್ತಮಾ, ಕೆಮ್ಮು, ಒಣ ಕೆಮ್ಮು ಮತ್ತಿತರ ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದಾಗಲೂ ಇದನ್ನು ಬಳಸಲಾಗುತ್ತದೆ.


Click it and Unblock the Notifications